ಬೀದರ್

ಪೂಜ್ಯ ಶ್ರೀಗಳು ಅಧ್ಯಾತ್ಮಿಕ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಸೇವೆ : ಡಾ. ಮಹೇಶ ಬಿರಾದಾರ

ಬೀದರಃ-24, ನಗರದ ಬ್ರೀಮ್ಸ್ ಆಸ್ಪತ್ರೆಯಲ್ಲಿ ಪೂಜ್ಯ ಶ್ರೀ ಡಾ. ಬಸವಲಿಂಗಪಟ್ಟದ್ದೇವರ 73ನೇ ಜನ್ಮದಿನವನ್ನು ಸುದೈವಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ರೋಗಿಗಳಿಗೆ ಹಣ್ಣು-ಹಂಪಲುಗಳು ವಿತರಿಸಲಾಯಿತು. ಬೀದರ ತಾಲ್ಲೂಕಿನ ಕ್ಷ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಅಖಿಲಾಂಡೇಶ್ವರಿಯವರು ಬಸವಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡುತ್ತ ಪೂಜ್ಯರಾದ ಡಾ. ಬಸವಲಿಂಗ ಪಟ್ಟದ್ದೇವರು ಅನಾಥ ಮಕ್ಕಳನ್ನು ಬಡ,À ದೀನ-ದಲಿತರ ಜ್ಯೋತಿಯಾಗಿ ಅಷ್ಟೇ ಅಲ್ಲದೆ ಬಡ ಮಕ್ಕಳಿಗೆ, ಪ್ರತಿಭಾವಂತ ಮಕ್ಕಳ ಸರ್ವಾಂಗಿಣ ವಿಕಾಸವಾಗುವಂತಹ ಶಿಕ್ಷಣವನ್ನು ಕೊಡುವುದರ ಜೊತೆಗೆ ಪ್ರತಿಭಾವಂತರು ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಅದ್ಭುತ ಶಕ್ತಿ ಸಮಾಜಕ್ಕೆ ನೀಡುತ್ತಿರುವುದು ಪ್ರಶಂಸನೀಯವಾದುದುಳಿ ಇವರು ಇನ್ನು ಉನ್ನತಮಟ್ಟದಲ್ಲಿ ಸೇವೆ ಮಾಡುವ ಶಕ್ತಿ ಭಗವಂತನು ಅವರಿಗೆ ಕರುಣಿಸಲೆಂದು ಶುಭ ಕೋರಿದರು.
ಮುಖ್ಯ ಅತಿಥಿಗಳಾದ ಬೀದರ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಹೇಶ ಬಿರಾದಾರ ಅವರು ಮಾತನಾಡುತ್ತ ಪೂಜ್ಯ ಶ್ರೀಗಳು ಅಧ್ಯಾತ್ಮಿಕ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಸೇವೆ ಮಾಡುವುದರ ಜೊತೆಗೆ ತಿಪ್ಪೆಯಲ್ಲಿ ಬಿದ್ದ ಅನಾಥ ಮಕ್ಕಳನ್ನು ತಂದು ಜೀವಕಾಳಜಿಯಿಂದ ಸೇವೆ ಮಾಡುತ್ತಿರುವುದು ಹಾಗೂ ಮಕ್ಕಳಿಗೆ ಉತ್ತಮ ಸಂಸ್ಕøತಿ ಸಂಸ್ಕಾರವನ್ನು ಕೊಡುವ ಕನ್ನಡದ ಜಂಗಮರಾಗಿದ್ದಾರೆ ಎಂದರು.
ಪ್ರವಚನ ಸಮಿತಿ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆಯವರು ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವುದರ ಜೊತೆಗೆ ಪೂಜ್ಯರ ಬಗ್ಗೆ ಮಾತನಾಡುತ್ತ ಅವರ ಸೇವೆ ಅಮೂಲ್ಯವಾದುದು, ಪೂಜ್ಯರ ಜನ್ಮದಿನವನ್ನು ರೋಗಿಗಳಿಗೆ ಹಣ್ಣು-ಹಂಪಲು ಕೊಡುವುದರ ಮೂಲಕ ಆಚರಿಸಿ ಅವರು ರೋಗದಿಂದ ಮುಕ್ತರಾಗಲೆಂದು ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಅವರೊಬ್ಬರು ಮಾತೃಹೃದಯಿ ದೀನ-ದಲಿತರ ಆಶಾಜ್ಯೋತಿಯಾಗಿದ್ದಾರೆಂದರು.
