ಜೂನ್ 9 ರಂದು ಗುರುಪಾದೇಶ್ವರ ಆಸ್ಪತ್ರೆ ಉದ್ಘಾಟನೆ
ಜೂನ್ 9ರಂದು ಬೀದರ್ ನಗರದ ನೆಹರು ಸ್ಟೇಡಿಯಂ ರಸ್ತೆಯಲ್ಲಿರುವ ಕೋಟೆಕ್ ಬ್ಯಾಂಕ್ ಎದುರುಗಡೆ ಗುರುಪಾದೇಶ್ವರ ಗ್ಯಾಸ್ಟ್ರೋ ಚಿಕಿತ್ಸಾ ಆಸ್ಪತ್ರೆ ಉದ್ಘಾಟನೆಗೊಳ್ಳುತ್ತಿದೆ ಎಂದು ಆಸ್ಪತ್ರೆಯ ಡಾಕ್ಟರ್ ಎಸ್ ಎನ್ ಮಠ ಅವರು ತಿಳಿಸಿದ್ದಾರೆ, ಗ್ಯಾಸ್ಟ್ರೋ ಪ್ರಸಿದ್ಧ ವೈದ್ಯರಾದ ಸುನಿಲ್ ಮಠ ಅವರು ಮೂಲತಃ ಬೀದರ್ ಜಿಲ್ಲೆಯವರೇ ಆಗಿದ್ದು ಹಾಗಾಗಿ ಜಿಲ್ಲೆಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಏಕೈಕ ಉದ್ದೇಶದಿಂದ ಗ್ಯಾಸ್ಟ್ರೋ ಆಸ್ಪತ್ರೆ ತೆರೆಯಲಾಗಿದೆ, ಡಾಕ್ಟರ್ ಸುನಿಲ್ ಮಠ ಅವರು ಬೇರೆ ಬೇರೆ ಕಡೆ ಒಳ್ಳೆ ರೀತಿಯಿಂದ ಸೇವೆ ಸಲ್ಲಿಸಿ ಪ್ರಖ್ಯಾತಿ ಪಡೆದಿರುತ್ತಾರೆ, ಗ್ಯಾಸ್ಟ್ರೋ ವೈದ್ಯರು ಸಿಗುವುದು ಅಪರೂಪ ಹಾಗಾಗಿ ಬೀದರ್ ಜಿಲ್ಲೆಯ ರೋಗಿಗಳು ಇವರ ಸಧುಪಯೋಗ ಪಡೆದುಕೊಳ್ಳುವಂತೆ ಡಾ. ಎಸ್ ಎನ್ ಮಠ ಅವರು ಮನವಿ ಮಾಡಿದ್ದಾರೆ