ನಿಯಮಿತ ಯೋಗದಿಂದ ಉತ್ತಮ ಆರೋಗ್ಯ : ನ್ಯಾ.ಆನಂದಶೆಟ್ಟಿ
ಬೀದರ್ : ನಿಯಮಿತ ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್ ಎಂ.ಆನಂದಶೆಟ್ಟಿ ಹೇಳಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪಾ ಪಾಟೀಲ್ ಮಾತನಾಡಿ, ಯೋಗ ಮಾಡುವುದು ಕೇವಲ ದಿನಾಚರಣೆಗೆ ಸೀಮಿತವಾಗದೇ ನಮ್ಮ ದಿನಚರಿಯಾಗಬೇಕು. ನಿರಂತರ ಯೋಗದಿಂದ ಮಾತ್ರ ಲಾಭವಾಗಲಿದೆ ಎಂದರು.
ನ್ಯಾಯ್ಯಾಧೀಶರಾದ ಸಚಿನ್ ಎಸ್. ಕೌಶಿಕ, ವಿಕೆ ಕೋಮಲಾ, ಪ್ರಕಾಶ್ ಅರ್ಜುನ್ ಬನಸೊಡೆ, ಪ್ರಭು ಎನ್ ಬಡಿಗೇರ್, ಕಾಡಪ್ಪ ಹುಕ್ಕೇರಿ, ರಾಮಮೂರ್ತಿ, ಎಂಡಿ ಸೇಜ್ ಚೌತಾಯ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.ಜಗದೀಶ್ವರ ಅವರು ಯೋಗ ಮಾರ್ಗದರ್ಶನ ನಡೆಸಿಕೊಟ್ಟರು.