ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿಗಳ ಪಾತ್ರ ಮಹತ್ತರ: ವೀರುಪಾಕ್ಷ ಶಿವಾಚಾರ್ಯರು
kk ವಾರ್ತೆ. ಬೀದರ್: ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿಗಳ ಪಾತ್ರ ಮಹತ್ತರ ಎಂದು ಹುಡಗಿ ಹಿರೇಮಠ ಸಂಸ್ಥಾನದ ಪೂಜ್ಯ ವೀರುಪಾಕ್ಷ ಶಿವಾಚಾರ್ಯರು ನುಡಿದರು.
ಗುರುವಾರ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಎಂಟನೇ ವಾರ್ಷಿಕ ಮಹಾಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಡಿರುವ ಅವರು, 2017 ರಲ್ಲಿ ಪ್ರಾರಂಭವಾದ ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿ ಬೀದರ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ನಿರ್ದೇಶಕರು ತಮ್ಮ ಸಂಕಲ್ಪದಂತೆ ಕಾರ್ಯ ಮಾಡಿದ್ದು ತಮಗೆ ಖುಷಿ ತಂದಿದೆ ತಮ್ಮ ಶೇರು ಸದಸ್ಯರಿಗೆ ಸರ್ಕಾರದ ಸಹಕಾರಿ ನಿಯಮದಂತೆ ಅನೇಕ ಯೋಜನೆ ನೀಡಿದಲ್ಲದೇ ಸಂಘದ ಸದಸ್ಯರು ಮಾಡುತ್ತಿರುವ ನಿಸ್ವಾರ್ಥ ಸೇವೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಈ ಸಂಸ್ಥೆಯು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲು ಎತ್ತಿದ ಕೈ. ಇದು ವಿರಶೈವ ಸನಾತನ ಪರಂಪರೆ ಪ್ರಸಾರಕ್ಕೂ ಮಾಡುತ್ತಿರುವ ಅಳಿಲು ಸೇವೆ ಕಂಡು ಹರ್ಷಭರಿತನಾಗಿರುವುದಾಗಿ ವೀರುಪಾಕ್ಷ ಶಿವಾಚಾರ್ಯರು ತಿಳಿಸಿದರು.
ಸಭೆಯ ನೇತೃತ್ವ ವಹಿಸಿದ ಡಾಕುಳಗಿಯ ಚನಬಸವ ಶ್ರೀಗಳು ಮಾತನಾಡಿ, ಕೇವಲ 6,00,000 ಚಿಲ್ಲರೆಯಿಂದ ಪ್ರಾರಂಭಿಸಿದ ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿ ಸಂಸ್ಥೆ ಇಂದು 6,98,81,321 ರೂ ವಹಿವಾಟು ಮಾಡಿರುವದು ಎಲ್ಲ ಸಧಸ್ಯರಿಗೆ ಹೆಮ್ಮೆಪಡುವ ಸಂದರ್ಭ. ಈ ಆಡಳಿತ ಮಂಡಳಿ ಜತೆಗೆ ಇಲ್ಲಿನ ಸಿಬ್ಬಂದಿಯವರ ಕಾರ್ಯ ಮೆಚ್ಚುಗೆ ವಿಷಯ. 2023-24 ಸಾಲಿನಲ್ಲಿ ಒಟ್ಟು 2,61,111 ರು.ಆದಾಯ ಮಾಡಿರುವುದು ಸದಸ್ಯರಿಗೆ ಖುಷಿ ತಂದಿದೆ. ಒಟ್ಟು ಬಂಡವಾಳ 1,50,09,815 ರೂ ಆಗಿರುತ್ತದೆ ಎಂದು ತಿಳಿಸಿದರು.
ಜೈ ಭಾರತ ಮಾತಾ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರು, ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಗುರುನಾಥ ಶಾಂತಿಕರ್, ಖಟಕಚಿಂಚೋಳಿ ಹುಗ್ಗೆಳ್ಳಿ ಮಠದ ಬಸವಲಿಂಗದೆವರು ಉಪಸ್ಥಿತರಿದ್ದರು.
ಜಗದ್ಗುರು ರೇಣುಕಾಚಾರ್ಯ ಭಾವಚಿತ್ರಕ್ಕೆ ಲಾಡಗೆರಿ ಹಿರೇಮಠದ ಪೂಜ್ಯ ಷ ಬ್ರ ಗಂಗಾಧರ ಶಿವಾಚಾರ್ಯರು ಪುμÁ್ಪರ್ಚನೆ ಮಾಡಿದರು. ಸಂಸ್ಥೆಯ ಅಧ್ಯಕ್ಷ ಮಹೇಶ್ವರ ಸ್ವಾಮಿ ಸಭೆಗೆ ಸ್ವಾಗತಿಸಿದರು. ಶಿವಕುಮಾರ ಹಿರೇಮಠ ಸಂಘದ ಆಯವ್ಯಯ ಮಂಡಿಸಿದರು. ಸಿಬ್ಬಂದಿ ರೇಖಾ ಶಿಲವಂತ ಲಾಭ ಮತ್ತು ಹಾನಿ ವಿವರಿಸಿದರು. ಡಾ ಬಸವರಾಜ ಸ್ವಾಮಿ 7ನೇ ವಾರ್ಷಿಕ ಸಾಮಾನ್ಯ ಸಭೆಯ ನಡಾವಳಿ ಓದಿದರು,
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೊಲಪುರ ಸ್ವಾಗತಿಸಿದರು.ಜೊತಿ ಜೈಶ್ರೀ, ಸಂಗಮೇಶ್ವರ ಸ್ವಾಮಿ, ಸಂತೋಷ ಜ್ಯಾಂತೆ, ರಾಜಕುಮಾರ, ಸುರೇಶ ಸ್ವಾಮಿ, ಸಂತೋಷ, ಶರಣಮ್ಮ, ಬಸವರಾಜ ಚಿಟ್ಟಾ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಬಸವಾ, ಸಂಜುಕುಮಾರ ಹಾಗೂ ಇತರರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಮರುಳಾರಾಧ್ಯ ಕಾರ್ಯಕ್ರಮ ನಿರೂಪಿಸಿ, ಡಾ.ಪ್ರಭುಲಿಂಗ ವಂದನೆ ಸಲ್ಲಿಸಿದರು.