ಟೆಂಡರ್ ಜಾಹಿರಾತು ವಾರ್ತಾ ಇಲಾಖೆಯ ಮುಖಾಂತರ ನೀಡಲು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಅವರನ್ನು ಭೇಟಿ ಮಾಡಿದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಅಡಿಯಲ್ಲಿ ಮನವಿ ಪತ್ರ ನೀಡಿ 19-01-2017ರ ಸರ್ಕಾರದ ತಿದ್ದುಪಡಿ ಆದೇಶದ ಪ್ರಕಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಮಗಾರಿಗಳ ಟೆಂಡರ್ ಪ್ರಕಟಣೆಯನ್ನು ಕಡ್ಡಾಯವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಇವರ ಮುಖಾಂತರವೇ ಬಿಡುಗಡೆಗೊಳಿಸಲು ಸುತ್ತೋಲೆ ಹೊರಡಿಸುವಚಿತ ಮನವಿ ಪತ್ರದಲ್ಲಿ ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳು ಮಾತನಾಡಿದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರು ಹಾಜರಿದ್ದರು. ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ(ರಿ) ಬೆಂಗಳೂರು ಬೀದರ ಜಿಲ್ಲಾ ಅಧ್ಯಕ್ಷರಾದ ಈ ಸೂರ್ಯಾಸ್ತ ಪತ್ರಿಕೆಯ ಸಂಪಾದಕರಾದ ವಿಜಯಕುಮಾರ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಯುವರಂಗ ಪತ್ರಿಕೆಯ ಸಂಪಾದಕ ಶಶಿಕುಮಾರ ಪಾಟೀಲ, ಕಾಜಿ ಅಲಿಯೋದ್ದೀನ್, ಮಾಳಪ್ಪ ಅಡಸಾರೆ, ಹಸನ್ ಸೈಯದ್ ಖಾದ್ರಿ ಉಪಸ್ಥಿತರಿದ್ದರು.