ತನಿಖೆ ನಡೆಸಿ, ಕಾರ್ಮಿಕ ಭವನ ನಿರ್ಮಾಣ ಮಾಡಿ ಮನವಿ
ಬೀದರ ಜಿಲ್ಲೆಯ ಬಡ ಕಟ್ಟಡ ಕಾರ್ಮಿಕರಿಗೆ ಸಭೆ, ಸಮಾರಂಭ ಮತ್ತು ನಾನಾ ಚಟುವಟಿಕೆಗಳು ನಡೆಸಲು ಬೀದರ ನಗರದ ನೌಬಾದ ಸಮೀಪದ ಸರ್ವೆ ನಂ. 18 ರಲ್ಲಿ 12 ಗುಂಟೆ ಜಮೀನು ಮಂಜೂರು ಮಾಡಿ, ಕಾರ್ಮಿಕ ಭವನ ನಿರ್ಮಾಣಕ್ಕೆ ರೂ. 1.50 ಕೋಟಿ ರೂಪಾಯಿ ಹಿಂದಿನ ಸರ್ಕಾರ ಮಂಜೂರು ಮಾಡಿತ್ತು.
ಕಾರ್ಮಿಕರ ಭವನಕ್ಕೆ ಮಂಜೂರಾದ 12 ಗುಂಟೆ ಭೂಮಿ ಮತ್ತು ಕಾರ್ಮಿಕ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ಮಂಜೂರಾದ 1.0 ಕೋಟಿ ರೂಪಾಯಿಗಳು ಮಾತ್ರ ಯಾರು ಗುಳುಂ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇವೆ.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕೂಲಿ ಕಾರ್ಮಿಕರ ಟ್ರಸ್ಟ್ ಪದಾಧಿಕಾರಿಗಳ ಮನವಿ ಮೇರೆಗೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಆಯುಕ್ತರು ದಿನಾಂಕ: 04-09-2010 ರಂದು ಬೀದರ ಜಿಲ್ಲಾ ಕೇಂದ್ರ ನಗರದಲ್ಲಿ ಕಾರ್ಮಿಕ ಭವನ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ 0.20 ಎಕರೆ ನಿವೇಶನ (ಜಮೀನು) ಹಂಚಿಕೆ ಮಾಡುವ ಬಗ್ಗೆ ತಮಗೆ ಪತ್ರ ಬರೆದಿರುತ್ತೇವೆ.
ಕಾರ್ಮಿಕ ಸಚಿವರು ಬೀದರ ನಗರ ಕಾರ್ಮಿಕ ವರ್ಗದವರ ಸೌಲಭ್ಯಕ್ಕಾಗಿ ಒಂದು ಸಮುದಾಯ ಭವನ ನಿರ್ಮಿಸಲು ಬೀದರ ಜಿಲ್ಲಾ ಕೇಂದ್ರದಲ್ಲಿ 0.20 ಎಕರೆ ಭೂಮಿ ಕಾರ್ಮಿಕರ ಹಿತರಕ್ಷಣೆಗಾಗಿ ಮಂಡಳಿಗೆ ಹಂಚಿಕೆ ಮಾಡಲು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಆಯುಕ್ತರು ತಮಗೆ ಪತ್ರ ಬರೆದು ಕೋರಿರುತ್ತಾರೆ. ದಿನಾಂಕ: 02-06-2012 ರಂದು ಬೀದರ ಉಪ ವಿಭಾಗದ ಸಹಾಯಕ ಆಯುಕ್ತರು, ಬೀದರ ತಹಸೀಲ್ದಾರರಿಗೆ ಪತ್ರ ಬರೆದು ಕಾರ್ಮಿಕ ಭವನ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ಭೂಮಿ ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡಲು ಸೂಚಿಸಿದ್ದರು.
