ಪುರಸಭೆ ರಸ್ತೆ ಅತಿಕ್ರಮಣ ತೆರುವಿಗೆ ಎಚ್ಚರ
ಭಾಲ್ಕಿ: ಪಟ್ಟಣದ ಫುಟ್‍ಪಾತ್ ಮೇಲೆ ಶಾಸ್ವತವಾಗಿ ನಿರ್ಮಿಸಿರುವ ವ್ಯಾಪಾರ ಮಳಿಗೆಗಳನ್ನು ತಕ್ಷಣವೇ ತೆರವು ಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ಎಚ್ಚರಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಪಟ್ಟಣದ ಕೆಲವೊಂದು ವ್ಯಾಪಾರಸ್ತರು ಫುಟ್‍ಪಾತ್ ಮೇಲೆ ಶಾಸ್ವತವಾಗಿ ಷೆಡ್ಡು ನಿರ್ಮಿಸಿಕೊಂಡು ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಜನಸಮಾನ್ಯರಿಗೆ ತೊಂದರೆಯಾಗುತ್ತಿದೆ. ಫುಟ್ ಪಾತ್ ಮೇಲೆ ಖಾಯಂ ಆಗಿ ಷೆಡ್ಡುಗಳನ್ನು ನಿರ್ಮಿಸಿರುವವರು ತಳ್ಳು ಬಂಡಿಯ ಮೂಲಕ ತಮ್ಮ ವ್ಯಾಪಾರ ವಹಿವಾಟು ಮುಂದುವರಿಸಲು ಅಭ್ಯಂತರವಿಲ್ಲ. ಆದರೆ ಶಾಸ್ವತ ಖಾಯಂ ಷೆಡ್ಡು ನಿರ್ಮಿಸಿರುವ ವ್ಯಾಪಾರಿಗಳು ತಕ್ಷಣವೇ ತಮ್ಮ ವ್ಯಾಪಾರ ಮಳಿಗೆ ತೆರವು ಗೊಳಿಸಬೇಕು. ಈ ರೀತಿ ವ್ಯಾಪಾರ ಮಾಡುವುದು ಕಾನೂನು ಬಾಹಿರವಾಗಿದೆ. ಖಾಯಂಆಗಿ ಫುಟ್‍ಪಾತ್ ಮೇಲೆ ನಿರ್ಮಿಸಿರುವ ಷೆಡ್ಡುಗಳು ತೆರವುಗೊಳಿಸದಿದ್ದರೆ, ಪುರಸಭೆಯಿಂದ ಷೆಡ್ಡುಗಳನ್ನು ತೆರವು ಗೊಳಿಸಿ, ತಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.