ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ 50ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ, 1.25 ಕೋಟಿ ರೂ. ನಿವ್ವಳ ಲಾಭ,
ಔರಾದ (ಬಿ) ಶಾಖೆ ಆರಂಭ, ಅಕ್ಟೋಬರ್-2024ರಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವ – ವಿಜಯಕುಮಾರ ಅಣ್ಣೆಪ್ಪಾ ಪಾಟೀಲ ಗಾದಗಿ.
ಬೀದರ ಆ. 25: ಬ್ಯಾಂಕು ಸೇವೆಯ 50ನೇ ವರ್ಷದ ಪ್ರಗತಿ ಪಥದಲ್ಲಿ ಸಾಗುತ್ತಿದ್ದು ಅಡಿಟ್ನಲ್ಲಿ “ಎ” ಗ್ರೇಡ್ ಹೊಂದಿರುವ ಬ್ಯಾಂಕಾಗಿದ್ದು ಮುಂಬರುವ ಅಕ್ಟೋಬರ್ನಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವ 7 ದಿನಗಳ ಕಾಲ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ ವಿಶೇಷವಾಗಿ ಆಚರಿಸಲಾಗವುದು. ಬ್ಯಾಂಕು ಪ್ರಸಕ್ತ ಸಾಲಿನಲ್ಲಿ 1.25 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ವಿಜಯಕುಮಾರ ಅಣ್ಣೆಪ್ಪಾ ಪಾಟೀಲ ಗಾದಗಿರವರು ಹೇಳಿದರು.
ಅವರು ಇಂದು 25-08-2024ರಂದು ಬೆಳಿಗ್ಗೆ 11.00 ಗಂಟೆಗೆ ಬ್ಯಾಂಕಿನ ಸುವರ್ಣ ಮಹೋತ್ಸವದ 50ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಮಂಡಿಸಿ ಬ್ಯಾಂಕಿನ ಪ್ರಗತಿ ವಿವರಿಸಿದರು. ನೂತನವಾಗಿ ಔರಾದ (ಬಿ)ದಲ್ಲಿ ಶಾಖೆ ಆರಂಭಿಸಲಾಗಿದೆ. ಮುಖ್ಯ ಕಚೇರಿಯ ಮೇಲ್ಚಾವಣಿಯಲ್ಲಿ ಸೋಲಾರ ವಿದ್ಯುತ್ ಉತ್ಪಾದಿಸಿ ಬಳಸುವ ಮೂಲಕ ಬ್ಯಾಂಕಿಗೆ ವಿದ್ಯುತ್ತ ಬಿಲ್ನ್ನು ಉಳಿಸಿದ್ದು ಸೋಲಾರ ಬಳಸುವ ಬೀದರ ಜಿಲ್ಲೆಯ ಏಕೈಕ ಬ್ಯಾಂಕು ನಮ್ಮದಾಗಿದೆ ಎಂದರು. ಹಿರಿಯ ಸದಸ್ಯ ಶಿವಶರಣಪ್ಪಾ ವಾಲಿಯವರು ಮಾತನಾಡಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ದಿ. ಮಹಂತಪ್ಪಾ ಮಡಕಿ ಅವರ ಚಿತ್ರ ಪುಸ್ತಕದ ಮೇಲೆ ಹಾಕಬೇಕೆಂದವರು ಮುಖ್ಯ ಕಾರ್ಯನಿರ್ವಹಾಣಾಧಿರಿಗಳ ಹುದ್ದೆ ಖಾಯಂಗೊಳಿಸಬೇಕು ಮತ್ತು ಭಾರತ ಸೇವಾದಳದಿಂದ ರಾಷ್ಟ್ರಧ್ವಜ ಕುರಿತು ಒಂದು ದಿನದ ಕಾರ್ಯಗಾರ ಏರ್ಪಡಿಸಿ ಮಾಹಿತಿ ನೀಡುವಂತಾಗಬೇಕೆಂದರು ಅದಕ್ಕೆ ಅಧ್ಯಕ್ಷರು ಪರಿಗಣಿಸಲಾಗುವುದೆಂದು ಉತ್ತರಿಸಿದರು. ಬಸವಣಪ್ಪಾ ನೇಳಗಿ ಅವರು ಪ್ರಸ್ತಾಪಿಸಿ ಬ್ಯಾಂಕಿನ ಲಾಭಕ್ಕೆ ಮತ್ತು ಕಾರ್ಯಕ್ಷಮತೆಗೆ ಅಭಿನಂದಿಸಿದರು. ಶರಣಪ್ಪಾ ಬಿರಾದಾರ ಯಶಸ್ವಿನಿ ಕಾರ್ಡ ಶೀಘ್ರವಾಗಿ ನೀಡಬೇಕೆಂದರು, ಬಿ.