ಡಿಸಿಸಿ ಬ್ಯಾಂಕಿನ ಶಾಖೆಗಳಿಗೆ ಹಾಗೂ ಪ್ಯಾಕ್ಸ್ ಗಳಿಗೆ ಭೇಟಿ ನೀಡಿ ಬೆಳೆವಿಮೆ ಅರ್ಜಿಗಳನ್ನು ಸಲ್ಲಿಸಿ : ಅಧ್ಯಕ್ಷರಾದ ಉಮಾಕಾಂತ್ ನಾಗಮಾರಪಳ್ಳಿ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಬೀದರ್ ನ ಅಧ್ಯಕ್ಷರಾದ ಉಮಾಕಾಂತ್ ನಾಗಮಾರಪಳ್ಳಿ ರವರು ರೈತಬಾಂಧವರ ಅನುಕೂಲಕ್ಕಾಗಿ ಪತ್ರಿಕಾ ಪ್ರಕಟಣೆಹೊರಡಿಸಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾಯೋಜನೆ 2023-24 ನೇ ಸಾಲಿನ ಖರೀಫ್ ಬೆಳೆ ವಿಮೆ ನೋಂದಣಿ ಮಾಡುವಕುರಿತು ತಿಳಿಸುತ್ತಾ ಡಿಸಿಸಿ ಬ್ಯಾಂಕ್ ನಿಯಮಿತ ಬೀದರ್ ತನ್ನೊಟ್ಟಿಗೆಅಧ್ಯರ್ಪಿತಗೊಂಡು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 188 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಷೇರುದಾರ ಸದಸ್ಯರಾದ, ಬೆಳೆಸಾಲ ಪಡೆದರೈತ ಬಾಂಧವರು ಹಾಗೂ ಸಾಲ ಪಡೆಯದರೈತರು ಈ ಸಾಲಿನಲ್ಲಿರೈತರು ಬಿತ್ತನೆ ಮಾಡಿರುವ ಬೆಳೆಗಳ ಪೈಕಿ ಹಾಗೂ ಸರ್ಕಾರ ಬೆಳೆ ವಿಮೆಗೆ ಗುರುತಿಸಿರುವ ಬೆಳೆಗಳ ಕುರಿತು ತಿಳಿದುಕೊಂಡು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸುತ್ತಾ ಈಗಾಗಲೇ ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದನಿರಂತರ ಹೆಚ್ಚು ಮಳೆಯಾಗುತ್ತಿರುವುದು ಹಾಗೂ ಸರ್ಕಾರದ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಭಾರಿ ಮಳೆ ಆಗುವ ನಿರೀಕ್ಷೆಇದ್ದುಇದರಿಂದತೇವಾಂಶ ಹೆಚ್ಚಾಗಿ ಬೆಳೆಗಳ ಬೆಳವಣಿಗೆ ಕುಂದಿರುವದುಹಲವು ರೈತ ಬಾಂಧವರು ನೀಡಿರುವ ಮೌಖಿಕ ಹೇಳಿಕೆಯಂತೆಹಾಗೂ ಬಿತ್ತನೆ ಮಾಡಿರುವರೈತರ ಬೆಳೆಗಳಲ್ಲಿ ಕೀಟ ಬಾಧೆಯಿಂದ ಬೆಳೆಗಳು ನಾಶವಾಗಿರುವದುಅಲ್ಲಲ್ಲಿ ವರದಿಯಾಗಿರುತ್ತದೆ. ರೈತ ಬಾಂಧವರುತಮ್ಮೆಲ್ಲರಗಮನದಲ್ಲಿರುವಂತೆ ಕಳೆದ 7 ವರ್ಷಗಳಿಂದ ತಾವುಗಳು ಬೆಳೆ ವಿಮೆ ಮಾಡಿಸಿಕೊಂಡು ತಮ್ಮಆರ್ಥಿಕ ಭದ್ರತೆಕಾಪಾಡಿಕೊಂಡು ಸಾಧನೆ ಮಾಡುತ್ತಾ ಮುಂದುವರೆಯುತ್ತಿರುವದು ಹೆಮ್ಮೆಯ ವಿಷಯವಾಗಿರುತ್ತದೆ. ಕಳೆದ 7 ವರ್ಷಗಳಲ್ಲಿ ನಮ್ಮ ಬ್ಯಾಂಕಿನ ಮುಖೇನ ಬೆಳೆ ವಿಮೆ ರೈತರ ಪಾಲಿನ ಪ್ರೀಮಿಯಂನ ಮೊತ್ತರೂ72.59 ಕೋಟಿಗಳಷ್ಟು ವಿಮಾ ಕಂಪನಿಗೆ ಪಾವತಿಸಿದ್ದು ಆಯಾ ವಾರ್ಷಿಕ ಋತುಮಾನಗಳಲ್ಲಿ ಹೆಚ್ಚಿನ ಮಳೆಯಾಗಿ ಅಥವಾ ತೇವಾಂಶಕಡಿಮೆಯಾಗಿ ಸರಾಸರಿ ಬೆಳೆ ಇಳುವರಿ ಮಟ್ಟಕಡಿಮೆಯಾಗಿರುವದರಿಂದ ಕೆಲವು ಬೆಳೆ ನಷ್ಟದ ಪರಿಣಾಮ ನಮ್ಮ ಬ್ಯಾಂಕಿನರೈತರ ಖಾತೆಗಳಿಗೆ ಸುಮಾರುರೂ 440.02 ಕೋಟಿಗಳಷ್ಟು ಬೆಳೆ ವಿಮೆ ಮೊತ್ತ ನೇರವಾಗಿಡಿ.