ದತ್ತಗಿರಿಯಲ್ಲಿ ಮಂತ್ರಿ ಪೂಜೆ – ಶನೇಶ್ವರ ದೇವರಿಗೆ ಎಣ್ಣೆ ಅಭಿಷೇಕ – ದೇವಸ್ಥಾನದ ಅರ್ಚಕರಿಂದ ಭವ್ಯ ಸ್ವಾಗತ
ಜಿಲ್ಲೆಯ ಆಧ್ಯಾತ್ಮಿಕ ಕೇಂದ್ರವಾಗಿರುವ ಬರ್ದಿಪುರ ಶ್ರೀ ದತ್ತಗಿರಿ ಮಹಾರಾಜ ಆಶ್ರಮದಲ್ಲಿ ಗುರುವಾರ ಆಯೋಜಿಸಿದ್ದ ಶನಿ ಜಯಂತಿ ಆಚರಣೆಯಲ್ಲಿ ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಸಚಿವರು ಭಾಗವಹಿಸಿದ್ದರು. ಅವರನ್ನು ದೇವಸ್ಥಾನದ ಅರ್ಚಕರು ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಶನೀಶ್ವರ ದೇವರಿಗೆ ತೈಲಾಭಿಷೇಕ ಹಾಗೂ ವಜ್ರದ ಕವಚಗಳನ್ನು ನೆರವೇರಿಸಲಾಯಿತು. ಆಶ್ರಮದ ಅಧ್ಯಕ್ಷರಾದ ಶ್ರೀ 108 ವೈರಾಗ್ಯ ಶಿಖಾಮಣಿ ಅವಧೂತ ಗಿರಿ ಮಹಾರಾಜರು ಹಾಗೂ ಡಾ.ಸಿದ್ದೇಶ್ವರ ಸ್ವಾಮಿಗಳು ಪುಷ್ಪಾರ್ಚನೆ ಮಾಡಿ ತೀರ್ಥಪ್ರಸಾದ ನೀಡಿ ಗೌರವಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಗೆ ದತ್ತಗಿರಿ ಮಹಾರಾಜ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ ಬೆಳಗ್ಗೆ ಶ್ರೀಗಳಿಗೆ ನಿತ್ಯ ಪೂಜೆಯೊಂದಿಗೆ ಸಹಸ್ರ ತಿಲ ತೈಲ ಗತ್ತಾಭಿಷೇಕ, ಶನೈಶ್ವರ ಹೋಮ, ಪೂರ್ಣಾಹುತಿ ಸೇರಿದಂತೆ ನಾನಾ ಪೂಜಾ ಕಾರ್ಯಕ್ರಮಗಳು ಜರುಗಿದವು.ವಿಶೇಷ ಪೂಜೆ ಸಲ್ಲಿಸಿದ ಮುಖಂಡರು ಹಾಗೂ ಅಧಿಕಾರಿಗ