ಜಿ. ಶೆಟಕಾರ ಮಾತನಾಡಿ ಹಿರಿಯ ಸದಸ್ಯರಿಗೆ ಲಿಫ್ಟ್ ವ್ಯವಸ್ಥೆ ಕಲ್ಪಿಸಬೇಕೆಂದರು. ನಾಗಶೆಟ್ಟಿ ಧರಮಪೂರ, ಚಂದ್ರಶೇಖರ ಗಾದಾ ಮಾತನಾಡಿ ಸದಸ್ಯರಿಗೆ ಸುವರ್ಣ ಮಹೋತ್ಸವದ ಕಾಣಿಕೆ ಕೋಡಬೇಕೆಂದರು. ಚನ್ನಬಸವರಾಜ ಹರಡಗೆ ಸದಸ್ಯರ ಮರೋಣತ್ತರ ನಿಧಿ ಹೆಚ್ಚಿಸಬೇಕೆಂದರು. ನಾಗಭೂಷಣ ಕಮಠಾಣೆ ಬ್ಯಾಂಕಿನ ಸಾಲಕ್ಕೆ ವಿಮೆ ವ್ಯವಸ್ಥೆ ಒದಗಿಸಬೇಕೆಂದು ಮನವಿ ಮಾಡಿದರು. ಬಿ.ಎಸ್. ಪಾಟೀಲ ವಕೀಲರು ಹಾರೂರಗೇರಿ ಮಾತಾಡಿ ಪ್ರಗತಿ ಸಾಧನೆಗೆ ಶ್ಲಾಘಿಸಿದರು. ಟಿ.ಆರ್. ದೊಡ್ಡೆ ಮಾತಾಡಿ ಶೈಕ್ಷಣಿಕ ಸಾಲ ನೀಡಬೇಕೆಂದರು. ಶ್ರೀಮತಿ ಭಾರತಿ ವಸ್ತ್ರದ ಮಾತಾಡಿ ಮಹಿಳಾ ಪನುಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲು ಕೋರಿದರು. ಅಧ್ಯಕ್ಷರು ಸದಸ್ಯರಗಳ ಮನವಿಗಳನ್ನು ಆಲಿಸಿ ಪರಿಶೀಲಿಸಿ ಪರೀಗಣಿಸಿ ತಮ್ಮ ಸಲಹೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಬ್ಯಾಂಕು 8,796 ಸದಸ್ಯತ್ವ ಹೊಂದಿದ್ದು, 5.19 ಕೋಟಿ ರೂ. ಷೇರು ಬಂಡುವಾಳ, 226.41 ಕೋಟಿ ರೂ. ಠೇವಣಿ, ಸಾಲ ಮತ್ತು ಮುಂಗಡ 151.25 ಕೋಟಿ ರೂ., ದುರ್ಬಲ ವರ್ಗದ ಸಾಲ 24.64 ಕೋಟಿ ರೂ. ಇದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ವಿಜಯಕುಮಾರ ಅಣ್ಣೆಪ್ಪಾ ಪಾಟೀಲ ಗಾದಗಿರವರು ಹೇಳಿ ಸರ್ವಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮಹಾನಂದಾ ಪಾಟೀಲರವರು ವಾರ್ಷಿಕ ವರದಿ ಓದಿ, ಬ್ಯಾಂಕಿನ ಮುಂಬರುವ 2024-25 ಸಾಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸುತ್ತಾ ಬ್ಯಾಂಕು 255 ಕೋಟಿ ರೂ. ಠೇವಣಿ ಸಂಗ್ರಹಿಸಲು, 187 ಕೋಟಿ ಸಾಲ ನೀಡಲು ಗುರಿ ಹೊಂದಿದ್ದು ದುಡಿಯುವ ಬಂಡುವಾಳ 291 ಕೋಟಿ ರೂ. ಗುರಿ ಇಟ್ಟುಕೊಳ್ಳಲಾಗಿದೆ. ಗ್ರಾಹಕರ ಸೇವೆಗಾಗಿ ಫೋನ್ ಪೇ, ಯು.ಪಿ.ಐ, ಗೂಗಲ್ ಪೇ, ಪೇ.ಟಿ.ಎಮ್. ನ್ಯಾಚ್, ಐ.ಎಂ.ಪಿ.ಎಸ್, ಮೋಬೈಲ್ ಬ್ಯಾಂಕಿಂಗ್ ಅಳವಡಿಸಲಾಗಿದೆ. ಬೀದರ ನಗರದ ಹೊರ ವಲಯದಲ್ಲಿ ಸಹಕಾರಿ ಶಿಕ್ಷಣ ತರಬೇತಿ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ.
