ಪ್ರಥಮ ಕಿರುಪರೀಕ್ಷೆ ಅಂಕ ಸ್ಯಾಟ್ಸ್ನಲ್ಲಿ ಇಂಧಿಕರಿಸಿ ಸಕಾಲದಲ್ಲಿ ಶುಲ್ಕ ಪಾವತಿಸಿ-ಶಾಹಾಬಾದಕರ್
ಬೀದರ್:2023-24ನೇ ಸಾಲಿನ ಪ್ರಥಮ/ದ್ವಿತೀಯ ಪಿಯು ವಿದ್ಯಾರ್ಥಿಗಳ ಪ್ರಥಮ ಕಿರು ಪರೀಕ್ಷೆ ಅಂಕಗಳನ್ನು ಸ್ಯಾಟ್ಸ್ನಲ್ಲಿ ನಿಗದಿತ ಅವಧಿಯಲ್ಲಿ ಇಂಧಿಕರಿಸಬೇಕು ಎಂದು ಬೀದರನ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ತಿಳಿಸಿದರು.
ಬೀದರನ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ಕರೆದ ಜಿಲ್ಲಾ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರಸ್ತುತ ಸಾಲಿನಿಂದ ಪ್ರಾಯೋಗಿಕೇತರ(ನಾನ್ ಪ್ರ್ಯಾಟ್ಕಿಕಲ್)ವಿಷಯಗಳಿಗೆ 10 ಅಂಕಗಳು ಮತ್ತು ಪ್ರೋಜೆಕ್ಟ್ ಮತ್ತು ಆಸಾಯಿನ್ಮೆಂಟ್ಗಾಗಿ 10 ಅಂಕಗಳು ಒಟ್ಟು 20 ಅಂಕಗಳು ಕಾದಿರಿಸಲಾಗಿದೆ.ಅದರಲ್ಲಿ 10 ಅಂಕಗಳು ಪ್ರಥಮ/ದ್ವಿತೀಯ ಕಿರು ಪರೀಕ್ಷೆ ಮತ್ತು ಅರ್ಧವಾರ್ಷಿಕ ಥೇರಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅನುಪಾತಕ್ಕನುಗುಣವಾಗಿ ನೀಡಲಾಗುತ್ತದೆ.ಉಳಿದ 10 ಅಂಕಗಳು ಪ್ರೋಜೆಕ್ಟ್ ಮತ್ತು ಆಸಾಯಿನ್ಮೆಂಟ್ಗೆ ಕೊಡಲಾಗುತ್ತದೆ.ಕಾರಣ ಆಯಾ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸಕರು ಈಗಾಗಲೇ ತೆಗೆದುಕೊಂಡ ಪ್ರಥಮ ಕಿರುಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳು ಅತ್ಯಂತ ಜಾಗರೂಕತೆಯಿಂದ ಸ್ಯಾಟ್ಸ್ನಲ್ಲಿ ನಮೂದಿಸಬೇಕು.2023-24ನೇ ಸಾಲಿನ ಪ್ರಥಮ/ದ್ವಿತೀಯ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕಗಳನ್ನು ಆಯಾ ಲೆಕ್ಕ ಶಿರ್ಷಿಕೆಯಲ್ಲಿ ನಿಗದಿತ ದಿನಾಂಕದೊಳಗೆ ಸಂದಾಯ ಮಾಡಬೇಕು.ಮತ್ತು ಎಲ್ಲಾ ಪಪೂ ಕಾಲೇಜುಗಳಲ್ಲಿ ರೋವರ್ ಮತ್ತು ರೆಂಜರ್ ಹಾಗೂ ಎನ್ಎಸ್ಎಸ್ ಘಟಕಗಳನ್ನು ಕಡ್ಡಾಯವಾಗಿ ತೆರೆಯಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ ಮತ್ತು ಪ್ರ.ಕಾರ್ಯದರ್ಶಿ ಡಾ.ಮನ್ನತ ಡೋಲೆ ಮತ್ತು ನೋಡಲ್ ಅಧಿಕಾರಿ ಚಂದ್ರಕಾಂತ ಗಂಗಶೆಟ್ಟಿ ಸಹ ಮಾತನಾಡಿದರು.
ಸಭೆಯಲ್ಲಿ ಜಿಲ್ಲೆಯ ಸರ್ಕಾರಿ,ಅನುದಾನಿತ ಮತ್ತು ಅನುದಾನರಹಿತ ಪಪೂ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.
ಪ್ರಾಚಾರ್ಯರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ ನಿರೂಪಿಸಿದರು.ಜಿಲ್ಲಾ ಪ್ರಾಚಾರ್ಯರ ಸಂಘದ ರಾಜ್ಯ ಪ್ರತಿನಿಧಿ ಪ್ರಭು ಎಸ್.ವಂದಿಸಿದರು.