ಟೋಕರೆ ಕೋಳಿ, ಕಬ್ಬಲಿಗ-ಕೋಲಿ ಹಾಗೂ ಕಬ್ಬಲಿಗ-ಕೋಲಿ, ಟೋಕರೆ ಕೋಲಿ ಎರಡು ಪರ್ಯಾಯ ಪದಗಳು ಒಂದೇ ಎಂದು ಪರಿಗಣಿಸಲು ಮನವಿ
ಬೀದರ್ ಆಗಷ್ಟ. 24ಃ ಕೇಂದ್ರ ಸರ್ಕಾರ ಟೋಕರೆ ಕೋಳಿ, ಕಬ್ಬಲಿಗ-ಕೋಲಿ ಹಾಗೂ ಕಬ್ಬಲಿಗ-ಕೋಲಿ, ಟೋಕರೆ ಕೋಳಿ ಎರಡು ಪರ್ಯಾಯ ಪದಗಳು ಒಂದೇ ಎಂದು ಪರಿಗಣಿಸಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿಯವರು ಕೋರಿದ್ದಾರೆ.
ಈ ಕುರಿತು ಕೇಂದ್ರ ಸಚಿವ ಭಾನು ಪ್ರತಾಪಸಿಂಗ ವರ್ಮಾ ಅವರನ್ನು ಬುಧವಾರ ಬೀದರ ಜಿಲ್ಲೆಯ ಹೊಸ ರೇಕುಳಗಿ ಗ್ರಾಮದ ಮಹರ್ಷಿ ವಾಲ್ಮೀಕಿ ನಗರದಲ್ಲಿ ಭೇಟಿ ಮಾಡಿ ಮಹರ್ಷಿ ವಾಲ್ಮೀಕಿ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯನವರ ಪುಸ್ತಕ ನೀಡಿ, ಶಾಲು ಹೊದಿಸಿ ಸನ್ಮಾನಿಸಿದ ಬಳಿಕ ಸಲ್ಲಿಸಿದ ಮನವಿ ಪತ್ರವನ್ನು ಪ್ರಕಟಣೆಗೆ ಬಿಡಗಡೆ ಮಾಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಬೀದರ, ಕಲಬುರಗಿ, ಯಾದಗಿರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಟೋಕರೆ ಕೋಳಿ, ಕಬ್ಬಲಿಗ-ಕೋಲಿ ಹಾಗೂ ಕಬ್ಬಲಿಗ-ಕೋಲಿ, ಟೋಕರೆ ಕೋಳಿ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಹೀಗಾಗಿ ಟೋಕರೆ ಕೋಳಿ, ಕಬ್ಬಲಿಗ-ಕೋಲಿ ಹಾಗೂ ಕಬ್ಬಲಿಗ-ಕೋಲಿ, ಟೋಕರೆ ಕೋಳಿ ಒಂದೇ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
ಬೀದರ, ಕಲಬುರಗಿ ಮತ್ತು ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ಪ್ರದೇಶದ ಇತರೆ ಜಿಲ್ಲೆಗಳಲ್ಲಿ ಟೋಕರೆ ಕೋಳಿ ಸಮದಾಯದ ಜನರು ಅಧಿಕ ಸಂಖ್ಯೆಯಲ್ಲಿದ್ದು, ಕೆಲವು ಕಡೆ ಟೋಕರೆ ಕೋಳಿ, ಕಬ್ಬಲಿಗ-ಕೋಲಿ ಎಂದು ಕರೆಯಲಾಗುತ್ತದೆ. ಇನ್ನೂ ಕೆಲವು ಕಡೆ ಕಬ್ಬಲಿಗ-ಕೋಲಿ, ಟೋಕರೆ ಕೋಳಿ ಎಂದು ಕರೆಯಲಾಗುತ್ತದೆ. ಈ ಎರಡು ಟೋಕರೆ ಕೋಳಿ ಸಮುದಾಯದ ಪರ್ಯಾಯ ಪದಗಳಾಗಿವೆ ಎಂದು ತಿಳಿಸಿದ್ದಾರೆ.
ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಉತ್ತರ ಕರ್ನಾಟಕ ಭಾಗದಲ್ಲಿರುವ ಗೊಂದಲವನ್ನು ನಿವಾರಣೆ ಮಾಡಬೇಕು ಹಾಗೂ ಎರಡು ಪರ್ಯಾಯ ಪದಗಳೆಂದು ಪರಿಗಣಿಸಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ದೇಶದ 16 ರಾಜ್ಯಗಳಲ್ಲಿ ಕೋಲಿ ಸಮುದಾಯ ಪರಿಶಿಷ್ಟ ಜಾತಿ (ಎಸ್.ಸಿ.) ಮತ್ತು 9 ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡ (ಎಸ್.ಟಿ.)ದಲ್ಲಿದೆ.
ಕರ್ನಾಟಕ ಸರ್ಕಾರವು ಸಹ ಬೀದರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಟೋಕರೆ ಕೋಳಿ ಸಮಾಜಕ್ಕೆ ಎಸ್.ಟಿ. ಪ್ರಮಾಣ ಪತ್ರವನ್ನು ಸರಳ ರೀತಿಯಲ್ಲಿ ನೀಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನ-ಮಾನಗಳಲ್ಲಿ ಟೋಕರೆ ಕೋಳಿ ಸಮಾಜಕ್ಕೆ ಎಸ್.ಟಿ. ಪ್ರಮಾಣ ಪತ್ರ ನೀಡಲು ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಇದರಿಂದ ಟೋಕರೆ ಕೋಳಿ ಸಮಾಜದ ಜನರು ತಮ್ಮ ತಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕೊಡಿಸಲು ಬಹಳ ಕಷ್ಟ ಪಡುವಂತಾಗಿದೆ. ಆದ್ದರಿಂದ ಟೋಕರೆ ಕೋಳಿ ಸಮುದಾಯಕ್ಕೆ ಎಸ್.ಟಿ. ಪ್ರಮಾಣ ಪತ್ರವನ್ನು ಸರಳ ರೀತಿಯಲ್ಲಿ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷರಾದ ಜಗನ್ನಾಥ ಜಮಾದಾರ, ಪ್ರ-ಕಾರ್ಯದರ್ಶಿ ಪಾಂಡುರಂಗ ಗುರುಜಿ, ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಅಮರೇಶ ಕಾಮನಕೇರಿ, ಶನ್ಮೂಖಪ್ಪಾ ಶೇಕಾಪೂರ್, ದಯಾನಂದ ಮೇತ್ರಿ, ಚಂದ್ರಕಾಂತ ಹಳ್ಳಿಖೇಡಕರ್, ರಾಜಕುಮಾರ ಕಾರಲಾ, ಶಂಕರ್ ರೇಕುಳಗಿ, ರಮೇಶ ಶಿವಕುಮಾರ್, ಅಂಬಿಗಾರ್, ಬಸವರಾಜ ಮನ್ನಾಏಖೇಳ್ಳಿ, ಅರವಿಂದ ರಾಣಾ, ಸಂಜುಕುಮಾರ್, ಸುರೇಶ, ಸೇರಿದಂತೆ ಇತರರು ಇದ್ದರು.