ಬೀದರ್

ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಆತ್ಮ ಕಥ ಪುಸ್ತಕನೀಡಿದ : SP ಚನ್ನಬಸವಣ್ಣ ಲಂಗೋಟಿ

ಬೀದರ್ : ಔರಾದ್ ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಓದಿಗಾಗಿ ಶನಿವಾರ ತಮ್ಮ ಕಛೇರಿಯಲ್ಲಿ ಶಾಲಾ ಶಿಕ್ಷಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅವರು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಆತ್ಮ ಕಥನ ಅಗ್ನಿಯ ರೆಕ್ಕೆಗಳು ಪುಸ್ತಕದ 4 ಪ್ರತಿಗಳು ನೀಡಿದರು.
ಎಕಲಾರ ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಮಾಡಿರುವ ಕಲಿಕಾ ಪೂರಕ ಕೆಲಸಗಳು ಕಂಡು ಜೂನ್ 1 ರಂದು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡು ಶಿಕ್ಷಕರಿಗೆ ಆತ್ಮವಿಶ್ವಾಸ ತುಂಬಿದ್ದಲ್ಲದೇ ಮಕ್ಕಳ ಓದಿಗಾಗಿ ಶಾಲಾ ಗ್ರಂಥಾಲಯಕ್ಕೆ ಅಬ್ದುಲ್ ಕಲಾಂ ಆತ್ಮ ಕಥನ ಅಗ್ನಿಯ ರೆಕ್ಕೆಗಳು ಪುಸ್ತಕ ನೀಡುವುದಾಗಿ ತಿಳಿಸಿದ್ದರು.
ಅದಕ್ಕೆ ಪೂರಕವೆಂಬಂತೆ ಶನಿವಾರ ಶಾಲಾ ಅವಧಿಯ ನಂತರ ಬರುವಂತೆ ತಿಳಿಸಿದ ಅವರು, ಬೀದರ್ ನಗರದ ತಮ್ಮ ಕಛೇರಿಯಲ್ಲಿ ಮುಖ್ಯಶಿಕ್ಷಕ ಪ್ರಭು ಬಾಳೂರೆ ಅವರಿಗೆ ಪುಸ್ತಕಗಳು ನೀಡಿದ್ದಲ್ಲದೇ ಅಪಘಾತ ತಡೆಗೆ ಶಾಲಾ ಶಿಕ್ಷಕರು ಕೈಜೋಡಿಸುವಂತೆ ತಿಳಿಸಿದರು.
ಸುದೀರ್ಘ 20-30 ನಿಮಿಷಗಳ ಕಾಲ ಶಿಕ್ಷಕರೊಂದಿಗೆ ಮಾತನಾಡಿದ ಅವರು, ಹೆಲ್ಮೇಟ್ ಬಳಕೆಯ ಮಹತ್ವ, ಸೀಟ್ ಬೆಲ್ಟ್ ಧರಿಸುವಿಕೆ, ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗೆ ಪ್ರಜ್ಞಾವಂತರಾದ ಶಿಕ್ಷಕರು ಪೊಲೀಸ್ ಇಲಾಖೆಗೆ ಕೈಜೋಡಿಸಬೇಕು. ಜಿಲ್ಲೆಯ ಎಲ್ಲ ತಾಲೂಕಿನ ಶಾಲಾ ಕಾಲೇಜು ಮುಖ್ಯಸ್ಥರಿಗೆ ವೈಯಕ್ತಿಕ ಪತ್ರಗಳು ಬರೆದು ವಿನಂತಿಸಿಕೊಳ್ಳಾಗಿದೆ.
ಶಿಕ್ಷಕರು ಮಕ್ಕಳಿಗೆ ಈ ಎಲ್ಲ ವಿಷಯಗಳ ಬಗ್ಗೆ ತಿಳಿ ಹೇಳಿದರೇ ಅವರು ಪಾಲಕರಲ್ಲಿ ಅಥವಾ ಇನ್ನಿತರರಲ್ಲಿ ಹಂಚಿಕೊಂಡು ಅಪಘಾತವಾಗದಂತೆ ತಡೆÀಬಹುದಾಗಿದೆ. ಶಿಕ್ಷಕ ಬಾಲಾಜಿ ಅಮರವಾಡಿ ಮಾತನಾಡಿ, ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ರಾತ್ರಿ ಹೊತ್ತು ಪುಂಡ ಪೋಕರಿಗಳ ಹಾವಳಿ ಹೆಚ್ಚಾಗುತ್ತಿದ್ದು, ಬೆಳಿಗ್ಗೆ ಶಾಲಾ ಆವರಣದಲ್ಲಿ ಇಸ್ಪೀಟ್ ಎಲೆಗಳು, ಮಧ್ಯಪಾನ ಮಾಡಿರುವ ಬಾಟಲಿಗಳು ಹಾಗೂ ಮಲ ಮತ್ತೀತರ ರೀತಿಯಲ್ಲಿ ವಾತಾವರಣ ಕೆಡಿಸುತ್ತಿದ್ದು, ಅದನ್ನು ತಡೆಯುವಂತೆ ವಿನಂತಿಸಿದರು.
ತಕ್ಷಣ ಸ್ಪಂದಿಸಿದ ವರಿಷ್ಠಾಧಿಕಾರಿಗಳು ಈ ಕುರಿತು ಈಗಾಗಲೇ ಹಲವು ರೀತಿಯಲ್ಲಿ ಯೋಜನೆ ರೂಪಿಸಿದ್ದು, ಅಂತಹ ವ್ಯಕ್ತಿಗಳ ಹೆಸರು ಹೇಳಿದರೆ ಖಂಡಿತ ಮಾಹಿತಿ ನೀಡಿದವರ ಹೆಸರುಗಳು ರಹಸ್ಯವಾಗಿಟ್ಟು ಕ್ರಮ ವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಸಿಆರ್‍ಪಿ ಮಹಾದೇವ ಘುಳೆ, ಬಾಲಾಜಿ ಅಮರವಾಡಿ, ಜೈಸಿಂಗ್ ಠಾಕೂರ್, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ರಮೇಶ ಹಿಪ್ಪಳಗಾವೆ, ಸುನೀಲ್ ಕೋರಿ, ಸುನೀಲ್ ಬಿಚಕುಂದೆ ಇದ್ದರು.

Ghantepatrike kannada daily news Paper

Leave a Reply

error: Content is protected !!