ತೊಗರಿ ಮತ್ತು ಸೋಯಾ ಅವರೆಯಲ್ಲಿ ಕೀಟ ಹಾಗು ರೋಗ ಸಮೀಕ್ಷೆ
ಬೀದರ ಜಿಲ್ಲೆಯಾದ್ಯಂತ ಮೊದಲು ಬಿತ್ತನೆ ಮಾಡಿರುವ ತೊಗರಿಯು ಸುಮಾರು 70 ರೊಂದ 80 ದಿನಗಳ ಅವಧಿಯದಾಗಿದ್ದು ಮುಂಗಾರು ಬೆಳೆಯಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಕೃಷಿ ವಿಜ್ಞಾನ ಕೇಂದ್ರ ಬೀದರನ ವಿಜ್ಞಾನಿಗಳ ತಂಡ ಸಮೀಕ್ಷೆ ಕೈಗೊಂಡಿದ್ದು ಜಿಲ್ಲೆಯ 8 ತಾಲೂಕುಗಳಲ್ಲಿ ಅನೇಕ ಕಡೆ ತೊಗರಿ ಬೆಳೆಯಲ್ಲಿ ಗೊಡ್ಡು ರೋಗದ ಬಾಧೆ ಹಾಗೂ ಸೋಯಾ ಅವರೆಯಲ್ಲಿ ಎಲೆತಿನ್ನುವ ಹಾಗೂ ಕಾಯಿ ಕೊರೆಯುವ ಕೀಟಗಳ ಬಾಧೆ ಕಂಡು ಬಂದಿದೆ. ತೊಗರಿ ಗೊಡ್ಡು ರೋಗವು ಅತಿ ಮುಖ್ಯವಾಗಿರುತ್ತದೆ. ಈ ರೋಗದಿಂದ ಪ್ರತಿಶತ 10 ರಿಂದ 90 ರಷ್ಟು ನಷ್ಟ ಆಗುವುದುಂಟು. ಕೆಲವು ಸಂಧರ್ಭಗಳಲ್ಲಿ ರೋಗಕ್ಕೆ ಅನುಕೂಲ ವಾತಾವರಣವಿದ್ದಲ್ಲಿ ಪೂರ್ತಿ ಬೆಳೆಯೇ ನಾಶವಾದ ಉದಾಹರಣೆಗಳಿವೆ. ರೋಗ ಬಂದ ಗಿಡಗಳು ಸಾಮಾನ್ಯ ಗಿಡಗಳಂತೆ ಹೂ ಮತ್ತು ಕಾಯಿಗಳಿಲ್ಲದೆ ಹೆಚ್ಚಿಗೆ ಎಲೆಗಳನ್ನು ಹೊಂದಿ ಗೊಡ್ಡಾಗಿ ಇಂತಹ ಗಿಡದ ಎಲೆಗಳು ಸಣ್ಣವಾಗಿದ್ದು,. ಪ್ರಾರಂಭಿಕ ಹಂತದಲ್ಲಿ ಮೊಜಾಯಿಕ ತರಹದ ತಿಳಿ ಹಳದಿ ಬಣ್ಣವು ಮೊಜಾಯಿಕ ಲಕ್ಷಣಗಳೊಂದಿಗೆ ಮುಟುರಿಕೊಂಡಿರುವವು. ಎಲೆಗಳ ಗುಂಪಿನಿಂದ ಕೂಡಿ ಪೊದೆಯಂತೆ ಗೊಡ್ಡಾಗಿ ಉಳಿಯುವುದು.
