ತಾಯಿ ಹೆಸರಿನಲ್ಲಿ ಮರ ನೆಡಿ: ಭಗವಂತ ಖೂಬಾ
ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ಕರೆಕೊಟ್ಟಿರುವ “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನದ ಭಾಗವಾಗಿ ಇಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಶಿವನಗರದ ಅವರ ನಿವಾಸದ ಬಳಿಯಿರುವ ಹನುಮಾನ ಮಂದಿರದ ಆವರಣದಲ್ಲಿ ಸ್ನೇಹಿತರೊಂದಿಗೆ, ಕಾಲೋನಿಯ ನಿವಾಸಿಗಳೊಂದಿಗೆ 25 ಮರಗಳು ನೆಡುವ ಮೂಲಕ ಅಭಿಯಾನಕ್ಕೆ ಸಾಥ್ ನೀಡಿದರು.
ಖೂಬಾ ಅವರ ತಾಯಿಯವರಾದ ಸ್ವ. ಮಹಾದೇವಿ ಗುರುಬಸಪ್ಪ ಖೂಬಾರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪತ್ರಿ ಗಿಡವನ್ನು ನೆಟ್ಟರು, ಪರಿಸರವನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಭೂಮಿತಾಯಿಯನ್ನು ಸಂರಕ್ಷಿಸುವ ಕರ್ತವ್ಯ ಜವಬ್ದಾರಿ ನಮ್ಮೇಲ್ಲರದ್ದಾಗಿದೆ, ಪ್ರತಿಯೊಬ್ಬರು ಮೋದಿಜಿಯವರು ಕರೆಕೊಟ್ಟಿರುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿಕೊಂಡರು.
ಮಾಜಿ ಸಚಿವರ ಜೊತೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರಾದ ರಮೇಶ ಪಾಟೀಲ್ ಸೋಲಪೂರ ಹಾಗೂ ಮುಂತಾದವರು ವಿವಿಧ ಗಿಡಗಳು ನೆಟ್ಟು, ಈ ಅಭಿಯಾನದಲ್ಲಿ ಪಾಲ್ಗೊಂಡರು, ಈ ಸಂದರ್ಭದಲ್ಲಿ ನೆಟ್ಟ ಗಿಡಗಳ ಸಂರಕ್ಷಣೆಯನ್ನು ಮಾಡಲು ಮಾಜಿ ಸಚಿವರು ಅವರ ಕಚೇರಿ ಸಿಬ್ಬಂದಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಲೋನಿಯ ಹಿರಿಯರಾದ ಶಂಕರರಾವ ತೆಲಂಗ, ಮಾರುತಿ ಶೇರಿಕಾರ, ಮುಖಂಡರಾದ ರಮೇಶ ಪಾಟೀಲ್ ಸೋಲಪೂರ, ಮಾಧವರಾವ ಪಾಟೀಲ್, ಅಣೆಪ್ಪ ಖಾನಾಪೂರೆ, ಗೊವಿಂದರಾವ ಪಾಟೀಲ್, ದಯಾನಂದ ರೆಡ್ಡಿ, ಜ್ಞಾನೇಶ್ವರ ಪಾಟೀಲ್, ಶಿವಕುಮಾರ ನಿಡೋದಾ, ಅಮರ ಹಿರೇಮಠ ಚನ್ನಬಸವ ಘೂಳೆ ಮುಂತಾದವರು ಉಪಸ್ಥಿತರಿದ್ದರು.