ನವೆಂಬರ ಡಿಸೆಂಬರನಲ್ಲಿ ರಾಜ್ಯಾದ್ಯಂತ ಅಕ್ಷರ ಜ್ಯೋತಿ ಯಾತ್ರೆ
ಬೀದರ : ರಾಜ್ಯದ 35 ಜಿಲ್ಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಮೌಲ್ಯ, ಸಂಸ್ಕಾರದ ತತ್ವ ಹಾಗೂ ವಿದ್ಯಾಭ್ಯಾಸದ ನೀತಿ ಪಾಠವನ್ನು ಸೇರಿದಂತೆ ಮಕ್ಕಳಿಗೆ ಫಲಿತಾ ಂಶದಲ್ಲಿ ಏಳಿಗೆ ಹಾಗೂ ಅವರು ಜೀವನದಲ್ಲಿ ಅಭಿವೃದ್ದಿ ಹೊಂದುವ ನಿಟ್ಟಿನಲ್ಲಿ ವಿಶೇಷವಾಗಿ ಬಸವಕುಮಾರ ಪಾಟೀಲ ಅವರು ಮಕ್ಕಳಿಗೆ ಉಪನ್ಯಾಸ ನೀಡುವ ಯೋಜನೆಯನ್ನು ಅಕ್ಷರ ಜ್ಯೋತಿಯಾತ್ರೆಯ ಉದ್ದೇಶವಾಗಿದೆ ಎಂದು ಜಗನಾಥ ಹಲಮಡಗೆ ತಿಳಿಸಿದರು.
ಬರುವ ನವೆಂಬರ ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಮೂಲ ಉದ್ದೇಶ ಇಡೀ ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಅಭೀವೃದ್ದಿ ಹೊಂದುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅಕ್ಷರ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕಾರಣಿ ಸಮಿತಿ ರಚಿಸಲಾಯಿತು. ಈ ಅಕ್ಷರ ಜ್ಯೋತಿಯಾತ್ರೆಯ ಅಧ್ಯಕ್ಷರನ್ನಾಗಿ ಜಗನಾಥ ಹಲಮಡಗೆ ಕಾರ್ಯಧ್ಯಕ್ಷರಾಗಿ ಪಂಡಿತ ಬಾಳುರೆ, ಪ್ರಧಾನ ಕಾರ್ಯಧರ್ಶಿಯಾಗಿ ಶಂಭುಲಿಂಗ ಕಾಮಣ್ಣ ಅವರನ್ನು ಆಯ್ಕೆ ಮಾಡಲಾಯಿತು.
ಭಾನುವಾರ ಬೀದರ ನಗರದಲ್ಲಿ ಕಲ್ಯಾಣ ಕರ್ನಾಟಕದ ಮಕ್ಕಳ ಮಹಾಮನೆಯ ಆವರಣದಲ್ಲಿ ಕಾರ್ಯಕಾರಿಣಿ ಸಭೆ ಪೂರ್ವಭಾವಿ ಸಭೆ ನಡೆಸಿದು. ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರಾಮಶೆಟ್ಟಿ ಪನ್ನಾಳೆ, ಮಲ್ಲಮ್ಮ ಪಾಟೀಲ, ಕಾರ್ಯದರ್ಶಿ ಹುಡಗಿ ಗುಂಡಪ್ಪ, ಮಾಧ್ಯಮ ಸಲಹೇಗಾರರಾಗಿ ಪತ್ರಕರ್ತ ಧರ್ಮೇಂದ್ರ ಪೂಜಾರಿ ಬಗ್ದೂರಿ, ಕೋಶಾಧ್ಯಕ್ಷರಾಗಿ ಶರಣು ಹಣಮಶೆಟ್ಟಿ, ಸಂಘಟನ ಕಾರ್ಯದರ್ಶಿ ಕಲ್ಯಾಣರಾವ ಚಳಕಾಪೂರೆ, ರಮೇಶ ಚಿಲ್ಲರಗೆ, ನಾಗೇಂದ್ರ ಧುಮನಸೂರೆ, ಸಹಸಂಘಟನ ಕಾರ್ಯದರ್ಶಿ ರಾಜಕುಮಾರ ಧುಮನಸೂರೆ, ಮನೋಜ ಬುಕ್ಕಾ, ಸದಸ್ಯರಾಗಿ ಸಂಜೀವಕುಮಾರ ಮಣ್ಣುರೆ, ಶಿವಾಜಿರಾವ ಮಾನೆ, ತೀರ್ಥಪ್ಪ ಭೀಮಶೆಟ್ಟಿ, ಮಲ್ಲಿಕಾರ್ಜುನ ಸಂಗಮಕರ ಮುಂತಾದವರನ್ನು ಅಕ್ಷರ ಜ್ಯೋತಿಯಾತ್ರೆಯ ಆಯೋಜನೆ ಕಾರ್ಯಕಾರಿಣಿ ಸಮಿತಿಯನ್ನು ನೇಮಕ ಮಾಡಲಾಯಿತು.
ಸಭೆಯನ್ನು ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಬಸವಕುಮಾರ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ ಅಕ್ಷರ ಜ್ಯೋತಿಯಾತ್ರೆಯ ಉದ್ದೇಶವನ್ನು ವಿವರಿಸಿದರು. ಅಕ್ಷರ ಜ್ಯೋತಿಯಾತ್ರೆಯನ್ನು ಎರಡು ವಿಭಾಗವಾಗಿ ಮಾಡಲಾಗುತ್ತದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂದು ಈ ಅಕ್ಷರ ಜ್ಯೋತಿಯಾತ್ರೆಯನ್ನು ಒಟ್ಟು ಎರಡುವರೆ ತಿಂಗಳ ಕಾಲ ನಿರಂತವಾಗಿ ನಡೆಯಲಿದೆ. ಮಧ್ಯ ಸ್ವಲ್ಪ ಮಟ್ಟಿಗೆ ಒಂದನೆ ಭಾಗವಾಗನಂತರ ಸ್ವಲ್ಪ ಮಟ್ಟಿಗೆ ವಿರಾಮ ನೀಡಲಾಗುತ್ತದೆ. ಮತ್ತೆ ಎರಡನೆ ಭಾಗವಾದ ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಷರ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭ ಆಯೋಜನೆ ಮಾಡಲಾಗುತ್ತದೆ ಎಂದು ಬಸವಕುಮಾರ ಪಾಟೀಲ ತಿಳಿಸಿದರು.
ಶೈಕ್ಷಣಿಕ ಚಿಂತಕ ಗಿರೀಶ ಕಡ್ಲೇವಾಡ ಸಭೆಯಲ್ಲಿ ಭಾಗವಹಿಸಿ ತಮ್ಮ ಅನುಭವ ನೀಡಿ ಅಕ್ಷರ ಜ್ಯೋತಿಯಾತ್ರೆಗೆ ಸಲಹೆ ಸೂಚನೆಗಳನ್ನು ನೀಡಿದರು. ಎಲ್ಲಾ ಸದಸ್ಯರು ತಮ್ಮ ಅನುಭವವನ್ನು ಹಂಚಿಕೊಂಡರು.