ಪ್ರಥಮ ಶೈಕ್ಷಣಿಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಪೂರ್ಣಿಮಾ ಜಿ ಅವರಿಗೆ ಗೌರವ ಸನ್ಮಾನ
ಡಾ. ಪೂರ್ಣಿಮಾ ಜಿ ಅವರು ತಮ್ಮ ಬದುಕಿನ ಬವಣೆ ಬದಿಗೊತ್ತಿ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ನಡು ಕಟ್ಟಿ ನಿಂತು ಸಾವಿರಾರು ಮಕ್ಕಳ ಭವಿಷತ್ತಿಗೆ ಪ್ರಮುಖ ಕಾರಣರು. ಅವರ ಶೈಕ್ಷಣಿಕ ಸೇವೆ ಪರಿಗಣಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವ ಪ್ರಯುಕ್ತ ಅವರನ್ನು ಅಭಿನಂದಿಸಿ ಗೌರವಿಸಿದೆ.
ಬಸವ ಕೇಂದ್ರದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪೂರ್ಣಿಮಾ ಜಿ ನಾನು ಕಂಡ ಕನಸು ಬಹುಶಃ ನನಸಾಗಿದೆಯೋ ಇಲ್ಲವೋ ನಾನರಿಯೆ, ಆದರೆ ನನಗೆ ಜಿಲ್ಲೆಯ ಮಕ್ಕಳು ಗುಣಾತ್ಮಕ ಶಿಕ್ಷಣ ಕಲಿತು ಭವಿಷ್ಯ ರೂಪಿಸಿ ಕೊಳ್ಳಲು ನನ್ನ ಸೇವೆ ಸಾರ್ಥಕವಾಗಿರುವುದು. ಒಂದು ಹೆಮ್ಮೆ. ನಾನಂತು ಸರ್ವಾಧ್ಯಕ್ಷ ಆಗುತ್ತೇನೆಂಬ ವಿಷಯ ಕನಸು ಮನಸಿನಲ್ಲೂ ವಿಚಾರ ಮಾಡಲಿಲ್ಲ, ಆದರೆ ಪರಿಷತ್ತನವರ ದೂರದೃಷ್ಟಿ ಹೊಸ ಆಲೋಚನೆ ಇದಾಗಿದೆ. ಹೆಣ್ಣುಮಕ್ಕಳು ಇಂದು ಮುಂದೆ ಬಂದು ಕೆಲಸ ಮಾಡುವುದು ಬಹಳ ಸಂಕಷ್ಟ ಆದರೆ ಬೀದರ ಎಲ್ಲ ಸಹೃದಯಿ ಬಂಧುಗಳು ನಾ ಹಾಕಿಕೊಂಡ ಪ್ರತಿಯೊಂದು ಶೈಕ್ಷಣಿಕ ಅಭಿವೃದ್ಧಿಗೆ ಕೈ ಹಿಡಿದು ಮುನ್ನಡೆಸಿದ್ದು ನಾನೆಂದು ಮರೆಯಲು ಸಾಧ್ಯವಿಲ್ಲ. ನಮ್ಮ ಭಾಗ ಅನೇಕ ವರ್ಷಗಳಿಂದ ಹಿಂದುಳಿದಿದೆ, ಆದರೆ ನಾವೆಲ್ಲ ಸಕಾರಾತ್ಮಕ ವಾಗಿ ಚಿಂತನೆ ಮಾಡಿದರೆ. ಸುಪ್ತ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ. ನಾನು ಮಾಡುವ ಕಾರ್ಯ ಇನ್ನು ಬಹಳಿಷ್ಟಿದೆ, ನನ್ನ ಕಾರ್ಯಕ್ಕೆ ಪರಿಷತ್ತು ಗೌರವ ಮಾಡಿರುವುದು ಮುಜುಗುರವಾಗಿದೆ. ಈಗ ನನ್ನ ಜವಾಬ್ದಾರಿ ಪುನಃ ಹೆಚ್ಚಾಗಿದೆ.
