ದಿವಂಗತ ವಿಠ್ಠಲ ಗದ್ದರ ಅವರಿಗೆ ಶೃದ್ಧಾಂಜಲಿ
ಬೀದರ ನಗರದ ಅಂಬೇಡ್ಕರ ವೃತ್ತದ ಹತ್ತಿರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರಜಾ ಗಾಯಕ ಕ್ರಾಂತಿಯ ದನಿ, ಹೋರಾಟಗಾರ ದಿವಂಗತ ವಿಠ್ಠಲ ಗದ್ದರ ಅವರು ನಿನ್ನೆ ಹೈದ್ರಾಬಾದನಲ್ಲಿ ನಿಧನರಾದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಅನಿಲಕುಮಾರ ಬೆಲ್ದಾರ, ಬಾಬು ಪಾಸ್ವಾನ, ಶ್ರೀಪತರಾವ ದಿನೆ, ಶಿವಕುಮಾರ ನೀಲಿಕಟ್ಟಿ, ಅಶೋಕ ಮಾಳಗೆ, ಸಂಜಯ ಜಾಗಿರದಾರ, ಜಾನ ವೆಲಿಸ್ಲಿ, ಸಂದೀಪ ಕಾಂಟೆ, ಇತರರು ಹಾಜರಿದ್ದರು.