ಸಭೆಯ ವೇದಿಕೆಯ ಮೇಲೆ ಬ್ಯಾಂಕಿನ ಉಪಾಧ್ಯಕ್ಷರಾದ ಮಡಿವಳಾಪ್ಪಾ ಗಂಗಶೆಟ್ಟಿ, ನಿರ್ದೇಶಕರಾದ ಅಶೋಕ ಕುಮಾರ ಲಾಚುರಿಯೆ, ಕಾಶಿನಾಥ ಶೆಟಕಾರ, ಸೂರ್ಯಕಾಂತ ಶೆಟಕಾರ, ಸುನೀಲಕುಮಾರ ಬಿರಾದಾರ, ಜಯಕುಮಾರ ಕಾಂಗೆ, ಕಮಲ ಕೀಶೋರ ಅಟ್ಟಲ್, ಅಂತೇಶ್ವರ ಶೆಟಕಾರ, ಭರತ ಶೆಟಕಾರ, ಅಮರನಾಥ ಫೂಲೇಕರ, ಶಿವನಾಥ ಪಾಟೀಲ, ಶ್ರೀಮತಿ ಶಾಂತಾ ಖಂಡ್ರೆ, ಶ್ರೀಮತಿ ಜ್ಯೋತಿ ಗೌರಶೆಟ್ಟಿ, ವೃತ್ತಿಪರ ನಿರ್ದೇಶಕ ಮಲ್ಲಿಕಾರ್ಜುನ ಕಾರಬಾರಿ ಉಪಸ್ಥಿತರಿದ್ದರು.
ಬ್ಯಾಂಕಿನ ಸಲಹೆಗಾರರಾದ ವಿಶ್ವನಾಥ ಕೋಡಗೆ, ವ್ಯವಸ್ಥಾಪಕರಾದ ಶ್ರೀಕಾಂತ ಶೆಟಕಾರ, ಡಾ. ರಜನೀಶ ವಾಲಿ, ದೀಪಕ ವಾಲಿ, ರಾಜೇಂದ್ರ ರಡ್ಡಿ ಶೇರಿಕಾರ, ನಿಜಪ್ಪಾ ಪತ್ರಿ, ಸುನೀಲ ಮೊಟ್ಟಿ, ಪಂಡಿತ ಪಾಟೀಲ, ಶ್ರೀಮತಿ ರೇಖಾ ಮಡ್ಡೆ, ಶ್ರೀಮತಿ ಶಾಂತಮ್ಮಾ ಶೆಟಕಾರ, ಶ್ರೀಮತಿ ಸವಿತಾ ಮಲ್ಲಿಕಾರ್ಜುನ, ಶ್ರೀಮತಿ ನಾಗಮ್ಮಾ ಸ್ವಾಮಿ, ಶ್ರೀಮತಿ ಅನೀತಾ ಸ್ವಾಮಿ, ಶ್ರೀಮತಿ ಪ್ರಮೀಳಾ ಶಾಸ್ತ್ರೀ, ಶ್ರೀಮತಿ ಶೈಲಾ ಧುಮ್ಮನಸೂರೆ, ವಿಶ್ವನಾಥ ಕಾಜಿ, ಸೋಮನಾಥ ಅಷ್ಟೂರೆ, ಶಿವಲಿಂಗಪ್ಪಾ ಜಲಾದೆ, ವಿಜಯಕುಮಾರ ಬೋರಾಳ, ಉಮೇಶ ಮೂಲಿಮನಿ, ಶಾಂತಲಿಂಗ ಸಾವಳಗಿ, ಜಿ.