ನೇತ್ರದಾನ ಮಾಡಿ ಮಾನವೀಯತೆ ಮೆರೆದ ಇಮ್ಯಾನುವೆಲ್ ಕೊಡ್ಡಿಕರ್
ಬೀದರ: ತಮ್ಮ ೪೫ನೇ ವರ್ಷದ ಜನ್ಮದಿನದ ಪ್ರಯುಕ್ತ ಇತರರಿಗೆ ಮಾದರಿಯಾಗುವಂತೆ ಬ್ರಿಮ್ಸ್ ಸುಶ್ರೂಶಕ ಅಧೀಕ್ಷಕ ಇಮ್ಯಾನ್ಯುವೆಲ್ ಕೊಡ್ಡಿಕರ್ ತಮ್ಮ ಕಣ್ಣುಗಳ ದಾನ ಮಾಡಿದ್ದಾರೆ ಎಂದು ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ತಿಳಿಸಿದರು. ನಗರದ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸುಶ್ರೂಶಕ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬ್ರಿಮ್ಸ್ ಸುಶ್ರೂಶಕ ಅಧೀಕ್ಷಕ ಇಮ್ಯಾನ್ಯುವೆಲ್ ಕೊಡ್ಡಿಕರ್ ಅವರು ಇತರರಿಗೂ ಮಾದರಿಯಾಗುವಂತೆ ಕಂಗಳ ದಾನಗೈದಿದ್ದಾರೆ.. ಕೇವಲ ತನಗಾಗಿ ಬದುಕದೆ ಸಮಾಜ, ದೇಶ ಮತ್ತು ಬಡವರು, ದೀನ ದುರ್ಬಲರು ಹಾಗೂ ಅಂಧ ಅನಾಥರಿಗಾಗಿಯೂ ಬದುಕಬೇಕು. ಮರಣದ ನಂತರ ಶರೀರ ಮಣ್ಣಲ್ಲಿ ಮಣ್ಣಾಗದೆ ಅಂಧರಿಗೆ ಕಣ್ಣು ನೀಡಿದಂತಾಗುತ್ತದೆ. ತಮ್ಮಿಂದ ಇಬ್ಬರಿಗೆ ದೃಷ್ಟಿ ಬರುತ್ತದೆ ಎಂದು ಕಂಗಳ ನೀಡಿ ಮಾನವೀಯತೆ ಮೆರೆದಿದ್ದಾರೆ. ತನ್ಮೂಲಕ ಇಮ್ಯಾನ್ಯುವೆಲ್ ಅವರು ತಮ್ಮ ಅರ್ಥಪೂರ್ಣ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅವರ ಮಾದರಿ ಕಾರ್ಯಕ್ಕೆ ಶುಭ ಹಾರೈಸುತ್ತೇವೆ ಎಂದು ಡಾ. ರಾಜಕುಮಾರ ಹೆಬ್ಬಾಳೆ ತಿಳಿಸಿದ್ದಾರೆ.
ನೇತ್ರ ದಾನಿಗಳಾದ ಬ್ರಿಮ್ಸ್ ಸುಶ್ರೂಶಕ ಅಧೀಕ್ಷಕ ಇಮ್ಯಾನ್ಯುವೆಲ್ ಕೊಡ್ಡಿಕರ್ ಅವರು ಬ್ರಿಮ್ಸ್ ಸಿಬ್ಬಂದಿಗಳಿAದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ “ಜೀವ ಸಾರ್ಥಕ” ಎಂಬ ಒಂದು ಸರ್ಕಾರಿ ಅಪ್ಲಿಕೇಶನ್ ಇದೆ. ಆ ಆಪ್‌ನಲ್ಲಿ ಯಾರು ಬೇಕಾದರೂ ಕಣ್ಣು, ಮೂತ್ರಪಿಂಡ ಸೇರಿದಂತೆ ಅಂಗಾAಗಗಳ ದಾನ ಮಾಡಲು ಸಾಧ್ಯವಿದೆ. ಪ್ರತಿಯೊಬ್ಬರೂ ಮುಂದೆ ಬರಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಉನ್ನತ ಹುದ್ದೆಗಳಲ್ಲಿ ಇರುವವರು ಅಂಗಾAಗಗಳ ದಾನ ಮಾಡಲು ಮುಂದೆ ಬರಬೇಕಾಗಿದೆ ಎಂದು ಇಮ್ಯಾನ್ಯುವೆಲ್ ಕೊಡ್ಡಿಕರ್ ತಿಳಿಸಿದರು.ಇದೇ ವೇಳೆ ಬ್ರಿಮ್ಸ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಸುಶ್ರೂಶಕರು ಉಪಸ್ಥಿತರಿದ್ದರು.