ಪ್ರೇಮ ಹಾಗೂ ಪವಿತ್ರತೆಯ ಸಂದೇಶವೇ ರಕ್ಷಾ ಬಂಧನ: ಪ್ರತಿಮಾ ಬಹೆನ್‍ಜಿ
ಬೀದರ್: ಪ್ರೇಮ ಹಾಗೂ ಪವಿತ್ರತೆಯ ನಿಜವಾದ ಸಂದೇಶವೇ ರರ್ಖóಅ ¨S್ಪಮಧನವೆಂದು ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ನುಡಿದರು.
ಭಾನುವಾರ ನಗರದ ಜನವಾಡ ರಸ್ತೆಯಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದಲ್ಲಿ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನಲ್ಲಿ ಇಂದು ಎಲ್ಲ ಸಂಪತ್ತು ಇದ್ದರೂ ಖಾಲಿ ಖಾಲಿಯಾಗಿ ಬದುಕುತ್ತಿರುವನು. ಎನೆಲ್ಲ ಇದ್ದರೂ ಎಲ್ಲವನ್ನು ಕಳೆದುಕೊಂಡಂತೆ ಸಾಯುವ ಬಗ್ಗೆ ಸಹ ವಿಚಾರ ಮಾಡುವ ಮಟ್ಟಿಗೆ ತಲುಪಿರುವುದು ದುರದೃಷ್ಟಕರ ಸಂಗತಿ ಎಂದರು.
ಇಂದು ಮನುಷ್ಯ ನಿದ್ರೆ ಇಲ್ಲದೆ, ಉಂಡ ಆಹಾರ ಸಹ ಕರಗದೇ ಪಚನಕ್ರಿಯೆ ಕೆಲಸ ಮಾಡುತ್ತಿಲ್ಲ. ಸದಾ ನಕಾರಾತ್ಮಕ ಚಿಂತನೆ ಮಾಡುತ್ತ ತನ್ನತನ ಸಂಪೂರ್ಣ ಮರೆತು ಇಂದು ದೇವರನ್ನು ಸಹ ಮರೆತಿದ್ದಾನೆ. ವಿಕೃತ ಮನಸ್ಸು ಬೆಳೆಸಿಕೊಂಡು ‘ತಾನು ಕೆಡುವುದಲ್ಲದೇ ಸಮಾಜ ಕೆಡಿಸಿತು ಎನ್ನುವಂತೆ’ ಇಂದು ಮನುಷ್ಯ ಮನುಷ್ಯನನ್ನು ಹಿಂಸಿಸುವ ಮೂಲಕ ಸಪ್ತ ಗುಣಗಳನ್ನು ಮರೆತಿರುವನು ಎಂದರು.
ಹಿಂದೆ ಬ್ರಾಹ್ಮಣರು ಪ್ರತಿ ಮನೆಗಳಿಗೆ ಹೋಗಿ ರಕ್ಷಾ ಸುತ್ರ ಕಟ್ಟಿ ನಿಮ್ಮ ಮನೆ ಪವಿತ್ರವಾಗಿರಲಿ ಎಂದು ಆಶಿರ್ವದಿಸುತ್ತಿದ್ದರು. ನಂತರ ತ್ರೇತಾಯುಗದಲ್ಲಿ ಇಂದ್ರಾಯಣಿಯು ದೇವೇಂದ್ರನಿಗೆ ತಿಲಕವನ್ನಿಟ್ಟು ರಕ್ಷಾ ಸುತ್ರ ಕಟ್ಟಿದ್ದರಿಂದ ಅಸುರರ ಸಂಹಾರ ಮಾಡಿದನು. ಇಂದು ಸಹೋದರಿಯರು ತಮ್ಮ ಸಹೋದರನಿಗೆ ಯಶಸ್ವಿಯಾಗಲಿ, ಅವರ ಬಾಳು ಬೆಳಗಲಿ ಎಂದು ಹರಸಿ ರಾಖಿ ಕಟ್ಟಲಾಗುತ್ತದೆ. ವಿಶ್ವದಲ್ಲಿ ಅಣ್ಣ-ತಂಗಿಯರ ಪವಿತ್ರ ಸಂಬಂಧ ಬೇರೆ ಯಾವುದಕ್ಕೂ ಸಮವಾಗದು. ರಕ್ಷಾ ಸುತ್ರ ಕಟ್ಟುವುದರಿಂದ ಕಲ್ಮಶವಾದ ಮನಸ್ಸು ಪವಿತ್ರವಾಗುತ್ತದೆ. ಪ್ರೇಮಭಾವ ಜಾಗೃತವಾಗುವುದಲ್ಲದೇ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ದುರ್ಬಲವಾದ ಮನಸ್ಸು ಶಾಂತವಾಗುತ್ತದೆ. ಎಂದರು.
