ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ
ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮುಸ್ಲಿಮ್ ಬಾಂಧವರು ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಡಗರದಿಂದ ಆಚರಿಸಿದರು.ಮುಸ್ಲಿಮ್ ಬಾಂಧವರು ಬಿಳಿವಸ್ತ್ರ ಧರಿಸಿ, ತಲೆ ಮೇಲೆ ಟೋಪಿ ಹಾಕಿಕೊಂಡು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಧರ್ಮಗುರು ಜಲಾಲೋದ್ದಿನ್ ಸಾಬ್ ಖಾಸ್ಮಿ ಪೆಶಮಾಮ್ ಮಾತನಾಡಿ, ಬಲಿದಾನದ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ.
ನಮ್ಮಲ್ಲಿರುವ ಸಿಟ್ಟು, ದ್ವೇಷ, ಅಹಂಕಾರ, ದುಶ್ಚಟ, ಭಯ, ದುರ್ಗುಣಗಳನ್ನು ನಾವು ತ್ಯಜಿಸಿದರೆ ಅದೂ ಕೂಡ ಬಲಿದಾನ ಹಾಗೂ ತ್ಯಾಗಕ್ಕೆ ಸಮಾನವಾಗಿದೆ ಎಂದು ನುಡಿದರು ದರು.
ಮುಫ್ತಿ ಇಕ್ಬಾಲ್ ಸಾಬ್ ಖಾಸ್ಮಿ, ರಫೀಕ್ ಸಾಬ್, ಆಸೀಫ್, ಸಾಬೇರ್ ಪಟೇಲ್, ವಹಾಬ್ ಮಿಯಾ, ಸಲಿಮೋದ್ದಿನ್ ಸೇರಿದಂತೆ ಇತರರು ಇದ್ದರು.