ನೂತನವಾಗಿ ವಿಧಾನ ಪರಿಷತ್ ಗೆ ಆಯ್ಕೆ
ನೂತನವಾಗಿ ವಿಧಾನ ಪರಿಷತ್ ಗೆ ಆಯ್ಕೆಯಾದ ವಿಧಾನ ಪರಿಷತ್ ಸಭಾ ನಾಯಕರು ಹಾಗೂ ಸಚಿವರಾದ ಶ್ರೀ ಬೋಸರಾಜು, ಡಾ: ಯತೀಂದ್ರ ಸಿದ್ದರಾಮಯ್ಯ, ಐವನ್ ಡಿಸೋಜಾ, ಬಲ್ಕೀಸ್ ಬಾನು ಅವರು ಇಂದು ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ಅವರಿಂದ ಚುನಾವಣಾ ಪ್ರಮಾಣಪತ್ರ ಸ್ವೀಕರಿಸಿದರು .ಈ ಸಂದರ್ಭದಲ್ಲಿ ಹಾಜರಿದ್ದು ನೂತನ ಸದಸ್ಯರಿಗೆ ಶುಭ ಕೋರಿದೆ. ವಿಧಾನಸಭಾ ಮುಖ್ಯ ಸಚೇತಕರಾದ ಶ್ರೀ ಅಶೋಕ್ ಪಟ್ಟಣ್, ಪ್ರಕಾಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.