ಬೀದರ್

ದ್ವೀಚಕ್ರ ವಾಹನ ಕಳ್ಳತನ ಪ್ರಕರಣದ ಆರೋಪಿಯ ಬಂಧನ

ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಹುಮನಾಬಾದ ಪೊಲೀಸ್ ಠಾಣೆಯಲ್ಲಿ ದಾಖಲಾದ ದ್ವೀಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಶ್ರೀ, ಶರಣಬಸಪ್ಪಾ ಕೋಡ್ಲಾ, ಸಿ.ಪಿ.ಐ ಹುಮನಾಬಾದ ವೃತ್ತ ರವರ ನೇತೃತ್ವದಲ್ಲಿ ರಚಿಸಿದ್ದ ತಂಡವು ಇಂದು ಹುಮನಾಬಾದ ಪಟ್ಟಣದ ಮಾಣಿಕ ನಗರ ಕಮಾನ ಹತ್ತಿರ ಅನುಮಾನಸ್ಪದ ವ್ಯಕ್ತಿಯನ್ನು ಹಿಡಿದು ವಿಚಾರಣೆಯಲ್ಲಿ ಅವನಿಂದ ಕಳ್ಳತನದ ಅಂದಾಜು 3,00,000=00 ಮೌಲ್ಯದ 5 ಮೋಟಾರ ಸೈಕಲ್ ವಾಹನಗಳನ್ನು ವಶ ಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಂಗ ಬಂಧನ ಕುರಿತು ಕಳುಹಿಸಲಾಗಿದೆ.
ದ್ವೀಚಕ್ರ ವಾಹನ ಕಳ್ಳನನ್ನು ಬಂಧಿಸಿದ ಅಧಿಕಾರಿ ಹಾಗು ಸಿಬ್ಬಂದಿಯವರ ಕಾರ್ಯಕ್ಕೆ ಹರ್ಷವ್ಯಕ್ತ ಪಡಿಸಿ ಪ್ರಶಂಸನೆ ಪತ್ರದೊಂದಿಗೆ ಬಹುಮಾನವನ್ನು ಘೋಶಣೆ ಮಾಡಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ.
Ghantepatrike kannada daily news Paper

Leave a Reply

error: Content is protected !!