ಬೀದರ್

ಬಸವಣ್ಣನವರ 44 ವಚನಗಳ ಆಧಾರಿತ ಕನ್ನಡ/ಹಿಂದಿ ಭಾಷೆಯ ನೃತ್ಯ ರೂಪಕ ಪ್ರದರ್ಶನ

ಬೀದರ ನಗರದ ಡಾ.ಚನ್ನಬಸವಪಟ್ಟದೇವರು ಜಿಲ್ಲಾ ರಂಗ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಹಾಗೂ ರಾಷ್ರೀಯ ಬಸವದಳ ಇವರ ಸಂಯುಕ್ತಾಶ್ರಯದಲ್ಲಿ ಬಸವಪಂಚಮಿ ಹಾಗೂ ವಿಶ್ವ ಜಾನಪದ ದಿನಾಚರಣೆ ನಿಮಿತ್ಯ ಶ್ರೀ ಶಿವಕುಮಾರ ಕಲಾಸಂಘ (ರಿ) ಸಾಣೇಹಳ್ಳಿ ಹೊಸದುರ್ಗ ತಾಲುಕಾ ಚಿತ್ರದುರ್ಗ ಜಿಲ್ಲೆ ಇವರು  ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನದ ಅಂಗವಾಗಿ ಬಸವಣ್ಣನವರ 44 ವಚನಗಳ ಆಧಾರಿತ ಕನ್ನಡ/ಹಿಂದಿ ಭಾಷೆಯ ನೃತ್ಯ ರೂಪಕ ಪ್ರದರ್ಶನ ಮಾಡಿದರು ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಬಸವಲಿಂಗ ಪಟ್ಟದೇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಯ ನುಡಿಗಳನ್ನು ನುಡಿದರು.ಪೂಜ್ಯ ಶ್ರೀ ಗಂಗಾಬಿಕ ಅಕ್ಕನವರು ದಿವ್ಯ ಸಾನಿಧ್ಯ ವಹಿಸಿದರು,ಬೆಳಗಾವಿಯ ಪೂಜ್ಯ ಶ್ರೀ ಬಸವ ಗೀತಾ ತಾಯಿಯವರು ಕೂಡ ದಿವ್ಯ ಸಾನಿಧ್ಯ ವಹಿಸಿದ್ದರು ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ
ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಅಂಗಡಿ ರವರು ಕಾರ್ಯಕ್ರದ ಕುರಿತು ಪ್ರಾಸ್ತಾವಿಕವಾಗಿ ಮಾತಾನಾಡಿದರು.ಅದೆರೀತಿಯಾಗಿ ಕ.ಕ.ಕ.ಒಕ್ಕೂಟದ ಅದ್ಯಕ್ಷರಾದ ಶ್ರೀ ವಿಜಯಕುಮಾರ ಸೋನಾರೆ ರವರು ಮಾತಾನಾಡಿ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬಂದ ಕಲಾವಿದರಿಗೆ ವಾತ್ಸವ್ಯ ಮಾಡಲು ಸ್ಥಳದ ಸಮಸ್ಯೆ ಯಾಗುತಿದ್ದು ಕಲಾವಿದರ ವಾತ್ಸವ್ಯಕ್ಕೆ ಅನುಕೂಲವಾಗಲು 18 ಗುಂಟೆ ಜಮೀನು  ಒದಗಿಸಿ ಕೊಡಬೇಕೆಂದು ಈ ಹಿಂದೆ  ಜಿಲ್ಲಾಧಿಕಾರಿಗಳಿಗೆ ಅರ್ಜಿ ಕೊಡಲಾಗಿದ್ದು ಜಿಲ್ಲಾಧಿಕಾರಿಗಳ ಮೇಜಿನ ಮೇಲೆ ಕಡತ ಇದೆ, ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೆ ಮಂಜೂರು ಮಾಡಬೇಕೆಂದು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿಗಳಾದ ಮಾನ್ಯ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಶಿಲ್ಪಾ ಎಂ. ಪೊಲೀಸ ವರಿಷ್ಠ ಅಧಿಕಾರಿಗಳಾದ ಶ್ರೀ ಚನ್ನಬಸವಣ್ಣ ಲಂಗೋಟಿ,ಕನ್ನಡ ಸಾಹಿತ್ಯ ಪರಿಷ್ಯತ್ತಿನ ಅಧ್ಯಕ್ಷರಾದ ಶ್ರೀ ಸುರೇಶ ಚನ್ನಶೇಟ್ಟಿ,ಶ್ರೀ ಹಾವಶೆಟ್ಟಿ ಪಾಟೀಲ್,ಶ್ರೀ ವಿರೂಪಾಕ್ಷ ಗಾದಗಿ,ಕು. ಸ್ಪೂರ್ತಿ ಬಸವರಾಜ ಧನ್ನೂರ ಹಾಗೂ ಶ್ರೀ ರಾಹುಲಕುಮಾರ ಮಿಶ್ರಾ, ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ ಬಸವಣ್ಣನವರ ವಚನಗಳ ಕುರಿತ ನೃತ್ಯ ರೂಪಕವನ್ನು ಕೊಂಡಾಡಿದರು ಜೊತೆಗೆ  ಆದಷ್ಟು ಬೇಗ ಶ್ರೀ ವಿಜಯಕುಮಾರ ಸೋನಾರೆ ರವರು ಕಲಾವಿದರಿಗಾಗಿ ಬೇಡಿಕೆ ಇಟ್ಟಿರುವ ಜಮೀನು 18 ಗುಂಟೆ ಮಂಜೂರು ಮಾಡುವುದಾಗಿ ಆಶ್ವಾಸನೆ ನೀಡಿದರು.ಇದೆ ಸಂದರ್ಭದಲ್ಲಿ ಬರುವ ಸೆಪ್ಟೆಬಂರ್ 17 ರಂದು ಬಸವ ಕಲ್ಯಾಣದ ಕೋಟೆಯಲ್ಲಿ ಲೇಸರ್ ಲೈಟಿಂಗ್ ಶೋ ನಡೆಯಲಿದೆ ಬೀದರನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಕಲ್ಯಾಣಕ್ಕೆ ಬಂದು ಕಾರ್ಯಕ್ರಮವನ್ನು ವೀಕ್ಷಿಸಬೇಕೆಂದು ಮನವಿ ಮಾಡಿ ಕೊಂಡರು.ಈ ಸಂದರ್ಭದಲ್ಲಿ ನೃತ್ಯ ತಂಡದ ನಿರ್ದೇಶಕರು ಶ್ರೀಮತಿ ಸ್ನೇಹಾ ಕಪ್ಪಣ್ಣನ ಬೆಂಗಳೂರು ಇವರು ಹಾಗೂ ಶಿವಕುಮಾರ ಸ್ವಾಮಿ ಕಲಾ ಸಂಘದ ಮುಖ್ಯಸ್ಥರಾದ ಶ್ರೀ ವೈ.ಡಿ. ಬಾದಾಮಿ ಮತ್ತು ಎಲ್ಲಾ ಕಲಾವಿದರನ್ನು ಜಿಲ್ಲೆಯ ಅಧಿಕಾರಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಸೇರಿ ಸನ್ಮಾನಿಸಿದರು.ರಂಗ ಪ್ರೇಕ್ಷಕರಿಂದ ತುಂಬಿ ತುಳಕಿತು

Ghantepatrike kannada daily news Paper

Leave a Reply

error: Content is protected !!