ಧ್ಯಾನದಿಂದ ಬೆಳೆ, ಸಂಗೀತದಿಂದ ಹಸು ಹೆಚ್ಚು ಹಾಲು ಕೊಡುತ್ತದೆ – ವಾಲಿ
ಬೀದರ್ ಸೆ. 04ಃ ಸಾಮಾಜಿಕ ಜಾಲತಾಣಗಳಿಂದ ಹೊರಬಂದು ಶಿಕ್ಷಣದ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ, ಪರಿಶ್ರಮದಿಂದ ಉನ್ನತ ಶಿಕ್ಷಣ ಪಡೆದು ದೇಶ ಸೇವೆ ಗೈಯಿರಿ ಎಂದು ಯುವ ಉತ್ಸಾಹಿ ತರುಣ ಉದ್ಯಮಿ ವಿವೇಕ್ ದೀಪಕ್ ವಾಲಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಸೆ. 02 ರಂದು ರಾತ್ರಿ ಬೀದರ ಹಳೆ ನಗರ ಪ್ರದೇಶದ ಪನ್ಸಾಲ್ ತಾಲೀಮ್ ಬಡಾವಣೆಯಲ್ಲಿರುವ ಶ್ರೀ ಸಂತ ಮಹಾಸಿದ್ಧ ಮಡಿವಾಳೆಶ್ವರ ಮಂದಿರದಲ್ಲಿ ಮಾತೆ ಮಾಣಿಕೇಶ್ವರಿ ಸಾಮಾಜಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ (ರಿ) ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಮಂದಿರದ ಸಂಯುಕ್ತಾಶ್ರಯದಲ್ಲಿ ಶ್ರಾವಣ ಸಮಾಪ್ತಿ ನಿಮಿತ್ತ ಏರ್ಪಡಿಸಿದ ಸಾಮಾನ್ಯ ಯೋಜನೆಯಡಿ ಸಾಂಸ್ಕøತಿಕ ಕಾರ್ಯಕ್ರಮ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪಾಲಕರು ಮಕ್ಕಳ ಕೈಗೆ ಮೋಬೈಲ್ ನೀಡದೇ ಎಚ್ಚರಿಕೆ ವಹಿಸಬೇಕೆಂದ ಅವರು, ಧ್ಯಾನದಿಂದ ಹೊಲದಲ್ಲಿ ಬೆಳೆ ಹೆಚ್ಚು ಬೆಳೆಯುತ್ತದೆ. ಸಂಗೀತದಿಂದ ಹಸುಗಳು ಹೆಚ್ಚು ಹಾಲು ಕೊಡುತ್ತದೆ ಎಂಬುವುದು ಸಂಶೋಧನೆಗಳಿಂದ ಸಾಬಿತಾಗಿದೆ ಎಂದರು.
ಹಂಸಕವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಗ್ರಾಥಾಲಯ ಕೇಂದ್ರದಲ್ಲಿ 1.25 ಕೋಟಿ ಪುಸ್ತಕಗಳು ಮೋಬೈಲ್ನಲ್ಲಿ ಓದಿ 225 ಜನ ಯುವಕರು ಉದ್ಯೋಗ ಪಡೆದಿದ್ದಾರೆ. ನೀವು ಪಡೆಯಿರಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಅಜೀತ್ ಚಿಲ್ಲರ್ಗಿ, ಗಣಪತಿ ಸಕ್ಕರೇಪ್ಪನೋರ್, ಶರದ ಘಂಟೆ, ಶಿವಕುಮಾರ ಕೋತಮಿರ್, ಗಿರೀಶ್ ಪಿಟ್ಲೆ, ವಿವೇಶ ಚಿಲ್ಲರ್ಗಿ, ಸುನೀಲ ಭಾವಿಕಟ್ಟಿ, ರಾಮಚಂದ್ರ ಸಪಾರೆ ಆಗಮಿಸಿ ಮಾತನಾಡಿದರು.
ಕು.ಮಾಣಿಕೇಶ್ವರಿ ಭರತನಾಟ್ಯ ಪ್ರದರ್ಶನ ಮಾಡಿದರು, ನಾಗಶೆಟ್ಟಿ ಧರಮಪೂರ್ ತತ್ವ ಪದ, ಭಜನೆ ಪದ ಹಾಡುಗಳನ್ನು ಹಾಡಿದರು. ಇಡಿ ರಾತ್ರಿ ಭಜನೆ ಸತ್ಸಂಗ್ ನಡೆಯಿತು. ಸುಮಾರು 60 ಜನರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಪ್ರೀಯಾ ಪಿಟ್ಲೆ ಸ್ವಾಗತಿಸಿದರು. ತಿಪ್ಪಯ್ಯಾ ಸ್ವಾಮಿ ಚಾಂಬೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಬಸವ ರಾಂಪೂರ ನಿರೂಪಿಸಿದರು. ಕೊನೆಯಲ್ಲಿ ಪೂಜಾ ಪಿಟ್ಲೆ ವಂದಿಸಿದರು. ಡಾ.ಧನರಾಜ, ವಿಜಯಕುಮಾರ ಕೋತಮಿರ್, ವಿನಾಯಕ ಕೋತಮಿರ್, ಅವಿನಾಶ್, ಅಂಬರೀಷ, ಶಾಂತಮ್ಮ, ಈರಮ್ಮ, ಚಂದ್ರಮ್ಮ, ಸಂಗಮ್ಮ, ಶರಣಮ್ಮಾ ಧರಮಪೂರ್ ಸೇರಿದಂತೆ ಇತರರು ಇದ್ದರು.