ಬೀದರ್

ಪಡಿತರ ಕಾರ್ಡುಗಳ ಸದಸ್ಯರ ಇ-ಕೆವೈಸಿ ಮಾಡಿಸಿಕೊಳ್ಳವಂತೆ ಜಿಲ್ಲಾಧಿಕಾರಿಗಳ ಮನವಿ

ಬೀದರ, ಅಗಸ್ಟ್ 29 – ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಒಟ್ಟು 10 ಕೆ.ಜಿ. ಅಕ್ಕಿ ಆಹಾರಧಾನ್ಯದಲ್ಲಿ ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆಯಡಿ ವಿತರಿಸಲಾಗುವ 05 ಕೆ.ಜಿ. ಅಕ್ಕಿ ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 05 ಕೆ.ಜಿ. ಅಕ್ಕಿ ಆಹಾರಧಾನ್ಯ ವಿತರಿಸಲು ಉದ್ದೇಶಿಸಿದ್ದು, ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಾಗಿ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಬೀದರ ಜಿಲ್ಲೆಗೆ ಸರ್ಕಾರದಿಂದ ಆಗಸ್ಟ್-2023ರ ಮಾಹೆಗೆ ನೇರ ನಗದು ವರ್ಗಾವಣೆ ಸಂಬAಧ ಒಟ್ಟು ರೂ.17.35 ಕೋಟಿ ಅನುದಾನ ಸ್ವೀಕೃತವಾಗಿದ್ದು. ಬೀದರ ಜಿಲ್ಲೆಗೆ ಆಗಸ್ಟ್-2023ರ ಮಾಹೆಗೆ 282221 ಪಡಿತರ ಚೀಟಿಗಳ 1063965 ಫಲಾನುಭವಿಗಳು ಡಿ.ಬಿ.ಟಿ ಪಾವತಿ ಅರ್ಹವಾಗಿದ್ದು, ಇದರಲ್ಲಿ 209195 ಪಡಿತರ ಚೀಟಿಗಳ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಒಟ್ಟು 12,92,35,020ರೂಗಳನ್ನು ಡಿ.ಬಿ.ಟಿ ಮೂಲಕ ಹಣ ವರ್ಗಾಯಿಸಲಾಗಿದೆ ಇದರಿಂದ 786068 ಫಲಾನುಭವಿಗಳು ಲಾಭ ಪಡೆದಿರುತ್ತಾರೆ ಮತ್ತು ಈಗಾಗಲೇ ಪಡಿತರ ಚೀಟಿ ಮುಖ್ಯಸ್ಥರ ಫಲಾನುಭವಿಗಳ ಖಾತೆಗೆ ಹಣ ಕೂಡ ಜಮೆಯಾಗಿವೆ. ಇನ್ನು 73026 ಪಡಿತರ ಚೀಟಿಗಳ 277897 ಫಲಾನುಭವಿಗಳ ಖಾತೆಗೆ ಹಣ ಪಾವತಿ ಮಾಡುವುದು ಪ್ರಗತಿಯಲ್ಲಿರುತ್ತದೆ. ಪಡಿತರ ಚೀಟಿಗಳ ಕುಟುಂಬದ ಮುಖ್ಯಸ್ಥರ ನಿಷ್ಕಿçÃಯವಾಗಿರುವ ಬ್ಯಾಂಕ್ ಖಾತೆಗಳು, ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಮಾಡದೇ ಇರುವವರು, ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳು ಇಲ್ಲದೇ ಇರುವವರು, ಬ್ಯಾಂಕ್ ಖಾತೆಗಳು ಎನ್‌ಪಿಸಿಐ ಆ್ಯಕ್ಟಿವ್ ಮಾಡಿಸಿಕೊಳ್ಳದವರು, ಪಡಿತರ ಚೀಟಿಗಳಲ್ಲಿ ಇ-ಕೆವೈಸಿ ಮಾಡಿಸದೇ ಇರುವವರು, ಅಂತಹ ಪಡಿತರ ಚೀಟಿ ಫಲಾನುಭವಿಗಳು ಡಿ.