ರಾಜಯೋಗ ಶಿಬಿರದಿಂದ ಮನುಷ್ಯನ ಮನ ಪರಿವರ್ತನೆಯಾಗುತ್ತದೆ, ವಿಕೃತವಾದ ಮನಸ್ಸು ಸಕಾರಾತ್ಮಕವಾಗಿ ಸ್ಪಂದಿಸುತ್ತದೆ, ಮನಸ್ಸು ಹಾಗೂ ಬುದ್ದಿ ಎರಡು ಸಧೃಢ ಹಾಗೂ ಸಶಕ್ತವಾಗಿ ಜ್ಞಾನ ಸಂಪನ್ನನಾಗಬಲ್ಲನು. ಸಂತರ ಹಾಗೂ ಸಜ್ಜನರ ಸಮಾಗಮದತ್ತ ಕೊಂಡೊಯ್ಯುತ್ತದೆ. ಇದರಿಂದ ಸ್ವಯಂ ಜಾಗೃತರಾಗಿ ವಿಶ್ವ ಪರಿವರ್ತನಕ್ಕೆ ಕೈ ಜೋಡಿಸುವರು ಎಂದವರು ತಿಳಿಸಿದರು.
ಬ್ರಹ್ಮಕುಮಾರಿ ಕೇಂದ್ರ ಪಾವನಧಾಮದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಈ ವರ್ಷದ ವಿಷಯ ವಸ್ತುವಾದ ‘ಅಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಛ ಹಾಗೂ ಆರೋಗ್ಯಯುತ ಸಮಾಜ ನಿರ್ಮಾಣ’ ಎಂಬ ವಿಚಾರವಾಗಿ ಮಾತನಾಡಿ, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಕಳೆದ 88 ವರ್ಷಗಳಿಂದ ವಿಶ್ವದ 140 ದೇಶಗಳಲ್ಲಿ ಕೇವಲ ಸಹೋದರಿಯರಿಂದ ನಡೆಯಲ್ಪಡುವ ಜಗತ್ತಿನ ಎಕೈಕ ಸಂಸ್ಥೆ ಇದಾಗಿದೆ. ಇದು 26 ವಿಭಾಗಗಳಲ್ಲಿ ಕೆಲಸ ಮಾಡುತ್ತದೆ ಎಂದರು.
ರಕ್ಷಾ ಬಂಧನದ ಬಗ್ಗೆ ಮಾತನಾಡಿರುವ ಅವರು, ರಕ್ಷಾ ಬಂಧನವು ಎಲ್ಲಾ ಹಬ್ಬಗಳಲ್ಲಿ ವಿಶಿಷ್ಟವಾದ ಹಬ್ಬ ಮಾತ್ರವಲ್ಲದೆ, ಇದು ಭಾರತದ ಸಂಸ್ಕøತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ, ಅನೇಕ ಅಧ್ಯಾತ್ಮಿಕ ರಹಸ್ಯಗಳನ್ನು ಹೊಂದಿರುವುದರ ಜೊತೆಗೆ ಸಾರ್ವತ್ರಿಕ ಸಹೋದರ-ಸಹೋದರಿ ಸಂಬಂಧವನ್ನು ಗಟ್ಟಿ ಮಾಡುವ ಪರಮಾತ್ಮನ ಪ್ರೀತಿಯ ಕೊಡುಗೆಯಾಗಿದೆ ಎಂದರು.ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ ಚಿಮಕೊಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರದ ಪ್ರವರ್ತಕಿ ಬಿ.ಕೆ ಮಹಾನಂದಾ ರಾಜಯೋಗ ಅಭ್ಯಾಸ ಮಾಡಿದರೆ, ಬಿ.ಕೆ ಉಷಾ ಕಾರ್ಯಕ್ರಮ ನಿರೂಪಿಸಿದರು. ನಂತರ ಕೇಂದ್ರದ ಸಹೋದರಿಯರು ನೆರೆದವರಿಗೆಲ್ಲ ತಿಲಕವನಿಟ್ಟು, ರಾಖಿ ಕಟ್ಟಿ ಪ್ರಸಾದ ವಿತರಿಸಿದರು.