ಟೋಕರೆ ಕೋಳಿ (ಕಬ್ಬಲಿಗ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಕ್ಕಾಗಿ ಃ ಅರ್ಜಿ ಆವ್ಹಾನ
ಬೀದರ್ ಜೂನ್ 09ಃ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆಯ ಆಶ್ರಯದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರಿಕ್ಷೆಯಲ್ಲಿ ಶೇ.60ಕ್ಕೂ ಮೇಲ್ಪಟ್ಟು ಅಂಕ ಪಡೆದು ಉತ್ತಿರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕಾಗಿ ಅರ್ಹರಿಂದ ಅರ್ಜಿ ಆವ್ಹಾನಿಸಲಾಗಿದೆ.
ಟೋಕರೆ ಕೋಳಿ (ಕಬ್ಬಲಿಗ) ಸಮುದಾಯದ ಅರ್ಹ ವಿದ್ಯಾರ್ಥಿಗಳು ಬೀದರನ ಕೇನರಾ ಬ್ಯಾಂಕ್ ಸಮೀಪದ ಅಂಬಿಗರ ಚೌಡಯ್ಯ ಯುವ ಸೇನೆಯ ಕೇಂದ್ರ ಕಛೇರಿಗೆ ಭೇಟಿ ನೀಡಿ ಉಚಿತವಾಗಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜೀಗಳು ಜೂನ್ 20 ರೊಳಗಾಗಿ ಸೇನೆಯ ಕಾರ್ಯಾಲಯಕ್ಕೆ ಸಲ್ಲಿಸಲು ಕೋರಲಾಗಿದೆ.
ಅರ್ಜಿಯೊಂದಿಗೆ ಎಸ್ಸೆಸ್ಸೆಲ್ಸಿ/ಪಿಯುಸಿ ಅಂಕಪಟ್ಟಿ, ಆಧಾರ ಕಾರ್ಡ, ಜಾತಿ ಪ್ರಮಾಣ ಪತ್ರದ ಜೋತೆಗೆ ಏರಡು ಭಾವಚಿತ್ರಗಳು ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷರಾದ ಜಗನ್ನಾಥ ಜಮಾದಾರ್ ಮೋ- 9448139334 ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ ಮೋ – 8722228882, 9964713131 ಗೆ ಸಂಪರ್ಕಿಸಬಹುದು.