ನಂಜಾಣುಗಳಿಂದ ಉಂಟಾಗುವ ಈ ರೋಗವು ಅಂತವ್ರ್ಯಾಪಿಯಾಗಿದ್ದು, ಆಸೆರಿಯಾ ಕೆಜನಿ ಎನ್ನುವ ಮೈಟ್ ನುಶಿಗಳಿಂದ ಪ್ರಸಾರವಾಗುವುದು. ಈ ಮೈಟ್ ನುಶಿಗಳು ಸುಮಾರು 2 ಕಿ.ಮೀ ವರೆಗೂ ಪ್ರಸಾರವಾಗುವವು. ರೋಗಾಣು ಮತ್ತು ರೊಗಾಣುವಾಹಕ ಮೈಟ್ ನುಶಿಗಳು ಕಾಡು ತೊಗರಿ, ಬಹು ವಾರ್ಷಿಕ ತೊಗರಿ ಮತ್ತು ಕುಳೆ ತೊಗರಿಯು ವಾಹಕ ಮೈಟ್ ನುಶಿಗಳಿಗೆ ಆಸರೆ ನೀಡಿ ರೋಗಾಣುವಿನ ಸಂತತಿ ಮುಂದುವರೆಸಲು ಸಹಾಯವಾಗುವವು. ಹೆಚ್ಚಿನ ಆದ್ರ್ರತೆ ನುಶಿಗಳು ಅಭಿವೃದ್ಧಿಗೆ ಸಹಕಾರಿ. ರೋಗದ ನಿರ್ವಹಣೆಗಾಗಿ ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕ ತೊಗರಿ ಮತ್ತು ಕುಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು. ರೋಗದ ಪ್ರಾರಂಭದÀಲ್ಲಿ ಬಾಧಿತ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ಪರ್ಯಾಯ ಬೆಳೆಯಿಂದ ಬೆಳೆಯ ಪರಿವರ್ತನೆ ಮಾಡಬೇಕು. ರೋಗ ನಿರೋಧಕ ಶಕ್ತಿ ಹೊಂದಿರುವ ತಳಿಗಳಾದ ಐ.ಸಿ.ಪಿ.ಎಲ್-87119 ಅಥವಾ ಬಿ.ಎಸ್.ಎಂ.ಆರ್-736 ತಳಿಗಳನ್ನು ಉಪಯೋಗಿಸಬೇಕು ಹಾಗೂ ರೋಗದ ಪ್ರಾರಂಭÀದಲ್ಲಿ ನೀರಿನಲ್ಲಿ ಕರಗುವ ಗಂಧಕ 2.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ರೋಗದÀ ನಿಯಂತ್ರಣ ಮಾಡಬೇಕು.
ಜಿಲ್ಲೆಯಲ್ಲಿ ಸೋಯಾ ಅವರೆಯು ಕಾಯಿ ಕಟ್ಟುವ ಹಾಗೂ ಕಾಯಿ ಬಲಿಯುವ ಹಂತದಲ್ಲಿದೆ. ಕೀಡೆಗಳು ಚದುರಿ ಎಲೆ ಮತ್ತು ಹೂಗಳನ್ನು ಮತ್ತು ಕಾಯಿಯನ್ನು ತಿನ್ನುತ್ತವೆ. ನಿರ್ವಹಣೆಗಾಗಿ ಇಮಾಮೆಕ್ಟಿನ್ ಬೆಂಜೊಯೇಟ್ 0.2 ಗ್ರಾಂ ಅಥವಾ ಕ್ಲೋರ್ಯಾಂಟ್ರನಿಲಿಪ್ರೋಲ್ 0.15 ಮಿ.ಲೀ ಅಥವಾ ಕ್ಲೊರೋಪೈರಿಫಾಸ್ 20 ಇ.ಸಿ. ಅಥವಾ 0.1 ಮಿ.ಲೀ ಸ್ಪೆನೋಸ್ಯಾಡ್ 45 ಎಸ್.ಸಿ ಅಥವಾ 1 ಮಿ.ಲೀ ಮೋನೋಕ್ರೋಟೋಫಾಸ್ ಅಥವಾ 1 ಗ್ರಾಂ. ನಮೋರಿಯಾ ರಿಲೈ ಅಥವಾ 1 ಗ್ರಾಂ ಬಿ.ಟಿ ದುಂಡಾಣು ಪ್ರತಿ ಲೀಟರ್ ನೀರಿಗೆ ಬೆರೆಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿರಿ.
ಕೀಟ ಸಮೀಕ್ಷೆಯ ತಂಡದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎನ್.ಎಮ್ ಸುನೀಲ ಕುಮಾರ , ವಿಜ್ಞಾÐನಿಗಳಾದ ಡಾ ನಿಂಗದಳ್ಳಿ ಮಲ್ಲಿಕಾರ್ಜುನ, ಡಾ ಜ್ಞಾನದೇವ ಬುಳ್ಳಾ ಬೀದರ ತಾಲೂಕಿನ ಚಾಂಬೋಳ ಗ್ರಾಮದ ರೈತರ ಹೊಲವೊಂದರಲ್ಲಿ ಬೆಳೆ ಸಮೀಕ್ಷೆ ಮಾಡುತ್ತಿರುವುದು.