ನಾಳೆ ವಕೀಲರಿಗಾಗಿ ವಿಶೇಷ ಕಾನೂನು ಕಾರ್ಯಾಗಾರ – ಪಾಟೀಲ್
ಬೀದರ : ಬೀದರ ನಗರದ ನ್ಯಾಯಾಲಯದ ಆವರಣದಲ್ಲಿನ ವಕೀಲರ ಭವನದಲ್ಲಿ ಜುಲೈ ೨೭ ಮತ್ತು ೨೮ ರಂದು ಜಿಲ್ಲೆಯ ವಕೀಲರಿಗಾಗಿ ವಿಶೇಷ ಕಾನೂನು ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪಾ ಪಾಟೀಲ ತಿಳಿಸಿದ್ದಾರೆ.
ರಾಜ್ಯ ವಕೀಲರ ಪರಿಷತ್, ಕೆ.ಎಸ್.ಬಿ.ಸಿ , ಲಾ ಅಕಾಡೆಮಿ ಹಾಗೂ ಬೀದರ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಶನಿವಾರ ಬೆಳಿಗ್ಗೆ ವಕೀಲರ ಭವನದಲ್ಲಿ ಏರ್ಪಡಿಸಿರುವ ಕಾನೂನು ಕಾರ್ಯಗಾರ ಶಿಬಿರವನ್ನು ಕರ್ನಾಟಕ ಉಚ್ಚ ನ್ಯಾಯಲಯ ಮತ್ತು ಆಡಳಿತಾತ್ಮಕ ನ್ಯಾಯಮೂರ್ತಿಗಳು ಎಸ್.ವಿಶ್ವಜೀತ್ ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬೀದರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಎಮ್ ಆನಂದಶೆಟ್ಟಿ ಭಾಗವಹಿಸುವರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಶಿವಶರಣಪ್ಪಾ ಪಾಟೀಲ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ರಾಜ್ಯ ವಕೀಲ್ ಪರಿಷತ್ ಸದಸ್ಯ ಹರಿಷ್ ಎಸ್ , ಎಸ್ ಬಸವರಾಜ, ಮೂರ್ತಿ ದಯಾನಂದ ನಾಯ್ಕ ಭಾಗವಹಿಸುವರು ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರÀಡು ದಿನಗಳ ಕಾಲ ನಡೆಯುವ ಕಾರ್ಯಗಾರದಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ೨೦೨೩, ಇತ್ತೀಚಿನ ಹೊಸ ತೀರ್ಪುಗಳು, ಭಾರತೀಯ ನ್ಯಾಯ ಸಂಹಿತೆ ೨೦೨೩, ಸೇಷನ್ ಟ್ರೆöÊಲ್ ಮತ್ತು ವೃತ್ತಿಪರ ನೀತಿಶಾಸ್ತç ವಿಷಯಗಳ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗಿದ್ದು ಜಿಲ್ಲೆಯ ಎಲ್ಲ ವಕೀಲರು ಭಾಗವಹಿಸಿ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.