ಕೆ. ಸ್ವಾಮಿ, ವೀರಯ್ಯಾ ಸ್ವಾಮಿ, ನಾಗರಾಜ ಭಂಡೆ, ಹಣಮಂತ ಮೇಲಾರೆ, ಧನರಾಜ ಲಾಚುರಿಯಾ, ಶರಣಯ್ಯಾ ಸ್ವಾಮಿ, ಸಂಜಯಕುಮಾರ ಪಾಟೀಲ ವಕೀಲರು, ಪ್ರಶಾಂತ ಉದಗೀರೆ, ದೇಶಪ್ಪಾ ಬಿರಾದಾರ, ಸತೀಶ ಪಾಟೀಲ, ಕಾಶೀನಾಥ ಬಾಳೂರೆ, ಬಸವರಾಜ ಶೀಲವಂತ, ಜೈಶ್ರೀ ಶೆಟಕಾರ, ಮಲ್ಲಿಕಾರ್ಜುನ ಶೆಟಕಾರ, ಪ್ರಹ್ಲಾದಕುಮಾರ ಲಾಚುರಿಯೆ, ಶೆಶಿಕಲಾ ಬಾರೋಳೆ, ಅವರುಗಳು ಹಿಂದಿನ ಸಭೆಯ ಗೊತ್ತುವಳಿಗಳಿಗೆ ಅನುಮೋದಿಸಿದರು.
ಬ್ಯಾಂಕಿನ ಸದಸ್ಯರುಗಳು, ಮತ್ತು ಬ್ಯಾಂಕಿನ ಎಲ್ಲಾ ಶಾಖೆಗಳ ವ್ಯವಸ್ಥಾಪಕರುಗಳು, ಸಿಬ್ಬಂದಿಯವರು ಈ ಸಭೆಯಲ್ಲಿ ಭಾಗವಹಿಸಿದರು. ಪ್ರಾರಂಭದಲ್ಲಿ ದೇಶದ ಗಣ್ಯರ, ಬ್ಯಾಂಕಿನ ಮಾಜಿ ನಿರ್ದೇಶಕ ಮತ್ತು ಮಾಜಿ ಶಾಸಕ ದಿ. ರಮೇಶಕುಮಾರ ಪಾಂಡೆ ಸೇರಿದಂತೆ 38 ಸದಸ್ಯರ ನಿಧನಕ್ಕೆ 2 ನಿಮಿಷಗಳ ಕಾಲ ಮೌನ ಆಚರಿಸಿ ಶೃದ್ಧಾಂಜಲಿ ಅರ್ಪಿಸಲಾಯಿತು. ಕು. ಸೊಮೇಶ್ವರಿ ರಾಮಲಿಂಗ ಸ್ವಾಗತ ಗೀತೆ ಹಾಡಿದರು, ಬಸವರಾಜ ನಾಸೆಯವರು ಸ್ವಾಗತಿಸಿ ನಿರೂಪಿಸಿದರು, ಸಿ.ಇ.ಓ ಮಹಾನಂದಾ ಪಾಟೀಲರವರು ಪ್ರಾಸ್ತವಿಕವಾಗಿ ಮಾತಾಡಿ ಬ್ಯಾಂಕಿನ ವಾರ್ಷಿಕ ವರದಿಯನ್ನು ಓದಿದರು, ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾಸಿ ಗೌರವಿಸಲಾಯಿತು. ಕೊನೆಯಲ್ಲಿ ನಿರ್ದೇಶಕ ಜಯಕುಮಾರ ಕಾಂಗೆ ವಂದಿಸಿದರು.