ಪತ್ರಕರ್ತರು ವಿಶ್ವಾಸಾರ್ಹತೆ ಕಾಪಾಡಿಕೊಂಡು ಕೆಲಸ ಮಾಡಬೇಕು-:ಸಚಿವ ಈಶ್ವರ ಬಿ.ಖಂಡ್ರೆ
ಬೀದರ, ಜುಲೈ 30 – ಪತ್ರಿಕಾ ರಂಗ ಬೆಳೆದಂತೆ ತನ್ನ ವಿಶ್ವಾಸರ್ಹತೆಯನ್ನು ಕಳೆದುಕೊಳ್ಳುತ್ತಿದೆ ಈ ನಿಟ್ಟಿನಲ್ಲಿ ತಮ್ಮದೇ ನೀತಿ ಸಂಹಿತೆಯನ್ನು ಹಾಕಿಕೊಂಡು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವ ದೊಡ್ಡ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ, ಖಂಡ್ರೆ ಹೇಳಿದರು.
ಅವರು ರವಿವಾರ ಬೀದರನ ಪ್ರತಾಪ ನಗರದ ಹತ್ತಿರವಿರುವ ಪತ್ರಿಕಾ ಭವನದಲ್ಲಿ ಮಾನ್ಯತೆ ಪಡೆದ ಜಿಲ್ಲಾ ಮತ್ತು ಪ್ರದೇಶಿಕ ಪತ್ರಿಕೆಗಳ ಸಂಪಾದಕರ ಸಂಘ, ಕಾರ್ಯನಿರತ ಪತ್ರಕರ್ತರ ಸಂಘ(ರಿ) ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಇವರ ಸಂಯುಕ್ತಾಶ್ರದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವತಂತ್ರ ಪೂರ್ವದಿಂದಲೂ ಮಾಧ್ಯಮಕ್ಕೆ ಅಪಾರ ಗೌರವಿದೆ. ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಹಾಗೂ ಇಲ್ಲಿನ ಸಂವಿಧಾನ ಎಲ್ಲರಿಗೆ ಮಾದರಿಯಾಗಿದೆ ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ಮಾಧ್ಯಮಗಳು ತೆಗೆದುಕೊಂಡಿವೆ. ಶಾಸಕಾಂಗ, ಕಾರ್ಯಾಂಗ, ಹಾಗೂ ನ್ಯಾಯಾಂಗಗಳ ನೂನ್ಯತೆಗಳನ್ನು ಸರಿಪಡಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ, ಜೊತೆಗೆ ದೇಶದಲ್ಲಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ದೇಶದ ಅಭಿವೃದ್ಧಿಗೆ ಸಹಕಾರ ನೀಡುತ್ತಿವೆ ಎಂದರು.
ಇತ್ತಿಚೆಗೆ ಕೆಲವರು ತರಾತುರಿಯಲ್ಲಿ ಬಿತ್ತರಿಸುವ ಸುದ್ಧಿಯಿಂದ ಸಮಾಜದಲ್ಲಿ, ಧರ್ಮ, ಜಾತಿ ,ಜನಾಂಗಗಳಲ್ಲಿ ಸಾಮರಸ್ಯ ಕದಡುತ್ತಿದೆ ಆದರಿಂದ ಸುದ್ಧಿಯನ್ನು ಬಿತ್ತರಿಸುವ ಮುನ್ನ ಸತ್ಯ ಅಸತ್ಯತೆಯನ್ನು ಒಮ್ಮೆ ಪರಿಶಿಕ್ಷಿಸಬೇಕು. ತಿರುಚಿ ಸುದ್ದಿಯನ್ನು ಬರಿಯಬಾರದು ಎಂದರು.
