ಡಾ|| ಗುರುಪಾದಪ್ಪ ನಾಗಮಾರಪಳ್ಳಿಯವರ ಪರಿಶ್ರಮದಿಂದಾಗಿ ಈ ಕಾರ್ಖಾನೆ ಅಸ್ಥಿತ್ವಕ್ಕೆ ಬಂದಿತು :
ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಇಮಾಮಪೂರ, ಬೀದರದಲ್ಲಿ ಕಾರ್ಖಾನೆಯ ಅಧ್ಯಕ್ಷ ಡಿ.ಕೆ. ಸಿದ್ರಾಮ ರವರು ಸ್ವಾತಂತ್ರ್ಯ ದಿನಾಚಾರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೇರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ನಮ್ಮ ಹಿರಿಯರು ಮಾಡಿದ ತ್ಯಾಗ ಬಲಿದಾನಗಳಿಂದ ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಅವರು ಪಟ್ಟಂತಹ ಕಷ್ಟಗಳು ಈಗ ನಮಗೆ ಇಲ್ಲ. ಈಗಾಗಲೇ ಭಾರತ ದೇಶ ವಿಶ್ವದಲ್ಲಿಯೇ ಅತ್ಯಂತ ಗೌರವನ್ನು ಪಡೆದಿದೆ. ವಿದೇಶಗಳು ಕೂಡಾ ಭಾರತ ದೇಶವನ್ನು ಅಪಾರ ಗೌರವದಿಂದ ಹಾಗೂ ಹೆಮ್ಮೆಯಿಂದ ಹೊಗಳುತ್ತಿದ್ದಾರೆ. ಈ ಗೌರವವನ್ನು ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ದೇಶಾಭಿಮಾನ ನಮ್ಮೇಲ್ಲರಲ್ಲೂ ಇರಬೇಕು ಹಾಗೂ ಅದನ್ನು ಮುಂದಿನ ಜನಾಂಗಕ್ಕೆ ನಾವು ತಿಳಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ನುಡಿದರು.
ಪ್ರಸಕ್ತ 2023-24ರ ಸಾಲಿನ ಹಂಗಾಮಿನ ಪ್ರಾರಂಭಕ್ಕೆ ಪೂರ್ವಭಾವಿಯಾಗಿ ಮಿಲ್ ರೋಲರ್ ಪೂಜಾ ಸಮಾರಂಭವನ್ನು ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡುತ್ತ ಪೂಜ್ಯ ಡಾ|| ಗುರುಪಾದಪ್ಪ ನಾಗಮಾರಪಳ್ಳಿಯವರ ಪರಿಶ್ರಮದಿಂದಾಗಿ ಈ ಕಾರ್ಖಾನೆ ಅಸ್ಥಿತ್ವಕ್ಕೆ ಬಂದಿತು. ಸಹಕಾರ ರಂಗದಲ್ಲಿ ಅಪಾರ ವಿಶ್ವಾಸ ಹೊಂದಿದ ಶ್ರೀಯುತರು ಎಲ್ಲಾ ಸಂಸ್ಥೆಗಳನ್ನು ಸಹಕಾರ ರಂಗದಲ್ಲಿಯೇ ಸ್ಥಾಪಿಸಿದರು. “ಸಹಕಾರದಿಂದಲೇ ಸಮೃದ್ಧಿ” ಎಂಬುದು ಅವರ ದಿಟ್ಟ ನಿಲುವಾಗಿತ್ತು. ಪ್ರಸ್ತುತ ಕಾರ್ಖಾನೆಯು ಪ್ರಗತಿಪಥದಲ್ಲಿ ಸಾಗುತ್ತಿದ್ದು ಆದಷ್ಟು ತೀವ್ರಗತಿಯಲ್ಲಿ ಎಥೆನಾಲ್ ಘಟಕ ಸ್ಥಾಪಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉಪ ಉತ್ಪನ್ನಗಳನ್ನು ಸಮರ್ಥವಾಗಿ ಬಳಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಶುಭ ಸಂದರ್ಭದಲ್ಲಿ ಬೀದರ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಮಾನ್ಯಶ್ರೀ ಉಮಾಕಾಂತ ನಾಗಮಾರಪಳ್ಳಿ, ಶ್ರೀ ಬಸವರಾಜ ಹೆಬ್ಬಾಳೆ, ಶ್ರೀ ಭೀಮರಾಮ ಪಾಟೀಲ ಡಿಗ್ಗಿ, ಶ್ರೀ ಶಾಂತಕುಮಾರ ಜೋಶಿ, ಕಾರ್ಖಾನೆಯ ಉಪಾಧ್ಯಕ್ಷರಾದ ಶ್ರೀ ಬಾಲಾಜಿ ಚವ್ಹಾಣ, ನಿರ್ದೇಶಕರಾದ ಶ್ರೀ ಝರೇಪ್ಪಾ ಮಮದಾಪೂರ, ಶ್ರೀ ರಾಜಕುಮಾರ ಕರಂಜಿ, ಶ್ರೀ ಶಂಕರೆಪ್ಪ ಪಾಟೀಲ, ಶ್ರೀ ಶಿವಬಸಪ್ಪಾ ಚೆನ್ನಮಲ್ಲೆ, ಶ್ರೀ ಸಿದ್ರಾಮ ವಾಗಮಾರೆ, ಶ್ರೀ ವಿಜಯಕುಮಾರ ಪಿ. ಪಾಟೀಲ, ಶ್ರೀ ಸಿತಾರಾಮ ಖೇಮಾ, ಶ್ರೀಮತಿ ಶೋಭಾವತಿ ಪಾಟೀಲ, ಶ್ರೀಮತಿ ಮಲ್ಲಮ್ಮಾ ಪಾಟೀಲ, ಶ್ರೀ ಶಶಿಕುಮಾರ ಪಾಟೀಲ, ಶ್ರೀ ವೀರಶೆಟ್ಟಿ ಪಟ್ನೆ, ಶ್ರೀ ನಾಗರೆಡ್ಡಿ ಯಾಚೆ, ವ್ಯವಸ್ಥಾಪಕ ನಿರ್ದೇಶಕ ಶ್ರೀ ಬಿ.ಎಸ್. ಅಪರಂಜಿ, ಇಲಾಖಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.