ಪಾಲಕರು ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ ನೀಡಿದ್ದಲ್ಲಿ ಜೈಲು ಶಿಕ್ಷೆಗೆ ಗುರಿ
ಬೀದರ, ಅಗಸ್ಟ್ 30 – ಬೀದರ ನಗರದಲ್ಲಿ ಅಪ್ರಾಪ್ತ ಮಕ್ಕಳು ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನು ಚಲಾಯಿಸಿಕೊಂಡು ಬರುವುದು ಕಂಡುಬರುತ್ತಿರುವುದರಿಂದ ಪಾಲಕರಿಗೆ ಮತ್ತು ವಾಹನದ ಮಾಲೀಕರು ಒಂದು ವೇಳೆ ತಮ್ಮ ಅಪ್ತಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ ನೀಡಿದಲ್ಲಿ ಅಂತಹ ಪಾಲಕರಿಗೆ ಮತ್ತು ವಾಹನ ಮಾಲೀಕರಿಗೆ ಮೋಟಾರ ಕಾಯ್ದೆ ಅಡಿಯಲ್ಲಿ 25,000 ರೂ. ದಂಡ ಅಥವಾ 3 ತಿಂಗಳ ಸಾಧಾರಣ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು.
ಈ ವಿಶೇಷ ಕಾರ್ಯಾಚಾರಣೆಯನ್ನು ಸೆಪ್ಟೆಂಬರ್ 1 ರಿಂದÀ ಚಾಲನೆಯಲ್ಲಿ ತರಲಾಗುವುದು ಎಂದು ಬೀದರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿಶೇಷ ಕಾರ್ಯಾಚಾರಣೆಯನ್ನು ಸೆಪ್ಟೆಂಬರ್ 1 ರಿಂದÀ ಚಾಲನೆಯಲ್ಲಿ ತರಲಾಗುವುದು ಎಂದು ಬೀದರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.