ಕಲಬುರಗಿ

ತಮ್ಮೆಲ್ಲರ ಆಶೀರ್ವಾದ ಹಾಗು ಸಹಕಾರ ಇದೆ ಎನ್ನುವ ಪ್ರಬಲ ನಂಬಿಕೆಯೊಂದಿಗೆ ನನ್ನ ನಾಮಪತ್ರವನ್ನು ಸಲ್ಲಿಸುತ್ತಿದ್ದೇನೆ.

ಚಿಂಚೋಳಿ ತಾಲೂಕಿನ ಸಮಸ್ತ ವೀರಶೈವ ಲಿಂಗಾಯತ ಬಾಂಧವರಲ್ಲಿ ಸವಿನಯ ಪ್ರಾರ್ಥನೆ, ತಾಲೂಕಿನ ಶಿಕಾರ ಮೋತಕಪಲ್ಲಿ ಎನ್ನುವ ಚಿಕ್ಕ ಗ್ರಾಮದ ಸಾಮಾನ್ಯ ರೈತರ ಮನೆಯಲ್ಲಿ ಜನಿಸಿದ ನಾನು, ಹಿರಿಯರ ಆಶೀರ್ವಾದ ಹಾಗು ಅವರು ಕಲಿಸಿದ ಸುಸಂಕೃತ ಸಂಸ್ಕಾರದ ದಿಶೆಯಲ್ಲಿ ನಡೆಯುತ್ತ ವೃತ್ತಿಯಲ್ಲಿ ವಕೀಲನಾಗಿ ಜವಾಬ್ದಾರಿಯಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತನಾಗಿ ಯಾವತ್ತೂ ನನ್ನ ಸಮಾಜ ನನ್ನ ಧರ್ಮ ಮುಖ್ಯ ಎನ್ನುವ ನಂಬಿಕೆ ಹೊಂದಿರುವೆ. ವಯಸ್ಸಿನಲ್ಲಿ ಹಾಗು ಅನುಭವದಲ್ಲಿ ಚಿಕ್ಕವನಾದ ನಾನು ನನ್ನಿಂದ ಆದಷ್ಟು ಸಮಾಜಕ್ಕೆ ಹಾಗು ಸಮಾಜದ ಬಾಂಧವರಿಗೆ ಉಪಯುಕ್ತವಾಗಿ ಸೇವೆ ಸಲ್ಲಿಸಿದ ಸಮಾಧಾನವಿದೆ.
ದೇಶದಲ್ಲಿ ನಮ್ಮ ವೀರಶೈವ ಲಿಂಗಾಯತ ಸಮಾಜದ ಅಧಿಕೃತ ಸಂಘಟನೆಯಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜೊತೆಗೆ ಸದಾಕಾಲ ಗುರುತಿಸಿಕೊಂಡು ಸಂಘಟನೆಯಲ್ಲಿ ಕೊಟ್ಟಂತಹ ಜವಾಬ್ದಾರಿಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಿದ ತೃಪ್ತಿ ಹೊಂದಿರುತ್ತೇನೆ. ಸಂಘಟನೆಯ ರಾಷ್ಟೀಯ, ರಾಜ್ಯದ ಹಾಗು ಜಿಲ್ಲಾ ಪದಾಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ನಾನು ಸದಾ ಸಮಾಜದ ಪರ ಕೆಲಸ ಮಾಡುವ ಯೋಚನೆ ಚಿಂತನೆಯೊಂದಿಗೆ ಇರುತ್ತೇನೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ನಮ್ಮ ರಾಜ್ಯದಲ್ಲಿ ಅತಿ ಮುಖ್ಯ ಹಾಗು ಬಲಿಷ್ಟ ಸಂಘಟನೆ ಆಗಿದ್ದು, ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಈ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.
ಅದರಂತೆ ಚಿಂಚೋಳಿ ತಾಲೂಕ ಘಟಕಕ್ಕೆ ಚುನಾವಣೆ ಘೋಷಣೆ ಆಗಿರುವದ್ದು ತಮ್ಮ ಗಮನಕ್ಕೆ ಇದ್ದು ನಾನು ತಾಲೂಕಾ ಘಟಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿದ್ದು, ಚಿಂಚೋಳಿಯ ಸಮಾಜದ ಪ್ರಮುಖರಾದ ತಮ್ಮೆಲ್ಲರ ಆಶೀರ್ವಾದ ಹಾಗು ಸಹಕಾರ ಇದೆ ಎನ್ನುವ ಪ್ರಬಲ ನಂಬಿಕೆಯೊಂದಿಗೆ ನನ್ನ ನಾಮಪತ್ರವನ್ನು ಸಲ್ಲಿಸುತ್ತಿದ್ದೇನೆ. ಸಮಾಜ, ಧರ್ಮ ಎನ್ನುವ ವಿಚಾರ ಬಂದಾಗ ಎಲ್ಲವನ್ನೂ ಮೀರಿ ಕೇವಲ ಸಮಾಜದ ಹಿತದಿಂದ ಯೋಚನೆ ಮಾಡಿ ಸೂಕ್ತ ವ್ಯಕ್ತಿಗೆ ತಾವು ಮನ್ನಣೆ ಕೊಡುತ್ತೀರಿ ಅನ್ನುವ ಆಶಾಭಾವನೆಯನ್ನು ಇಟ್ಟುಕೊಂಡು, ತಮ್ಮ ನಂಬಿಕೆ ಹಾಗು ವಿಶ್ವಾಸಕ್ಕೆ ನಾನು ಬದ್ಧನಾಗಿರುತ್ತೇನೆ ಎನ್ನುವ ಪ್ರಾಮಾಣಿಕ ನುಡಿಯನ್ನು ತಮ್ಮಲ್ಲಿ ವಿನಮ್ರಪೂರ್ವಾಗಿ ಸಲ್ಲಿಸಿ ಚುನಾವಣೆಯಲ್ಲಿ ಮುನ್ನುಗುತ್ತಿದ್ದೇನೆ.
ಯಾವತ್ತೂ ತಮ್ಮ ಸಹಕಾರದ ನಿರೀಕ್ಷೆಯಲ್ಲಿರುವ ತಮ್ಮ
ಶರಣು ಪಾಟೀಲ ಮೋತಕಪಲ್ಲಿ.
Ghantepatrike kannada daily news Paper

Leave a Reply

error: Content is protected !!