ಬೀದರ್

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬೀದರ ತಾಲೂಕು ಚಿಕಪೇಟ ವಲಯದ ಮರಕಲ ಕಾರ್ಯಕ್ಷೇತ್ರದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶಿವರಾಜ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಚಾಲನೆ ಮಾಡಿದರು. ಶಿಕ್ಷಕ ವೃಂದದವರಾದ ಬಲವಂತರಾವ ರಾಠೋಡ, ಧನರಾಜ್ ಪವರ್, ಶ್ರೀಮತಿ ಮಂಗಲ, ಶ್ರೀಮತಿ ರೇಖಾ, ರವಿರಾಜ್, ಮೇಲ್ವಿಚಾರಕರಾದ ಸುನೀಲ್ ಕುಮಾರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸರಸ್ವತಿ, ಸೇವಾ ಪ್ರತಿನಿಧಿಯಾದ ಶಾಂತಮ್ಮ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಶಿವರಾಜ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸುವುದು. ಪೆÇೀಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂಬ ಗುರಿಯನ್ನಿಟ್ಟುಕೊಳ್ಳಬೇಕು. ಒಳ್ಳೆಯ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಬೇಕು, ಜಾಗರೂಕತೆಯಿಂದಿರಿ ಯಾವಾಗ ನಿಮಗೆ ನೀವು ದುರಭ್ಯಾಸಗಳಕಡೆಗೆ ವಾಲುತ್ತಿದ್ದಿರಿ ಎಂದು ಅನ್ನಿಸುತ್ತದೆಯೋ ಅಂತಹಾ ಪ್ರತಿ ಬಾರಿಯೂ ಜಾಗರೂಕತೆಯಿಂದಿರಿ. ನಿಮ್ಮ ವರ್ತನೆಯ ಬಗ್ಗೆ ನಿಮಗೆ ಎಚ್ಚರವಿರಲಿ. ನಮ್ಮ ದುರಭ್ಯಾಸಗಳಿಂದ ಉಂಟಾಗುವ ಲಾಭವೇಷ್ಟು, ಹಾನಿಯೇಷ್ಟು ಎಂದು ಆಳವಾಗಿ ಆಲೋಚಿಸಿ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಕೆಟ್ಟ ಹವ್ಯಾಸಗಳನ್ನು ಬದಲಿಸಿಕೊಳ್ಳಿ. ದುಶ್ಚಟಗಳಿಂದ ಆಗುವ ಹಾನಿಕರ ಪ್ರತಿಯೊಬ್ಬ ನಾಗರಿಕನೂ ಜಾಗ್ರತೆ ವಹಿಸಬೇಕು, ನಮ್ಮ ಸುತ್ತಮುತ್ತಲಿನ ವಾತರಣವೇ ಪರಿಸರ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Ghantepatrike kannada daily news Paper

Leave a Reply

error: Content is protected !!