ಬೀದರ್

ಪರಿಣಾಮಕಾರಿಯಾಗಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮ ಯಶಸ್ವಿಸಿಗೊಳಿಸಿ-ಸಚಿವರ ಈಶ್ವರ ಬಿ.ಖಂಡ್ರೆ

ಬೀದರ, ಆಗಸ್ಟ್ 11 -ಗರ್ಭವತಿ ಮಹಿಳೆಯರು ಪೌಷ್ಠಿಕಾಂಶ ಆಹಾರದ ಕೊರತೆ ಹಾಗೂ ಪರಿಸರ ಮಾಲಿನ್ಯದ ಒತ್ತಡದಿಂದ ತಾಯಂದಿರು ಅನೇಕ ರೋಗಳಿಂದ ಬಳಲುತ್ತಿದ್ದು ಆ ರೋಗವು ಮಗುವಿನ ಮೇಲೆ ಪರಿಣಾಮ ಬೀರುತ್ತಿದ್ದು ಅನೇಕ ಜನ್ಮ ತಾಳಿದ ಮಗುವಿಗೆ ಪೊಲೀಯೋ ಲಿಸಿಕೆಯಂತೆ ಮಾರಕ ರೊಗಳಿಂದ ಮಗುವಿಗೆ ರಕ್ಷಿಸಲು ಇಂದ್ರಧನುಷ್ ಲಸಿಕೆ ಹಾಕಿಸಬೇಕು ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚವಿರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಅವರು ಶುಕ್ರವಾರ ಬೀದರ ನಗರದ 100 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ “ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ” ಹಾಗೂ ವಿಶ್ವ ಹೆಪಟೈಟಿಸ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಲಸಿಕೆ ಪಡೆದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಹೆರಿಗೆ ಸಮಯದಲ್ಲಿ ತಾಯಿ ಹಾಗೂ ಮಕ್ಕಳ ಮರಣ ಹೊಂದುವ ಪ್ರಮಾಣ ಇತ್ತಿಚೆಗೆ ಕಡಿಮೆಯಾಗಿದ್ದು. ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಬಂದು ರೋಗ ನಿರೋದಕ ಲಸಿಕೆ ಪಡೆದು ಸುರಕ್ಷಿತವಾಗಿರಬೇಕು. ಹಾಗೂ ಜನರಲ್ಲಿ ಈ ಕುರಿತು ಅರಿವು ಮೂಡಸಬೇಕೆಂದರು

ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮವು ದೇಶದ್ಯಾಂತ ನಡೆಯುತ್ತಿರುವ ಕರ್ನಾಟಕದ 31 ಜಿಲ್ಲೆಗಳಲ್ಲಿ ಅನುಷ್ಠಾನಗೊಳಲಾಗುತ್ತಿದ್ದು, ಈ ಅಭಿಯಾನವು 7 ಆಗಸ್ಟ್, 11 ಸೆಪ್ಟೆಂಬರ್ ಮತ್ತು 9 ಅಕ್ಟೋಬರ್ 3 ಸುತ್ತಿನವರೆಗೆ ನಿರ್ದಿಷ್ಟ ತಿಂಗಳುಗಳಲ್ಲಿ 6 ದಿನಗಳಂದು ಕಾರ್ಯಕ್ರಮವು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 0 ದಿಂದ 2 ವರ್ಷ ವಯಸ್ಸಿನ 5545 ಹಾಗೂ 2 ರಿಂದ 5 ವರ್ಷದ ಅರ್ಹ ಫಲಾನುಭವಿ ಮಕ್ಕಳು 1094 ಇದ್ದಾರೆ.
ಇಗಾಗಲೇ ಬ್ರೀಮ್ಸ್ ಆಸ್ಪತ್ರೆಯಲ್ಲಿ ಹೆಪಟೇಟೀಸ್.ಬಿ ರೋಗ ದೃಡಪಟ್ಟ 440 ಹಾಗೂ ಹೆಪೆಟೇಟೀಸ್.ಸಿ 13 ಜನ ಮಕ್ಕಳ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿ ಅನುಸಾರ ವಯಸ್ಸಿಗನುಗುಣವಾಗಿ ಲಸಿಕೆ ಪಡೆಯದ ಮತ್ತು ಬಿಟ್ಟು ವಂಚಿತ ಮತ್ತು ಲಸಿಕಾಕರಣಕ್ಕೆ ಬಾಕಿ ಇರುವ ಗರ್ಭಿಣಿಯರು ಮತ್ತು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0ರಲ್ಲಿ ಲಸಿಕೆ ನೀಡಲಾಗುವುದು. ವಿಶೇಷವಾಗಿ ದಢಾರ ರುಬೆಲ್ಲಾ ರೋಗನಿರೋಧಕತೆ ಅಂತರವನ್ನು ಕಡಿಮೆ ಮಾಡಲಾಗುವುದು. ದುರ್ಬಲ ಸಮುದಾಯವನ್ನು ತಲುಪಿಸುವುದು, ಸಮುದಾಯವನ್ನು ಪಾಲ್ಗೊಳ್ಳುವಂತೆ ಮಾಡುವುದು. ಸಾರ್ವತ್ರಿಕ ಲಸಿಕಾ ವೇಳಾಪಟ್ಟಿಗೆ ಇತ್ತೀಚಿಗೆ ಸೇರ್ಪಡೆಗೊಂಡ ಪಿ.ಸಿ.ವಿ. ಮತ್ತು ಮೂರನೇ ಡೋಸ್ ಸೇರ್ಪಡೆಗೊಳಿಸಿದ ಎಫ್.ಐ.ಪಿ.ವಿ.ಲಸಿಕಾರಣದ ಪ್ರಗತಿಯನ್ನು ಹಾಗೂ ಡಿ.ಪಿ.ಟಿ.ಬೂಸ್ಟರ್ ಓ.ಪಿ.ವಿಬೂಸ್ಟರ್ ಲಸಿಕೆಗಳು ಪ್ರಗತಿಯನ್ನು ಹೆಚ್ಚಿಸುವುದು.
ಪರಿಣಾಮಕಗಾರಿ ಮಿಷನ್ ಇಂದ್ರಧನುಷ್ 5.0 ಗಳಲ್ಲಿ ನೀಡಲಾದ ಲಸಿಕೆಗಳ ವಿವರವನ್ನು ಇ-ವಿನ್ ಪೋರ್ಲಲ್ ದಾಖಲಿಸಿ ಈ ಲಸಿಕಾಕರಣ ಪ್ರಮಾಣ ಪತ್ರ ಸೃಜಿಸಲಾಗುವುದು. ಖಾಸಗಿ ಶಾಲೆಯಲ್ಲಿ ಪ್ಲೇ-ಸ್ಕೂಲ್, ಎಲ್.ಕೆ.ಜಿ., ಯು.ಕೆ.ಜಿ. 5 ವರ್ಷದೊಳಗಿನ ಇನ್ನು ಎಂ.ಆರ್.2 ಡಿ.ಪಿ.ಟಿ. ಬೂಸ್ಟರ್ ಓ.ಪಿ.ವಿ.ಬೂಸ್ಟರ್ ಲಸಿಕೆ ಪಡೆಯದ ಮಕ್ಕಳಿದ್ದಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮದಲ್ಲಿ ಲಸಿಕೆ ಪಡೆಯಲು ಪೋಷಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಹೊಸದಾಗಿ ಶಾಲೆಗಳಲ್ಲಿ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಈ ಹಿಂದೆ ಪಡೆದಿರುವ ಲಸಿಕೆಗಳ ಪರಿಶೀಲನೆ ಮಾಡಿ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ಹಾಕಿಕೊಳ್ಳುವಂತೆ ಸೂಚಿಸಬೇಕು. ಶಾಲೆಯಲ್ಲಿ ಯಾವುದೇ ಮಕ್ಕಳಿಗೆ ದಢಾರ ರುಬೆಲ್ಲಾ ರೋಗಗಳ ಲಕ್ಷಣಗಳು (ಜ್ವರ ದದ್ದು, ಮೂಗು ಸೊರುವಿಕೆ, ರೆಡ್ ಐಸ್) ಕಂಡುಬAದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೌರಾಡಳಿ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿ, ಜಿಲ್ಲೆ ಪೋಷಕರು ತಮ್ಮ ಮಕ್ಕಳಿಗೆ ಇಂದ್ರಧನುಷ 5.0 ಅಭಿಯಾನದಡಿ ಲಸಿಕೆ ಕೊಡಿಸುವ ಮೂಲಕ ಸದಪಯೋಗ ಪಡೆಯಬೇಕೆಂದರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ರಾಜಶೇಖರ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಅಧಿಕಾರಿ ಡಾ.ಶರಣಯ್ಯಾ ಸ್ವಾಮಿ, 100 ಹಾಸಿಗಳ ಆಸ್ಪತ್ರೆಯ ವೈದ್ಯಧಿಕಾರಿ ಡಾ.ಸೊಹೇಲ್ ಹುಸೇನ್, ಹೆಪಿಟೇಟೀಸ್ ಕಾರ್ಯಕ್ರಮ ಅಧಿಕಾರಿ ಸುವೀನ್ ಪಾಟೀಲ್, ಆಶಾ ಕಾರ್ಯಕರ್ತರ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!