ನಕಲಿ ಕ್ಲಿನಿಕ ಮತ್ತು ಲ್ಯಾಬರೋಟ್ರಿಗಳನ್ನು ನಡೆಸುತ್ತಿರುವವರ ಮೇಲೆ ಕ್ರಮ ಜರುಗಿಸಲು ಮನವಿ
ಬೀದರ ಜಿಲ್ಲೆ ಗ್ರಾಮೀಣ ಮತ್ತು ನಗರ ಭಾಗದಲ್ಲಿ ನಕಲಿ ಕ್ಲಿನಿಕ ಮತ್ತು ಲ್ಯಾಬರೋಟ್ರಿಗಳನ್ನು ನಡೆಸುತ್ತಿರುವವರ ಮೇಲೆ ಕ್ರಮ ಜರುಗಿಸಲು ಒತ್ತಾಯಿಸಿ ಮನವಿ ಪತ್ರ.ವೀರ ಕನ್ನಡಿಗರ ಸೇನೆ ಜಿಲ್ಲಾ ಹಾಗೂ ರಾಜ್ಯ ಘಟಕದಿಂದ ಮನವಿ ಪತ್ರದ ಮೂಲಕ ಒತ್ತಾಯ ಮಾಡುವುದೇನೆಂದರೆ, ಬೀದರ ಜಿಲ್ಲೆ 10 ನೇ ಪಿ ಯು ಸಿ ಅನುತ್ತಿರ್ಣರಾದವರು ಜನರಿಗೆ ಚಿಕಿತ್ಸೆ ನೀಡುವ ಹೆಸರಲ್ಲಿ ಜಿಲ್ಲೆ ಗ್ರಾಮೀಣ, ನಗರ ಭಾಗದ ಜಿಲ್ಲೆಯ ಗಡಿ ಭಾಗದ ಜನರಿಗೆ ಮೊಸ ವಂಚನೆ ಮಾಡುತ್ತಿದ್ದಾರೆ. ನಕಲಿ ವೈದ್ಯರ, ನಕಲಿ ಕ್ಲಿನಕಗಳ ಮೇಲೆ ಕ್ರಮವನ್ನು ಜರುಗಿಸಿ ಕಡಿವಾಣವನ್ನು ಹಾಕಲು ಕಳೆದ ಈ ಹಿಂದ ಮಾರ್ಚ 21 ರಂದು ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಅಮೃತ ಪಾಟಿಲ ರವರ ನೇತ್ರತ್ವದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿರುತ್ತೇವೆ. ಇಲ್ಲಿವರೆಗೆ ಯಾವುದೆ ಕ್ರಮವನ್ನು ಜರುಗಿಸಿದ ಕಾರಣ ಬೀದರ ಜಿಲ್ಲೆಯಲ್ಲಿ ಇರುವ ನಕಲಿ ವೈದ್ಯರು ಮತ್ತು ನಕಲಿ ಕ್ಲಿನಿಕಗಳ ವಿರುದ್ದ ಕ್ರಮವನ್ನು ಜರುಗಿಸಲು ವಿಫಲರಾದ ಕಾರಣ ಮನವಿ ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ತಮ್ಮಗೆ ಮಾನ್ಯ ಮುಖ್ಯ ಕಾರ್ಯಕನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೀದರ ರವರಿಗೆ. ಮನವಿ ಪತ್ರದ ಮೂಲಕ ಒತ್ತಾಯ ಮಾಡುತ್ತಿದ್ದೇವೆ. ಸುಮಾರು ಎರಡು ಸಾವಿರ ಬಂಗಾಳಿ ವೈದ್ಯರು ಯಾವುದೆ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆಯದೆ, ಗ್ರಾಮೀಣ ಭಾಗದ ಜನರಿಗೆ ಚಿಕಿತ್ಸೆ ಕೊಡಿಸುವ ಹೆಸರಲ್ಲಿ ಮೋಸ ಮತ್ತು ವಂಚನೆ ಮಾಡುತ್ತಿದ್ದಾರೆ. ಇವರ ಮೇಲೆ ಇವರಿಗೆ ಕುಮ್ಮಕು ನೀಡುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಕ್ರಿಮಿನಲ ಮೊಕ್ಕದಮೆ ದಾಖಲಿಸಬೇಕು. ಕ್ಲಿನಿಕಗಳನ್ನು ಸ್ಥಾಪನೆ ಮಾಡಬೇಕ್ಕಾದರೆ, ಸರ್ಕಾರದ ವೈದ್ಯಕೀಯ ಸಚಿವಾಲಯದ ಆದೇಶದಂತೆ, ಕೆ ಪಿ ಎಂ ಇ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದುಕೊಂಡು ಕ್ಲಿನಿಗಳ ಮೂಲಕ ಜನರಿಗೆ ಚಿಕಿತ್ಸೆ ನೀಡಬೇಕು. ಆದರೆ ಬೀದರ ಜಿಲ್ಲೆಯಲ್ಲಿ ಸುಮಾರ 500 ಅಧಿಕವಾಗಿ ಸಾಮಾನ್ಯ ವೈದ್ಯಕೀಯ ಶಿಕ್ಷಣವನ್ನು ಪಡೆಯದೆ, 10 ನೇ ಪಿ ಯು ಸಿ ಉತ್ತಿರ್ಣ ಮತ್ತು ಅನುರ್ತ್ತಿಣರಾದವರು,ಕ್ಲಿನಿಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಜಿಲ್ಲಾ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕ ಆರೋಗ್ಯ ಅಧಿಕಾರಿಗಳೆ ಕಾರಣರಾಗಿರುತ್ತಾರೆ. ಕಾರಣರಾದವರ ಮೇಲೆ ನಿರ್ಧಾಕ್ಷಣವಾಗಿ ಕ್ರಮಗಳನ್ನು ಜರುಗಿಸಬೇಕು. ಜಿಲ್ಲೆಗೆ ರೋಗಿ ಬಡ ರೋಗಿಗಳ ಸಲುವಾಗಿ ಬಂದಿರುವ ಔಷದಿಗಳನ್ನು ಖಾಸಗಿ ಕ್ಲಿನಿಕ ಮತ್ತು ವೈದ್ಯರಿಗೆ ಮಾರಾಟವನ್ನು ಮಾಡುತ್ತಿರುವ ಆರೋಗ್ಯ ಅಧಿಕಾರಿಗಳು ಔಷದ ಅಧಿಕಾರಿಗಳಿಗೆ ಸೇವೆಯಿಂದ ಅಮಾನತು ಮಾಡಬೇಕು.
15 ದಿವಸದ ಒಳಗಾಗಿ ಸಂಬAಧಪಟ್ಟವರ ಮೇಲೆ ಕ್ರಮ ಜರುಗಿಸಬೇಕು. ವಿಳಂಬವಾಗಿದ್ದಲ್ಲಿ ಚಿಕಿತ್ಸೆ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಚಾರವನ್ನು, ಜಿಲ್ಲೆಯಲ್ಲಿ ನೆಲೆಸಿರುವ ನಕಲಿ ಕ್ಲಿನಿಕ ಮತ್ತು ನಕಲಿ ವೈದ್ಯರಿಗೆ ಶಿಕ್ಷೆಯಾಗೂವವರೆಗೂ ನಿರಂತರವಾದ ಹೋರಾಟವನ್ನು ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲಲ್ಲಿಸಲಾಯಿತು
ಈ ಸಂದರ್ಭದಲ್ಲಿ ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕರಾದ ಸುಬ್ಬಣ್ಣ ಕರಕನಳ್ಳಿ, ಮುಕೇಶ ಶಾಹಗಂಜ, ನಾಗೇಂದ್ರ ಸೈನೆ, ಬಸವರಾಜ ಜಡಗೆ,ಅಂಬಾದಾಸ ಸೈನೆ, ಸಂಜುಕುಮಾರ ಇದ್ದರು.