ಪ್ರಸಾದ ನಿಲಯದ ಕಾರ್ಯದರ್ಶಿಗಳಾದ ಎಸ್. ಬಿ. ಬಿರಾದಾರ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಪೂಜ್ಯರ ಜನ್ಮದಿನವು ಸುದೈವಿ ದಿನಚಾರಣೆಯನ್ನಾಗಿ ಮಾಡುತ್ತಿರುವುದು ಸಮಾಜಕ್ಕೆ ಅವರೊಬ್ಬರು ಆದರ್ಶ, ಶಿಕ್ಷಣ ತಜ್ಞರು, ಅಧ್ಯಾತ್ಮಿಕ ಗುರುಗಳು ಸಮಾಜದ ಕಣ್ಮಣಿಯಾಗಿದ್ದಾರೆ ಎಂದರು.
ದಿವ್ಯ ಸಾನಿಧ್ಯ ವಹಿಸಿರುವ ಬೆಳಗಾವಿ ಜಿಲ್ಲೆಯ ಜನವಾಡದ ಅಲ್ಲಮಪ್ರಭು ಮಠದಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಡಾ. ಚನ್ನಬಸವಪಟ್ಟದ್ದೇವರ ಕೃಪಾಶೀರ್ವಾದದಲ್ಲಿ ಪೂಜ್ಯ ಶ್ರೀ ಬಸವಲಿಂಗಪಟ್ಟದ್ದೇವರು ಅವರ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಮುನ್ನಡೆಯುತಿದ್ದಾರೆ. ಅವರು ತನು-ಮನ-ಭಾವ ಶುದ್ಧಿಕರಣದಿಂದ ಬಸವತತ್ವದ ಅಪ್ಪಟ ಅನುಯಾಯಿಗಳಾಗಿ ಬಸವವ ತತ್ವವೇ ಉಸಿರಾಗಿಸಿಕೊಂಡಿದ್ದಾರೆÀ ಎಂದರು. ಪತಂಜಲಿ ಯೋಗಸಮಿತಿಯ ಅಧ್ಯಕ್ಷರಾದ ಯೋಗೇಂದ್ರ ಯದಲಾಪುರೆ ವೇದಿಕೆಯ ಮೇಲೆ ಗೌರವ ಉಪಸ್ಥಿತರಿದ್ದರು
ಅಕ್ಕಮಹಾದೇವಿ ಮಹಿಳಾ ಸಾಂಸ್ಕತಿಕ ಸಂಘದ ಅಧ್ಯಕ್ಷರಾದ ಮೀನಾಕ್ಷಿ ಪಾಟೀಲರವರು ಸ್ವಾಗತ ಕೋರಿದರೆ ಲಕ್ಷ್ಮಿಬಾಯಿ ಬಿರಾದಾರ ನಿರೂಪಿಸಿದರು. ವಿಜಯಲಕ್ಷ್ಮಿ ಹುಗ್ಗೆಳ್ಳಿ ವಂದಿಸಿದರು. ಹಣ್ಣು ಹಂಪಲು ವಿತರಣೆಯಲ್ಲಿ ಪ್ರಮುಖರಾದ ಪ್ರೊ. ಸಂಗ್ರಾಮ ಎಂಗಳೆ, ಶಿವಕುಮಾರ ಭಾಲ್ಕೆ ಸಂಗ್ರಾಮಪ್ಪ ಬಿರಾದಾರ, ಗುರುನಾಥ ಬಿರಾದಾರ, ಬಸವರಾಜ ಭತಮುರ್ಗೆ, ಸುನೀಲ ಡಾ. ವೈಜಿನಾಥ ಬಿರಾದಾರ ಶಿವಕುಮಾರ ಪಾಟೀಲ ತೇಗಂಪುರ, ಪ್ರಸಾದ ನಿಲಯದ ವ್ಯವಸ್ಥಾಪಕರು ಶ್ರೀಕಾಂತ ಸ್ವಾಮಿ, ಸುನೀಲ, ಶರಣೆಯರಾದ ಕಸ್ತೂರಿಬಾಯಿ ಬಿರಾದಾರ, ಶಕುಂತಲಾ, ವಿಜಯಲಕ್ಷ್ಮಿ ಚಿದ್ರಿ, ಜಗದೇವಿ, ಸವಿತಾ, ಮುಂತಾದವರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!