ಪತ್ರಕರ್ತರಿಗೆ ವಿಮೆ, ಗ್ರಾಮಿಣ ಭಾಗದಲ್ಲಿ ಸಂಚರಿಸಲು ಉಚಿತ ಬಸ್ ಪಾಸ್ ಹಾಗೂ ಯಶಸ್ವಿನಿ ಯೋಜನೆಯಡಿ ಪತ್ರಕರ್ತರಿಗೆ ಸೇರಿಸುವಂವೆ ಮನವಿ ಇದೆ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು, ಈಗಾಗಲೇ ಪತ್ರಕರ್ತರಿಗೆ ನಿವೃತ್ತಿಯ ನಂತರ ನೀಡುವ ಗೌರವಧನವನ್ನು 10 ಸಾವಿರದಿಂದ 12 ಸಾವಿರಕ್ಕೆ ಏರಿಸಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲು ಬದ್ಧ ಎಂದು ಹೇಳಿದರು.
ಬೀದರ ಜಿಲ್ಲೆಯ ಎಲ್ಲಾ ಕ್ಷೇತ್ರದ ಮೂಲ ಭೂತ ಸೌಕರ್ಯದ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಪತ್ರಿಕಾ ಮಾಧ್ಯಮದವರ ಸಹಕಾರಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು. ಬೀದರ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಬೀದರ ಇಂಜೀನಿಯರಿAಗ್ ಕಾಲೇಜಿನಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 30 ರಿಂದ 40 ಸಾವಿರ ಹುದ್ದೆಗೆ ಖಾಲಿ ಇವೆ ಇವುಗಳ ಭರ್ತಿಗೆ ಕ್ರಮ ವಹಿಸಲಾಗುವುದು,
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಪತ್ರಕರ್ತರು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೀದರ ಅಭಿವೃದ್ಧಿಗೆ ಅವರ ಸಹಕಾರ ಅಗತ್ಯವಾಗಿದೆ. ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ ಐದು ಭರವಸೆಯ ಜಾರಿಗೆ ತರುತ್ತಿದೆ ಮುಂದಿನ ದಿನಗಳಲ್ಲಿ ರಾಜ್ಯದ ಹಾಗೂ ಜಿಲ್ಲೆಯ ಇನ್ನಿತರ ಮೂಲ ಭೂತ ಸೌಕರ್ಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸಲಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಆಡಳಿತದ ಗಂಧ ಗಾಳಿ ಗೊತ್ತಿಲದ ಪೊಳ್ಳು ಪತ್ರಕರ್ತರು ಹಣ ಗಳಿಕೆಗಾಗಿ ಪತ್ರಿಕಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಇದರಿಂದ ನೈಜ ಪರ್ತಕರ್ತರಿಗೆ ಅಪಾಯಗಳು ಎದುರಾಗುತ್ತಿವೆ. ಇತ್ತಿಚೆಗೆ ಐಡಿ ಕಾರ್ಡ, ಸರ್ಟಿಫಿಕೆಟ್ ತೋರಿಸಿ ಪರ್ತಕರ್ತ ಪರಿಚಯ ಮಾಡಿಕೊಳ್ಳುವ ಪ್ರವೃತ್ತಿ ಬೆಳೆದಿದೆ ಇದು ಬದಲಾಗಬೇಕು ತಾವು ಬರೆಯುವ ಲೇಖನಗಳಿಂದ ತಮ್ಮ ಪರಿಚಯವಾಗಬೇಕು ಎಂದರು.