ಬಿ.ಟಿ ಹಣ ಪಾವತಿಗೆ ಅರ್ಹರಾಗಿರುವುದಿಲ್ಲ. ಈ ಕಾರಣಗಳಿಂದಾಗಿ ಡಿ.ಬಿ.ಟಿ ಹಣ ಪಾವತಿಯನ್ನು ಪಡೆಯದೇ ಇರುವವರು ತಕ್ಷಣವೇ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳು ನಿಷ್ಕಿçÃಯವಾಗಿದ್ದನ್ನು ಚಾಲ್ತಿ/ಸಕ್ರಿಯ ಮಾಡಿಸಿಕೊಳ್ಳುವುದು, ಆಧಾರ್ ಜೋಡಣೆ ಮಾಡದೇ ಇದ್ದವರು ತಮ್ಮ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳುವುದು, ಬ್ಯಾಂಕ್ ಖಾತೆಗಳು ಎನ್‌ಪಿಸಿಐ ಆ್ಯಕ್ಟಿವ್ ಮಾಡಿಸಿಕೊಳ್ಳತಕ್ಕದ್ದು, ಬ್ಯಾಂಕ್ ಖಾತೆಗಳು ಹೊಂದದೇ ಇರುವವರು ಅಂಚೆ ಕಛೇರಿ ಬ್ಯಾಂಕ್‌ಗಳಲ್ಲಿ (ಐಪಿಪಿಬಿ) ಅಡಿ ಅಥವಾ ಇತರೆ ಯಾವುದೇ ಬ್ಯಾಂಕ್‌ಗಳಲ್ಲಿ ಹೊಸ ಖಾತೆಗಳನ್ನು ತೆರೆಯಲು ತಿಳಿಸಲಾಗಿದೆ. ಇಂತಹ ಸಮಸ್ಯೆಗಳು ಕೂಡಲೇ ಬಗೆಹರಿಸಿಕೊಂಡಿದ್ದಲ್ಲಿ ಮುಂದಿನ ತಿಂಗಳ ಸೆಪ್ಟೆಂಬರ್-2023ರ ಮಾಹೆಗೆ ನಗದು ಹಣ ವರ್ಗಾವಣೆಗೆ ಅರ್ಹರಾಗುವರು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಸೀಲ್ದಾರರ ಕಛೇರಿ (ಆಹಾರ ಶಾಖೆ)ಗಳಲ್ಲಿ, ನ್ಯಾಯಬೆಲೆ ಅಂಗಡಿಗಳ ಮುಂದೆ ಬ್ಯಾಂಕ್ ಖಾತೆಗಳ ಸಮಸ್ಯೆಗಳನ್ನು ಹೊಂದಿರುವ ಫಲಾನುಭವಿಗಳ ಪಟ್ಟಿಯನ್ನು ಪ್ರದರ್ಶಿಸಲಾಗಿದೆ. ಅಂತಹ ಪಡಿತರ ಚೀಟಿ ಫಲಾನುಭವಿಗಳು ಕೂಡಲೇ ತಮ್ಮ ಬ್ಯಾಂಕ್ ಖಾತೆಗಳನ್ನು ಸಕ್ರೀಯಗೊಳಿಸುವುದು, ಆಧಾರ್ ಜೋಡಣೆ ಮಾಡುವುದು.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 42273 ಪಡಿತರ ಚೀಟಿ ಸದಸ್ಯರುಗಳ ಇ-ಕೆವೈಸಿ ಮಾಡಿಸಿಕೊಂಡಿರುವುದಿಲ್ಲ. ಅಂತಹವರು ಕೂಡಲೇ ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡುಗಳ ಸದಸ್ಯರ ಇ-ಕೆವೈಸಿ ಮಾಡಿಸಿಕೊಳ್ಳವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Ghantepatrike kannada daily news Paper

Leave a Reply

error: Content is protected !!