ಬೀದರ್

ಟಿಕೇಟಗೆ ಬೇಡಿಕೆ ಇಟ್ಟ ಯುವ ಮುಖಂಡ ವಿಜು ಪಾಟೀಲ್ ಗಾದಗಿ

 ವಿಜಯಕುಮಾರ ಎಸ್. ಪಾಟೀಲ ಗಾದಗಿ ಎಂ.ಎಸ್ಸಿ (ಕೃಷಿ) ಪದವೀಧರನಾಗಿದ್ದು, ಕಳೆದ 20 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಮಾನ್ಯ ಹಾಗೂ ಸ್ರಕೀಯ ಕಾರ್ಯಕರ್ತನಾಗಿ ಪಕ್ಷವು ನೀಡಿದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುತ್ತಾರೆ
ಈ ಮೊದಲು ಪಕ್ಷವು ಎರಡು ಬಾರಿ ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ, ಒಂದು ಅವಧಿಗೆ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನ್ನಾಗಿ, ಒಂದು ಅವಧಿಗೆ ಮಂಡಲ ಅಧ್ಯಕ್ಷನಾಗಿ ಕಳೆದ ಬಾರಿ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತವಾಗಿ ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಂ.ಎಸ್ಸಿ (ಕೃಷಿ) ಪದವೀಧರನಾದ  ವಿಜಯ ಪಾಟೀಲ್ ಕಳೆದ 15 ವರ್ಷಗಳಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿ.ಸಿ.ಸಿ. ಬ್ಯಾಂಕ್) ನಿರ್ದೇಶಕನಾಗಿ, ಸಹಕಾರ ಆಸ್ಪತ್ರೆಯ ನಿರ್ದೇಶಕನಾಗಿ ಕಳೆದ 20 ವರ್ಷಗಳಿಂದ ರಾಜ್ಯ ಕೃಷಿ ಪದವೀಧರರ ಹಾಗೂ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯುಕ್ತ ಪಕ್ಷವು ಈಶಾನ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡಿ, ಪ್ರಥಮ ಬಾರಿಗೆ ಬೀದರ ಜಿಲ್ಲೆಗೆ ಆದ್ಯತೆ ನೀಡಬೇಕಾಗಿ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣಾ ಪ್ರಭಾರಿಯಾದ ಮಾಜಿ ಸಚಿವ ಬಿ. ಶ್ರೀರಾಮಲು ಅವರನ್ನು ಯುವ ಮುಖಂಡ ವಿಜಯ ಕುಮಾರ ಪಾಟೀಲ್ ಅವರು ಮನವಿ ಸÀಲ್ಲಿಸಿದ್ದಾರೆ.
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ, ಮಾಜಿ ಶಾಸಕರಾದ ಸುಭಾಷ ಕಲ್ಲುರ, ರಾಜಕುಮಾರ ಪಾಟೀಲ್ ತೇಲ್ಕೂರ್, ಈಶ್ವರಸಿಂಗ ಠಾಕೂರ ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!