ಬೀದರ್

ದುಬಾರಿ ರಾಕಿ ಬದಲು ನೂಲಿ ದಾರ ಕಟ್ಟಿ, ಹೇಲ್ಮೇಟ್ ನೀಡಿ ರಾಕಿ ಹಬ್ಬ ಆಚರಿಸಲು ಶಿವರಾಜ ಜಮಾದಾರ ಕರೆ

ಬೀದರ:- ಮತ್ತೆ ಬಂದಿದೆ ರಾಕಿ ಹಬ್ಬ ಸಹೋದರ, ಸಹೋದರಿಯರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ರಕ್ಷಾ ಬಂಧನ ಹಬ್ಬದಲ್ಲಿ ಸಹೋದರರಿಗೆ ದುಬಾರಿಯ ರಾಕಿ ಕಟ್ಟುವ ಬದಲು ನೂಲಿನ ದಾರವನ್ನೆ ಕಟ್ಟಿ ಸಹೋದರರಿಗೆ ಹೇಲ್ಮೆಟ್‍ನ್ನು ಉಡುಗೊರೆಯಾಗಿ ನೀಡಿ ಎಂದು ಬೀದರ ಭಾಗ್ಯವಂತಿ ಮೋಟಾರ ಡ್ರೈವಿಂಗ್ ಶಾಲೆಯ ಪ್ರಾಚಾರ್ಯ ಶಿವರಾಜ ಜಮಾದಾರ ಖಾಜಾಪೂರ ಸಲಹೆ ನೀಡಿದ್ದಾರೆ.
ಅಣ್ಣ-ತಮ್ಮಂದರಿಗೆ ದುಬಾರಿಯ ರಾಕಿಯ ಕಟ್ಟುವ ಬದಲು ಅದೇ ಹಣದಲ್ಲಿ ಹೇಲ್ಮೇಟ್ ಕೊಡಿಸಿದರೆ ಇದರಿಂದ ಬೈಕ್ ಓಡಿಸುವ ಸಹೋದರರ ಜೀವ ಉಳಿಯಲಿದೆ. ಇದರ ಸಹೋದರರಿಗೆ ನೀಡುವ ಬಲು ಅಪರೂಪದ ಉಡುಗೊರೆ ಆಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಅವರು ಹೇಳಿದ್ದಾರೆ.

Ghantepatrike kannada daily news Paper

Leave a Reply

error: Content is protected !!