ಬೀದರ್

ಪ್ರವಚನ ಆಲಿಕೆಯಿಂದ ಮನ ಭಾವಶುದ್ಧವಾಗುತ್ತದೆ – ಸಾಗರ ಖಂಡ್ರೆ

ಬೀದರ: ಶ್ರಾವಣ ಮಾಸ ಇದು ಅತ್ಯಂತ ಪವಿತ್ರವಾದ ಮಾಸ. ವರ್ಷಪೂರ್ತಿ ತನಗಾಗಿ ಬದುಕಿದ ವ್ಯಕ್ತಿಗಳು ಕನಿಷ್ಠ ಶ್ರಾವಣ ಮಾಸದಲ್ಲಿ ಒಂದು ತಿಂಗಳುಗಳ ಕಾಲ ದೇವರು, ಧರ್ಮ ಮತ್ತು ಆಧ್ಯಾತ್ಮದಲ್ಲಿ ಪಾಲ್ಗೊಂಡು ಮನಸ್ಸಿಗೆ ಶಾಂತಿ ನೆಮ್ಮದಿ ತಂದುಕೊಳ್ಳಲಿ ಎಂಬುದು ಇದರ ಮುಖ್ಯ ಉದ್ದೇಶ. ಪ್ರವಚನ ಆಲಿಸುವುದರಿಂದ ಮಾನಸಿಕ ನೆಮ್ಮದಿ ಮತ್ತು ಸಂತೃಪ್ತಿ ಲಭಿಸುತ್ತದೆ ಎಂದು ಸಂಸದ ಸಾಗರ ಖಂಡ್ರೆ ನುಡಿದರು.
ಯುವ ರಾಷ್ಟಿçÃಯ ಬಸವ ದಳ, ಲಿಂಗಾಯತ ಸಮಾಜ ಮತ್ತು ಕ್ರಾಂತಿಗAಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ಶಿವನಗರದಲ್ಲಿ ಪೂಜ್ಯ ಸತ್ಯಾದೇವಿ ಮಾತಾಜಿ ಅವರಿಂದ ಗುರುವಾರ ಆಯೋಜಿಸಿದ ಶ್ರಾವಣ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟಿçÃಯ ಬಸವ ದಳ ನಿರಂತರವಾಗಿ ಬಸವ ತತ್ವದ ಪ್ರಚಾರ ಪ್ರಸಾರ ಮಾಡಿಕೊಂಡು ಬರುತ್ತಿದೆ. ಬಸವಮಂಟಪ ನಿರ್ಮಾಣಕ್ಕಾಗಿ ಅನುದಾನದ ಬೇಡಿಕೆಯನ್ನು ಪೂಜ್ಯರು ಇಟ್ಟಿದ್ದಾರೆ. ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಾನು ಮಾಡುತ್ತೇನೆ ಎಂದು ಸಾಗರ ಭರವಸೆ ನೀಡಿದರು.
ಶ್ರಾವಣ ಮಾಸದ ಒಂದು ತಿಂಗಳುಗಳ ಕಾಲ ಅಕ್ಕನ ಯೋಗಾಂಗ ತ್ರಿವಿಧಿ ಪ್ರವಚನ ನಡೆಸಿಕೊಟ್ಟ ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿಯವರು ಮಾತನಾಡಿ ಒಂದು ಧರ್ಮ ಉಳಿಯಬೇಕಾದರೆ ಧರ್ಮಗುರು, ಧರ್ಮಸಾಹಿತ್ಯ ಮತ್ತು ಧರ್ಮಕ್ಷೇತ್ರಗಳ ಆರಾಧನೆ ಅತ್ಯವಶ್ಯಕ. ಪೂಜ್ಯ ಲಿಂಗಾನAದ ಸ್ವಾಮಿಗಳು ಹಾಗೂ ಪೂಜ್ಯ ಮಾತಾಜಿಯವರು ತಮ್ಮ ಭಾವಚಿತ್ರಕ್ಕಿಂತ ಬಸವಣ್ಣನವರ ಭಾವಚಿತ್ರವನ್ನೇ ಜಗತ್ತಿನಲ್ಲಿ ಮೆರೆಸಿದರು. ಬಸವಣ್ಣನವರನ್ನು ವಿಶ್ವಗುರು ಎಂದು ಪ್ರಚಾರ ಮಾಡಿದ್ದರು. ಆದ್ದರಿಂದಲೇ ಇಂದು ವಿಶ್ವದ ಹಲವೆಡೆ ಬಸವೇಶ್ವರರ ಪುತ್ಥಳಿ ಅನಾವರಣಗೊಂಡಿವೆ ಎಂದು ತಿಳಿಸಿದರು.
ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಒಂದು ದೇಶ ಕಲ್ಯಾಣ ರಾಜ್ಯವಾಗಬೇಕಾದರೆ ಯುವಕರು, ಧರ್ಮಚಿಂತಕರು ಹಾಗೂ ರಾಜಕೀಯ ಧುರೀಣರು ಪ್ರಮುಖ ಕಾರಣರಾಗುತ್ತಾರೆ. ಈ ಮೂವರ ಸಮಚಿತ್ತ ಒಂದುಗೂಡಿದರೆ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ. ದಕ್ಷಿಣ ಭಾರತದಲ್ಲಿ ಹುಟ್ಟಿದ ಬೃಹತ್ ಏಕೈಕ ಧರ್ಮ ಅದು ಲಿಂಗಾಯತ. ಆರ್ಯರು ನಮ್ಮನ್ನು ರಾಕ್ಷಸರು ಎಂದು ಕರೆಯುತ್ತಾರೆ. ಆದ್ದರಿಂದ ಬಸವಣ್ಣನವರು ಕೊಟ್ಟ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕಾದರೆ ಸಾಗರ ಖಂಡ್ರೆಯವರು ಸಂಸತ್‌ನಲ್ಲಿ ಈ ಕುರಿತು ಧ್ವನಿ ಎತ್ತಿದಾಗ ದಕ್ಷಿಣ ಭಾರತದ ನಾಯಕರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಔರಾದ ವಿಧಾನಸಭಾ ಕ್ಷೇತ್ರದ ನಾಯಕ ಡಾ.ಭೀಮಸೇನರಾವ ಶಿಂಧೆ, ಶಿವರಾಜ ಪಾಟೀಲ ಅತಿವಾಳ, ಬಸವಂತರಾವ ಬಿರಾದಾರ,  ನಿರ್ಮಲಾ ನಿಲಂಗೆ, ಸಿದ್ರಾಮಪ್ಪ ಕಪಲಾಪುರ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಬಸವರಾಜ ಸಂಗಮದ್, ಸತೀಶ ಪಾಟೀಲ, ಗಣಪತಿ ಬಿರಾದಾರ, ಶ್ರೀನಾಥ ಕೋರೆ, ಅಣವೀರ ಕೊಡಂಬಲ್, ಗಣಪತಿ ದೇಶಮುಖ, ಮಲ್ಲಿಕಾರ್ಜುನ ಜೈಲರ್, ನಾಗಯ್ಯ ಸ್ವಾಮಿ ಸಿದ್ದೇಶ್ವರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಾ ಹಾಗೂ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಶರಣ ಶರಣೆಯರು ಪಾಲ್ಗೊಂಡಿದ್ದರು.

Ghantepatrike kannada daily news Paper

Leave a Reply

error: Content is protected !!