“ತೋಟಗಾರಿಕೆಯಲ್ಲಿ ಸಸ್ಯಾಭಿವೃದ್ಧಿ ಮತ್ತು ನರ್ಸರಿ ನಿರ್ವಹಣೆ” ಕುರಿತು 7 ದಿನದ ತರಬೇತಿ
ಬೀದರ ಜಿಲ್ಲೆಯ ಜನವಾಡ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇದೆ ತಿಂಗಳ 17 ರಿಂದ 23 ರವರೆಗೆ “ತೋಟಗಾರಿಕೆಯಲ್ಲಿ ಸಸ್ಯಾಭಿವೃದ್ಧಿ ಮತ್ತು ನರ್ಸರಿ ನಿರ್ವಹಣೆ” ಕುರಿತು ಏಳು ದಿನಗಳ ವೃತಿಪರ ತರಬೇತಿಯನ್ನು ಆಯೋಜಿಸಲಾಗಿದೆ. ಸದರಿ ತರಬೇತಿಯಲ್ಲಿ ನರ್ಸರಿ ನಿರ್ಮಾಣಕ್ಕಾಗಿ ಆವಶ್ಯಕವಿರುವ ವಿನ್ಯಾಸ, ಮಾಧ್ಯಮಗಳು, ವಿವಿಧ ಸಸ್ಯಗಳ ಉತ್ಪಾದನೆ, ಕಸಿ ವಿಧಾನಗಳು, ಸಸ್ಯ ಸಂರಕ್ಷಣೆ ಹಾಗೂ ಇನ್ನಿತರ ಮಾಹಿತಿಯನ್ನು ಪಠ್ಯ ಬೋಧನೆ ಹಾಗೂ ಪ್ರಯೋಗಿಕವಾಗಿ ತಿಳಿಸಿಕೊಡಲಾಗುವುದು. ಸದರಿ ತರಬೇತಿಯಲ್ಲಿ ಕೇವಲ 30 ಶೀಬಿರಾರ್ಥಿಗಳಿಗೆ ಅವಕಾಶವಿದ್ದು ಗ್ರಾಮೀಣ ಯುವಕ ಹಾಗೂ ಯುವತಿಯರಿಗೆ ಪ್ರಾಶಸ್ತ್ಯ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳ್ಳಿಸಿದ ಶಿಬೀರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಈ ನಿಟ್ಟಿನಲ್ಲಿ ಆಸಕ್ತರು ತಮ್ಮ ಹೆಸರುಗಳನ್ನು ನೊಂದಾಯಿಸುವಂತೆ ಮತ್ತು ರೈತ ಬಾಂಧವರು, ಈ ಏಳು ದಿವಸ ಕೃಷಿ ವಿಜ್ಞಾನ ಕೇಂದ್ರ, ಬೀದರನಲ್ಲಿಯ ತರಬೇತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಡಾ. ಸುನೀಲಕುಮಾರ ಎನ್.ಎಮ್, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆವಿಕೆ ಬೀದರ ರವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ವಿಜ್ಞಾನಿಗಳು (ತೋಟಗಾರಿಕೆ), ಕೃಷಿ ವಿಜ್ಞಾನ ಕೇಂದ್ರ, ಬೀದರ ಇವರಿಗೆ ಸಂಪರ್ಕ ಮಾಡಬಹುದು, ಅವರ ದೂರವಾಣಿ ಸಂಖ್ಯೆ 9980102727 ಗೆ ಕರೆಮಾಡಿ.