ಬೀದರ್

“ದಾಸ ಸಾಹಿತ್ಯದಲ್ಲಿ ವಿಶ್ವಮಾನವ ಚಿಂತನೆಗಳು ಕಾರ್ಯಕ್ರಮ”

ಆಧ್ಯಾತ್ಮದ ಅನುಭವದ ಅಭಿವ್ಯಕ್ತಿಯಾಗಿ ಹರಿದಾಸ ಸಾಹಿತ್ಯ ಮೂಡಿಬಂದಿದೆ. ಹರಿದಾಸರ ಕೀರ್ತನ ಸಾಹಿತ್ಯವು ಜನರ ಹಿತಾಸಕ್ತಿಯನ್ನು, ಅವರ ಅಭಿವೃದ್ಧಿಯನ್ನು, ಏಳಿಗೆಯ ಕುರಿತು ಜಾಗೃತಿಯನ್ನು ಮೂಡಿಸಿದ ಜನಮುಖಿ ಸಾಹಿತ್ಯವಾಗಿದೆ ಎಂದು ಋಷಿಕೇಶ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಸಂತೋಷಕುಮಾರ ಮಂಗಳೂರೆ ನುಡಿದರು.
ಅವರು ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು,(ರಿ) ಬೀದರ, ಹಾಗೂ ಋಷಿಕೇಶ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ 26-08-2023 ರಂದು ಶನಿವಾರ ಮಂಜಾನೆ 09.00 ಗಂಟೆಗೆ ನಗರದ ಅರುಣೋದಯ ಪ್ರೌಢ ಶಾಲೆಯಲ್ಲಿ “ದಾಸ ಸಾಹಿತ್ಯದಲ್ಲಿ ವಿಶ್ವಮಾನವ ಚಿಂತನೆಗಳು” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಹರಿದಾಸರ ಕೀರ್ತನೆಗಳಲ್ಲಿ ಭಕ್ತಿ ಹಾಗೂ ದೇವತಾ ಸ್ತುತಿಯೊಂದಿಗೆ ಜನರ ನಡೆ-ನುಡಿಗಳನ್ನು ತಿದ್ದುವ ಭಾವ ಮಾದರಿಯಾಗಿದೆ.ಇಂತಹ ಸಮಾಜಮುಖಿ, ಜನಮುಖಿ ಚಿಂತನೆಯ ಕೀರ್ತನ ಸಾಹಿತ್ಯ ಸಮಾಜಕ್ಕೆ ತುಪಿಸುವ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ನಗರದ ಬಿ.ವಿ.ಬಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಬಸವರಾಜ ಬಿರಾದಾರ “ದಾಸ ಸಾಹಿತ್ಯದಲ್ಲಿ ವಿಶ್ವಮಾನವ ಚಿಂತನೆಗಳು” ಕುರಿತು ಉಪನ್ಯಾಸ ಮಂಡಿಸುತ್ತಾ, ಕನ್ನಡ ವಾಗ್ದೇವಿಯ ಭಂಡಾರಕ್ಕೆ ಹರಿದಾಸ ಸಾಹಿತ್ಯ ಅಮೂಲ್ಯ ಕಾಣಿಕೆಯನ್ನು ನೀಡಿದೆ. ತನು-ಮನ ಶೋಧಿಸಿ ಬಾಳು ಬೆಳಗುವ ಮಹತ್ವದ ಸಂದೇಶಗಳು ಒಳಗೊಂಡಿವೆ. ಹರಿದಾಸರು ಮನುಷ್ಯನಲ್ಲಿಯ ಸಣ್ಣತನವನ್ನು ಹೋಗಲಾಡಿಸಿ ವಿಶ್ವಮಾನವನಂತೆ ಬಾಳಲು ಪ್ರೇರಣೆ ನೀಡುವ ಸಾಹಿತ್ಯವಾಗಿದೆ. ಇದು ಸಮಾಜದಲ್ಲಿ ಸೌಹಾರ್ದತೆ ನೆಲೆಸಿ, ಸಾಮರಸ್ಯವನ್ನುಂಟು ಮಾಡುವ ಮಾನವರ ಶಕ್ತಿ ಚಿಲುಮೆಯಾಗಿದೆ. ಸಂಕೋಚಿತ ಮತ್ತು ಸ್ವಾರ್ಥ ಭಾವನೆಗಳನ್ನು ದೂರಗೊಳಿಸಿ, ವಿಶ್ವಮಾನವತ್ವ ಬೆಳೆಸಿಕೊಂಡು ಪ್ರಪಂಚವೇ ನನ್ನ ಮನೆಯನ್ನುವ ಭಾವ ಮೂಡಿಸಿ ಜೀವನ ಸಾಗಿಸುವ ಉಪದೇಶಗಳನ್ನು ನೀಡಿದ್ದಾರೆ ಎಂದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷರಾದ ಡಾ. ರವೀಂದ್ರ ಲಂಜವಾಡಕರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಸಮಾಜಕ್ಕೆ ಪ್ರೀತಿ-ನೀತಿಯನ್ನು ಸಾರುವ ದಾಸ ಸಾಹಿತ್ಯವು ಪರಿಚಂಯಿಸುವ ಸತ್ಕಾರ್ಯ ನಡೆಯಲಿದೆ ಎಂದರು. ವೇದಿಕೆಯಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಈಶ್ವರಿ ಬೇಲೂರೆ, ಬಸವರಾಜ ಮುಸ್ತಾಪೂರೆ, ಮಹೇಬೂಬ ಉಸ್ತಾದ,ಗಣೇಶ ಬಿರಾದಾರ ರವರು ಅತಿಥಿಗಳಾಗಿಗೆ ಭಾಗವಹಸಿದರು. ಕಾರ್ಯಕ್ರಮದಲ್ಲಿ ಸಹಿತ್ಯಾಸಕ್ತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಕೀರ್ತನೆಗಾಯನ-ಕು.ಮೇಘಾ ಮತ್ತು ಕು. ಪಲ್ಲವಿ ಮಾಡಿದರು.
ನಿರೂಪಣೆ -ಶ್ರೀಮತಿ ಅಲ್ಕಾವತಿ ಹೊಸದೊಡ್ಡೆ, ಸ್ವಾಗತ-ಶ್ರೀಮತಿ ಜ್ಯೋತಿ ಸಂಗೋಳಗಿ, ವಂದನಾರ್ಪಣೆ – ಸಾರಿಕಾ ಬಿರಾದಾರ ಮಾಡಿದರು.

Ghantepatrike kannada daily news Paper

Leave a Reply

error: Content is protected !!