ತಾಂಡಾ ಅಭಿವೃದ್ಧಿ ನಿಗಮದಿಂದ ಹೊಲಿಗೆ ತರಬೇತಿ ನೀಡಲು ಅರ್ಹ ಸಂಸ್ಥೆಗಳಿAದ ಅರ್ಜಿ ಆಹ್ವಾನ
ಬೀದರ. ಅಕ್ಟೋಬರ್ 27 :- ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ನಿರುದ್ಯೋಗ ಬಂಜಾರಾ ಮಹಿಳೆಯರಿಗೆ ಸಾಂಪ್ರಾದಾಯಿಕ ಕಸೂತಿ ಮತ್ತು ಪೂರಕ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮವನ್ನು ಬೀದರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಅನುಷ್ಟಾನಗೊಳಿಸಬೇಕಾಗಿರುವದರಿಂದ ತಾಂಡಗಳಲ್ಲಿ ವಾಸವಾಗಿರುವ ಅರ್ಹ ಬಂಜಾರಾ ಮಹಿಳಾ ಅಭ್ಯರ್ಥಿಗಳನ್ನು ಗುರುತಿಸಿ ಅವರಿಗೆ ಬಂಜಾರಾ ಕಸೂತಿ ಕಲೆ ಮತ್ತು ಪೂರಕ ಹೊಲಿಗೆ ತರಬೇತಿಯನ್ನು ನೀಡಬೇಕಾಗಿರುತ್ತದೆ.
ಅದ್ದರಿಂದ ಬಂಜಾರಾ ಮಹಿಳೆಯರಿಗೆ ಸಾಂಪ್ರಾದಾಯಿಕ ಕಸೂತಿ ಮತ್ತು ಹೊಲಿಗೆ ತರಬೇತಿಯನ್ನು ನೀಡಲು ಅರ್ಹ ತರಬೇತಿ ಸಂಸ್ಥೆಗಳಿAದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿದ್ದು. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಬೀದರ ವಲಯ ಅಧಿಕಾರಿಗಳ ಕಛೇರಿ ಬಂಜಾರ ಭವನ, ಮಂಡಿವಾಳ ಸರ್ಕಲ್ ಹತ್ತಿರ ಕೆ.ಹೆಚ್.ಬಿ ಕಾಲೋನಿ ಬೀದರ ಇಲ್ಲಿಗೆ ಅಥವಾ ದೂ ಸಂಖ್ಯೆ 8861161512, 9591625251 ಗೆ ಸಂಪರ್ಕಿಸುವAತೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಬೀದರ ವಲಯ ಕಚೇರಿಯ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.