ಬಸವಕಲ್ಯಾಣ ತಾಲೂಕಿನ ವಿವಿಧೆಡೆ ಸಂಸದ ಸಾಗರ್ ಖಂಡ್ರೆ ಭೇಟಿ :10 ಸೇತುವೆಗಳು ವೀಕ್ಷಣೆ
ಬಸವಕಲ್ಯಾಣ ತಾಲೂಕಿನ ವಿವಿಧಡೆ ಅತಿವೃಷ್ಟಿಯಿಂದ ಹಾನೀಗಿಡಾದ ಪ್ರದೇಶಗಳಿಗೆ ಶುಕ್ರವಾರ *ಸಂಸದ ಸಾಗರ್ ಖಂಡ್ರೆ ಅವರು ಹಾನಿ ಮಾಹಿತಿ ಕಲೆ ಹಾಕಿದರು. ತಾಲೂಕಿನ ಕೋಹಿನೂರ ಹೋಬಳಿಯ ಅಟ್ಟೂರ್‌ನಿಂದ ತಾಂಡಾಕ್ಕೆ ಹೋಗುವ ರಸ್ತೆ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಅಟ್ಟೂರ ಗ್ರಾಮದ ಸಣ್ಣ ಕೆರೆಯು ಸತತ ಮಳೆಯಿಂದಾಗಿ ಒಡೆದಿರುವುದರಿಂದ ಕೆರೆಯ ಕೆಳಗಡೆ ಇರುವ ಹೊಲಗದ್ದೆಗಳಿಗೆ ನೀರು ನುಗ್ಗಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದ್ದು ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ಬಸವಕಲ್ಯಾಣ್ ತಾಲೂಕಿನ ಕೊಹಿನೂರ್ ಹೋಬಳಿಯಲ್ಲಿ ಭಾರಿ ಮಳೆಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಟ್ಟೂರ ಹಾಗೂ ಕೋಹಿನೂರ ಕೆರೆಗಳು ಅತಿವೃಷ್ಟಿಯಿಂದ ಒಡೆದಿದ್ದು ಕೆರೆಯ ಅಕ್ಕಪಕ್ಕದ ಹೊಲಗದ್ದೆಗಳ ಮಣ್ಣಿನ ಮೇಲ್ಪದರದ ಸವೆತ ಅಥವಾ ಎರಡೂ ಬದಿಗಳ ನಾಲಾಗಳ ಪಕ್ಕದಭೂಮಿಯಲ್ಲಿ ಹೂಳುಶೇಖರಣೆಯಿಂದಾಗಿ ಫಲವತ್ತಾದ ಮಣ್ಣು ಹಾಳಾಗಿರುವದು ಕಂಡು ಬಂದಿದೆ. ಒಟ್ಟಾರೆ 10 ಸೇತುವೆಗಳು ಹಾನಿಗೊಳಗಾಗಿವೆ ಎಂದರು. ಹಾನಿಯೋಳಗಾದ ಟ್ಯಾಂಕ್ ಬಂಡಗಳ್ಳನ್ನು ಪುನಶ್ಚೇತನಗೊಳಿಸಿ ಸೇತುವೆ ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನ ನೀಡಿದರು. ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಪ್ರಕೃತಿ ವಿಕೋಪದಡಿ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.