ತಮ್ಮ ವೃತ್ತಿಯ ಬಗ್ಗೆ ಎಲ್ಲರಿಗೂ ಗೌರವವಿರಬೇಕು. ಈ ವೃತ್ತಿಯಿಂದ ಅಸಹಾಯಕರಿಗೆ ಹಾಗೂ ನೊಂದವರಿಗೆ ಧ್ವನಿಯಾಗಲು ಸಾಧ್ಯವಿದೆ ಇದನ್ನು ಬಿಟ್ಟು ತಮ್ಮ ಸ್ವ ಹಿತಾಶಕ್ತಿಗೆ ಕೆಲಸಮಾಡಬಾರದು. ಇತ್ತಿಚೆಗೆ ಪತ್ರಿಕಾ ರಂಗದಲ್ಲಿ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ ಇವುಗಳನ್ನು ಸರಿಪಡಿಸಲು ಎಲ್ಲರೂ ಸೇರಿ ಶ್ರಮಿಸಬೇಕು. ಈಗ ಬೀದರನಲ್ಲಿ ಪತ್ರಿಕಾ ಭವನ ಚಾಲನೆಯಾಗಿದ್ದು ಪತ್ರಿಕಾ ಗೋಷ್ಠಿ ಸೇರಿದಂತೆ ಪತ್ರಕರ್ತ ಮಿತ್ರರ ಎಲ್ಲಾ ಕೆಲಸಗಳು ಇಲ್ಲಿಂದಲೇ ಅಚ್ಚುಕಟ್ಟಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಹುಮನ್ನಾಬಾದ ಶಾಸಕ ಡಾ.ಸಿದ್ದಲಿಂಗಪ್ಪ ಎಸ್. ಪಾಟೀಲ್ ಮಾತನಾಡಿ, ದೇಶ, ರಾಜ್ಯ, ಹಾಗೂ ಜಿಲ್ಲೆಯ ಅಭಿವೃದ್ಧಿಯ ಕುಂಟಿತಕ್ಕೆ ಇರುವ ನೂನ್ಯತೆಗಳನ್ನು ಎತ್ತಿತೋರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಹುಮನ್ನಾಬಾದನಲ್ಲಿ ತಾಲ್ಲೂಕ ಪತ್ರಿಕಾ ಭವನ ನಿರ್ಮಾಣ ಮಾಡುವಂತೆ ಪತ್ರಕರ್ತರ ಮನವಿ ಇದೆ ಜಿಲ್ಲಾಡಳಿತ ನಿವೇಶನ ಒದಗಿಸಿದರೆ ಶಾಸಕರ ಅನುದಾನದಲ್ಲಿ 10 ಲಕ್ಷ ನೀಡಿ ಪತ್ರಿಕಾ ಭವನ ನಿರ್ಮಾಣ ಮಾಡಲಾಗುವುದು ಎಂದರು.
ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ನನ್ನ ತಾಲ್ಲೂಕಿನಲ್ಲಿರುವ ಮೂಲಭೂತ ಸಮಸ್ಯೆಗಳ ಕೊರತೆಯನ್ನು ನನ್ನ ಗಮನಕ್ಕೆ ತಂದು ಅದನ್ನು ಸುಧಾರಿಸುವ ಕೆಲಸವನ್ನು ಪತ್ರಕರ್ತರು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ ಮುಂದಿನ ದಿನಗಳಲ್ಲಿ ಅವರ ಸಹಕಾರದ ಜೊತೆಗೆ ತಾಲ್ಲೂಕಿನ ಹಾಗೂ ಜಿಲ್ಲೆಯ ಅಭಿವೃದ್ದಗೆ ಕೆಲಸ ಮಾಡುತ್ತೆನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ರಘುನಾಥರಾವ ಮಲ್ಕಾಪುರೆ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಮಾನ್ಯತೆ ಪಡೆದ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಜೆ.ಆರ್.ಕೆಂಚೆಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾ ಪ್ರಧಾನ ಕಾರ್ಯದರ್ಶಿ ಬಿ.ಸಿ. ಲೋಕೇಶ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಏಸಿಯಾ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನ ಗೌಡ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಬಾಬು ವಾಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸುರೇಶ, ಜೆ.ಕೆ ಕನ್ಸ್ಸ್ಟçಕನ್ಸ್ ಮಾಲಿಕ ಗುರುನಾಥ ಕೊಳ್ಳು, ಬಸವರಾಜ ಜಾಬ್‌ಶೆಟ್ಟಿ, ದೀಪಕ ವಾಲಿ, ಸುರೇಶ ಚನ್ನಶೇಟ್ಟಿ, ಎಸ್.ಎಸ್. ಖಾದ್ರಿ, ಗಂಧರ್ವಸೇನಾ, ಬಸವರಾಜ ಧನ್ನೂರ, ಜಿಲ್ಲೆಯ ಹಾಗೂ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ದೃಶ್ಯ ಮತ್ತು ಮೃದಣ ಮಾಧ್ಯಮದ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.