ಬಿ.ಟಿ. ಮೂಲಕ ರೈತರ ಖಾತೆಗಳಿಗೆಜಮೆಆಗಿರುವುದುಬಹಳ ಸಂತೋಷದ ವಿಷಯವಾಗಿರುತ್ತದೆ. ಇದರಕುರಿತು ನಮ್ಮಎಲ್ಲಾರೈತ ಬಾಂಧವರಿಗೆ ಮಾಹಿತಿಕೂಡಇರುತ್ತದೆ.ತಾವುಗಳು ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೆಳೆ ವಿಮೆ ಮಾಡಿಸುವಲ್ಲಿ ಮುಂದೆ ಬಂದು ಕೃಷಿ ಅಲ್ಪಾವಧಿ ಬೆಳೆ ಸಾಲ ಪಡೆದರೈತರು ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಹಾಗೂ ಕೃಷಿ ಸಾಲ ಪಡೆಯದೆಇರುವರೈತರು ಡಿಸಿಸಿ ಬ್ಯಾಂಕಿನಎಲ್ಲಾ ಶಾಖೆಗಳಲ್ಲಿ ತಮ್ಮ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡು ತಮ್ಮ ಬೆಳೆಗೆ ಭದ್ರತೆ ಮಾಡಿಕೊಳ್ಳಲು ವಿನಂತಿಸುತ್ತಿದ್ದೇನೆ. ನಮ್ಮ ಬ್ಯಾಂಕುಗಳ ಶಾಖೆಗಳಲ್ಲಿ ಮತ್ತು ಪ್ಯಾಕ್ಸ್ ಗಳಲ್ಲಿವ ರೈತ ಬಾಂಧವರುತಾವು ಬಿತ್ತನೆ ಮಾಡಿರುವ ಬೆಳೆಗಳ ಬೆಳೆ ವಿಮೆ ನೋಂದಣಿಗಾಗಿ ಅರ್ಜಿಗಳು ಸಲ್ಲಿಸಲುತಿಳಿಸುತ್ತಿದ್ದೇವೆ. ಕೆಲವು ಗ್ರಾಮಗಳಲ್ಲಿ ಖಾಸಗಿಯವರುರೈತರಿಂದ ಸುಮಾರುರೂ. 50.00 ರೂ ಗಳಿಂದ ರೂ. 100.00 ರೂಪಾಯಿಗಳ ವರೆಗೆಒಂದುಅರ್ಜಿಗೆ ಹಣ ಪಡೆದು ಮುಗ್ಧ ರೈತ ಬಾಂಧವರಿಗೆಆರ್ಥಿಕ ಹೊರೆ ಮಾಡಿ ಹಣ ಪಡೆಯುತ್ತಿರುವದು ಬೆಳಕಿಗೆ ಬಂದಿರುತ್ತದೆ. ಪ್ರಯುಕ್ತಜಿಲ್ಲೆಯಎಲ್ಲಾರೈತ ಬಾಂಧವರು ಅರ್ಜಿಗಳು ತಂತ್ರಾಂಶದಲ್ಲಿ ಭರ್ತಿ ಮಾಡಲುತಮ್ಮ ಹಣವನ್ನುಖರ್ಚು ಮಾಡಿಕೊಳ್ಳದೆ ಸಮೀಪದ ಡಿಸಿಸಿ ಬ್ಯಾಂಕಿನ ಶಾಖೆಗಳಿಗೆ ಹಾಗೂ ಪ್ಯಾಕ್ಸ್ ಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಿ ಅರ್ಜಿಅಪೆÇ್ಲೀಡ್ ಮಾಡಲುಯಾವುದೇಖರ್ಚು ವೆಚ್ಚ ಗಳು ಇಲ್ಲದೆತಮ್ಮ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ತಿಳಿಸಲಾಗುತ್ತಿದೆ. ಬೆಳೆ ವಿಮೆ ಮಾಡಿಸಲು ದಿನಾಂಕ್ 31-07-2023 ರಂದು ಕೊನೆಯ ದಿನವಾಗಿದ್ದು ಕೂಡಲೇ ತಾವುಗಳು ಬೆಳೆ ವಿಮೆ ಅರ್ಜಿಗಳನ್ನು ಅಪೆÇ್ಲೀಡ್ ಮಾಡಿಕೊಳ್ಳಲು ರೈತ ಬಾಂಧವರಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಉಮಕಾಂತ ನಾಗಮಾರಪಳ್ಳಿಯವರು ಮನವಿ ಮಾಡಿಕೊಂಡಿರುತ್ತಾರೆ.