ಜೈ ಹನುಮಾನ ರಾಮಮಂದಿರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಿತ್ಯ ಭಜನೆ ಕಾರ್ಯಕ್ರಮ
ಬೀದರ್ : ಬೀದರ ನಗರದ ವಾರ್ಡ ನಂ 24 ರಲ್ಲಿ ಬರುವ ಸಂಗಮೇಶ್ವರ ಕಾಲೋನಿಯ ಜೈ ಹನುಮಾನ ರಾಮಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರಾವಣ ಮಾಸದ ಪ್ರಯುಕ್ತ ದಿನ ನಿತ್ಯ ದೇವರ ವಿಶೇಷ ಪುಜೆ ಕಾರ್ಯಕ್ರಮ ನಡೆಯುತ್ತಿದೆ. ನಂತರ ಸಾಯಂಕಾಲ ಕಾಲೋನಿಯ ಮಹಿಳಾ ಭಕ್ತರಿಂದ ಭಜನೆ ಕಾರ್ಯಕ್ರಮವು ದಿನನಿತ್ಯ ನಡೆಯುತ್ತಿದ್ದು ಕಾಲೋನಿಯ ನೂರಾರು ಮಹಿಳಾ ಭಕ್ತರು ಈ ಭಜನೆ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಿ ಆರತಿ ಹಾಗೂ ತೀರ್ಥ ಪ್ರಸಾದ ಪಡೆದು ಪುನೀತರಾಗುತ್ತಿದ್ದಾರೆ.
ಈ ಒಂದು ತಿಂಗಳ ಶ್ರಾವಣ ಮಾಸದ ಭಜನೆ ನಂತರ ಅಂದರೆ ಅಮವಾಸ್ಯೆಯ ಮರುದಿನ ಖಾಂಡ ಕೂಢಾ ಮಾಡಲಾಗುತ್ತಿದ್ದು ಜಿಲ್ಲೇಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಪ್ರಸಾದ ಪಡೆಯಬೇಕೆಂದು ಕಾಲೋನೀಯ ಮಹಿಳಾ ಭಕ್ತರಾದ ಸಂಗಮ್ಮಾ ಪಾಟೀಲ ಅವರು ಮನವಿ ಮಾಡಿದ್ದಾರೆ.
ಈ ಭಜನೆ ಕಾರ್ಯಕ್ರಮದಲ್ಲಿ ರತೀದೇವಿ ಹೊನ್ನಾ, ಜಗದೇವಿ ಐಸ್ಪುರೆ, ಕಲ್ಪನಾ, ಸರಸ್ವತಿ , ಶೋಭಾ ಮದರ್ ಗೈ,ನಿರ್ಮಲಾ ರಾಜುರೆಡ್ಡಿ ಅನುಶಮ್ಮಾ ನರಸಾರೆಡ್ಡಿ, ಚಿನ್ನಮ್ಮಾ ಸೇರಿದಂತೆ ಸಂಗಮೇಶ್ವರ ಕಾಲೋನಿ ಹಾಗೂ ಹನುಮಾನ ನಗರ ಕಾಲೋನಿಯ ನೂರಾರು ಮಹಿಳಾ ಭಕ್ತರು ದಿನ ನಿತ್ಯ ಭಜನೆ ಕಾರ್ಯಕ್ರಮದಲ್ಲಿ ಭಾಗವಸುತ್ತಿದ್ದಾರೆ.