ಬೀದರ್

ಫಿಟ್ನೆಸ್ ಕೇಂದ್ರ ಉದ್ಘಾಟಿಸಿದ ಪ್ರೊ.ಕೆ.ಸಿ.ವೀರಣ್ಣ

ಬೀದರ, ಜುಲೈ.13 : ಪಠ್ಯದ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಮುತುವರ್ಜಿ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರೊ.ಕೆ.ಸಿ.ವೀರಣ್ನ ಸಲಹೆ ನೀಡಿದರು.
ಅವರು ಶನಿವಾರ ವಸತಿ ನಿಲಯದ ವತಿಯಿಂದ ಆಯೋಜಿಸಲಾಗಿದ್ದ ಬೀದರನ ಕಮಠಾಣ ಸಮೀಪದ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ನಂದಿನಗರ ಆವರಣದಲ್ಲಿ ಸಮುದಾಯ ಫಿಟ್ನೆಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ನೊಯಿಡಾ ಆಧಾರಿತ ರಾಷ್ಟ್ರೀಯ ರಸಗೊಬ್ಬರ ಉತ್ಪಾದನೆ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ, ಸಮುದಾಯ ಫಿಟ್ನೆಸ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಬೀದರ್ ಜಿಲ್ಲೆಯ ಮಾಜಿ ಸಂಸದ ಭಗವಂತ್ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಸದರಿ ಯೋಜನೆಗೆ ಅನುಮೋದನೆ ನೀಡಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ಬಸವರಾಜ್ ಭತಮುರ್ಗೆ, ಡಾ. ಎಂ ಕೆ. ತಾಂದಳೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!