ದಿನಾಂಕ: 10-01-2013 ರಂದು ಬೀದರ ಸಹಾಯಕ ಆಯುಕ್ತರು, ಬೀದರ ತಹಸೀಲ್ದಾರರಿಗೆ ಪತ್ರ ಬರೆದು ಬೀದರ ಜಿಲ್ಲಾ ಕೇಂದ್ರ ನಗರದಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ 0.20 ಎಕರೆ ಜಮೀನು ಮಂಜೂರು ಮಾಡುವ ಬಗ್ಗೆ ಸೂಚನೆ ನೀಡಿದಂತೆ ಬೀದರ ತಹಸೀಲ್ದಾರರು ದಿನಾಂಕ: 19-01-2013 ರಂದು ಬೀದರ ಸಹಾಯಕ ಆಯುಕ್ತರಿಗೆ ಸಲ್ಲಿಸಿದ್ದ ವರದಿಯಲ್ಲಿ ಕಮಠಾಣಾ ಕಂದಾಯ ನಿರೀಕ್ಷಕರು ಹಾಗೂ ಬೀದರ ತಾಲೂಕಾ ಭೂಮಾಪಕರು ಜಂಟಿಯಾಗಿ ಪರಿಶೀಲಿಸಿ ಕಮಠಾಣಾ ಹೋಬಳಿಯ ನೌಬಾದ ಗ್ರಾಮದ ಸರ್ವೆ ನಂ. 18 ರಲ್ಲಿ 0.20 ಎಕರೆ ಭೂಮಿ ಲಭ್ಯವಿಲ್ಲ, ಬದಲಾಗಿ 12 ಗುಂಟೆ ಜಮೀನು ಮಾತ್ರ ಲಭ್ಯವಿದೆ ಎಂದು ಹೇಳಿದ್ದರು.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಟ್ರಸ್ಟ್ ಮನವಿ ಮೇರೆಗೆ ರಾಜ್ಯ ಸರ್ಕಾರ ಕಾರ್ಮಿಕ ಭವನ ನಿರ್ಮಾಣಕ್ಕೆ ಬೀದರ ನಗರದ ನೌಬಾದ ಸರ್ವೆ ನಂ. 18 ರಲ್ಲಿ 12 ಗುಂಟೆ ಜಮೀನು ಮಂಜೂರು ಮಾಡಿತ್ತು. ಹಿಂದಿನ ಸರ್ಕಾರದ ಕಾರ್ಮಿಕ ಸಚಿವ ಬಚ್ಚೇಗೌಡ ಅವರು ಕಾರ್ಮಿಕ ಭವನ ನಿರ್ಮಾಣಕ್ಕೆ 1.50 ಕೋಟಿ ರೂಪಾಯಿಗಳು ಮಂಜುರು ಮಾಡಿದ್ದರು.
ತಮ್ಮ ಕಚೇರಿಗೆ ಹೋಗಿ ಕಾರ್ಮಿಕ ಭವನದ 12 ಗುಂಟೆ ಭೂಮಿ ಮತ್ತು 1.50 ಕೋಟಿ ರೂಪಾಯಿಗಳ ಬಗ್ಗೆ ವಿಚಾರಿಸಿದರೆ, ಕಾರ್ಮಿಕ ಭವನದ ಕಡತ ಕ್ಲೋಸ್ ಆಗಿದೆ ಎಂಧು ಅಧಿಕಾರಿಗಳು ಹೇಳುತ್ತಾರೆ. ಕ್ಲೋಸ್ ಅಂದರೆ, ಏನರ್ಥವೆಂದು ಅಧಿಕಾರಿಗಳಿಗೆ ಕೇಳಿದರೆ, ಕಾರ್ಮಿಕ ಭವನದ ಕಡತ ಮಂಜೂರಾಗಬಹುದು, ಇಲ್ಲವೇ ತಿರಸ್ಕೃತಗೊಳ್ಳಬಹುದು ಎಂಬ ಮಾತು ಅಧಿಕಾರಿಗಳು ಹೇಳುತ್ತಾರೆ.