ಬಂಡೆಪ್ಪ ಖಾಶೆಂಪುರ್ ಜನ್ಮದಿನ: ಮನ್ನಾಎಖೇಳ್ಳಿಯಲ್ಲಿ ಹಣ್ಣು ಹಂಪಲು ವಿತರಣೆ
ಬೀದರ್ (ಜೂ.16): ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ 60ನೇ ವರ್ಷದ ಜನ್ಮ ದಿನದ ಅಂಗವಾಗಿ ಶನಿವಾರ ಜೆಡಿಎಸ್ ಪಕ್ಷದ ಮುಖಂಡರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸಂಜುರೆಡ್ಡಿ ನಿರ್ಣಾ, ಜೆಡಿಎಸ್ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬೊಮ್ಮಗೊಂಡ ಚಿಟ್ಟಾವಾಡಿ, ಪ್ರಮುಖರಾದ ಸಂತೋಷ ರಾಸೂರು, ಅಶೋಕ ಕಾಗೆ, ರಾಜು ಬೋರಾಳ, ನಾಗರಾಜ ನಾಟಿಕಾರ್, ಗೋಪಾಲರೆಡ್ಡಿ, ರವಿ ಸಿರ್ಸಿ, ರೇವಣ್ಣಸಿದ್ದಪ್ಪ ಸಿರಕಟನಳ್ಳಿ, ಮಲ್ಲಪ್ಪ ಮನ್ನಾಎಖೇಳ್ಳಿ, ಪುಟ್ಟರಾಜ ರೇಕುಳಗಿ, ಸಲೀಂ ಚಿಕನ್, ಕ್ರಿಸ್ಟೋಫರ್ ರೇಕುಳಗಿ, ಪ್ರೇಮ್ ಬೋರಾಳ ಸೇರಿದಂತೆ ಅನೇಕರಿದ್ದರು.