ನಾವೆಲ್ಲರೂ ಬೀದರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಗಾಗಿ ದುಡಿಯೋಣ. ಜನಪರ ಜೀವಪರ ಕಾಳಜಿ ಬಸವ ಕೇಂದ್ರದಿಂದ ನನ್ನನ್ನು ಸನ್ಮಾನ ಮಾಡಿದ್ದು ಅನಂತ ಕೃತಜ್ಞತೆ ಸಲ್ಲಿಸುವೆ ಎಂದರು. ಮುಖ್ಯ ಅತಿಥಿಗಳಾದ ಪೆÇ್ರ. ಸಿದ್ದು ಯಾಪಲಪರವಿ ಡಾ ಪೂರ್ಣಿಮಾ ಜಿ ಅವರ ಶೈಕ್ಷಣಿಕ ದೂರದೃಷ್ಟಿ ಮೆಚ್ಚಲೇಬೇಕು, ಅನೇಕ ಸಹೃದಯಿ ಸಹೋದರವರು ಜೊತೆಗೂಡಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಸಾವಿರಾರು ಮಕ್ಕಳಿಗೆ ಉಪಯೋಗವಾಗುವ ಕಾರ್ಯ ಶ್ಲಾಘನೀಯ. ಅವರೊಬ್ಬ ಇಂಗ್ಲೀμï ಪ್ರಾಧ್ಯಾಪಕರಾಗಿ, ಅಧ್ಯಕ್ಷರಾಗಿ, ಶಿಕ್ಷಣ ಪ್ರೇಮಿಗಳಾಗಿ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ನಂಟು ಅವರ ಬಾಂಧವ್ಯ ಎತ್ತಿ ತೋರಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಒಳ್ಳೆಯ ಶಿಕ್ಷಣ ಪ್ರೇಮಿಗಳನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಬಸವ ಕೇಂದ್ರದ ಅಧ್ಯಕ್ಷರಾದ ಶರಣಪ್ಪ ಮಿಠಾರೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಸುರೇಶ್ ಚನ್ನಶಟ್ಟಿ ಮಾತನಾಡಿದರು. ಮಹಿಳಾ ಬಸವ ಕೇಂದ್ರದ ಅಧ್ಯಕ್ಷರಾದ ವಿದ್ಯಾವತಿ ಬಲ್ಲೂರ ಸ್ವಾಗತಿಸಿದರೆ, ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ನಿರೂಪಿಸಿದರೆ, ಶಿವಪುತ್ರಪ್ಪ ಪಾಟೀಲ ವಂದಿಸಿದರು. ಈ ಸಂದರ್ಭದಲ್ಲಿ ಶಿವಾನಿ ಶಿವದಾಸ ಸ್ವಾಮಿ ಕೆಲವೊಂದು ಕನ್ನಡದ ಗೀತೆಗಳನ್ನು ಹಾಡಿ ಎಲ್ಲರ ಗಮನ ಸೆಳೆದರು.
ಮಹಿಳಾ ಬಸವ ಕೇಂದ್ರದ ನಾಗವೇಣಿ ಸಾಲಿ, ಮಹಾನಂದಾ ಪಾಟೀಲ, ಅನೀತಾ ಶೇರಿಕಾರ, ಪ್ರತಿಭಾ ಜೀರಗೆ, ಸಾಕ್ಷಿ ಬಿರಾದಾರ, ಸಕಲೇಶ್ವರಿ ಚನ್ನಶಟ್ಟಿ, ವಿದ್ಯಾವತಿ ಸಜ್ಜನಶಟ್ಟಿ, ಲಿಂಗಾರತಿ ನಾವದಗೇರೆ, ಮಹಾನಂದ ಹಿರೇಮಠ, ಮಹಾದೇವಿ ಚೆಲುವಾ, ಶೋಭಾ ಟೋಕರೆ ಸೇರಿದಂತೆ ಅನೇಕರು ಜೊತೆಗೂಡಿ ಗೌರವಿಸಿದರು