ಬೀದರ್

ಜು.6, 7ರಂದು ವಿವಿಧ ಕಾರ್ಯಕ್ರಮ ಆಯೋಜನೆ ವಿದ್ಯಾನಗರ ಚಚರ್್ ಬೆಳ್ಳಿ ಮಹೋತ್ಸವ

ಬೀದರ್: ಇಲ್ಲಿನ ವಿದ್ಯಾನಗರ ಬಡಾವಣೆಯ ಸೇಂಟ್ ಪೌಲ್ ಮೆಥೊಡಿಸ್ಟ್ ಚಚರ್್ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಜು.6 ಮತ್ತು 7ರಂದು ಆಯೋಜಿಸಲಾಗಿದೆ.
ಸಾಂಸ್ಕೃತಿಕ, ದೈವ ಸಂದೇಶ ಸೇರಿದಂತೆ ಎರಡು ದಿನ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜು.7ರಂದು ಸಾಯಂಕಾಲ 4 ಗಂಟೆಗೆ ಇಲ್ಲಿನ ಮೈಲೂರು ಕ್ರಾಸ್ನಿಂದ ವಿದ್ಯಾನಗರ ಚಚರ್್ ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲ್ಗೊಳ್ಳಲಿವೆ.
ಮೆರವಣಿಗೆ ನಂತರ ದೈವ ಸಂದೇಶ ಸಮಾರಂಭ ನಡೆಯಲಿದೆ. ಬಿಷಪ್ ಎನ್.ಎಲ್ ಕರಕರೆ ಅವರು ದೈವ ಸಂದೇಶ ನೀಡಲಿದ್ದಾರೆ. ಕಮಲ ಕರಕರೆ, ಜಿಲ್ಲಾ ಮೆಥಡಿಸ್ಟ್ ಚಚರ್್ನ ಡಿಎಸ್ ರೆ.ನೆಲ್ಸನ್ ಸುಮಿತ್ರ, ಸಿಮೊನ್ ಮಾಕರ್್, ಎಸ್.ಎಲ್. ತುಕರಾಮ, ಮಾಟರ್ಿನ್ ಅಭಿಷೇಕ್, ಇಮಾನವೆಲ್ ಪ್ರದೀಪ್ಕುಮಾರ್, ಜಾನ್ ರುಫ್ಸು ಇತರರು ಪಾಲ್ಗೊಳ್ಳಲಿದ್ದಾರೆ.
ವಿದ್ಯಾನಗರ ಬಡಾವಣೆಯಲ್ಲಿ ಚಚರ್್ ಸ್ಥಾಪನೆಯಾಗಿ 25 ವರ್ಷ ಆಗಿದೆ. ಹೀಗಾಗಿ ಕಾರ್ಯಕ್ರಮ ಅರ್ಥಪೂರ್ಣ, ಅದ್ದೂರಿಯಾಗ ಆಯೋಜನೆಗೆ ಎರಡು ದಿನ ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನಗಳ ಕಾರ್ಯಕ್ರಮಕ್ಕೆ ಸಮುದಾಯ ಬಾಂಧವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಚಚರ್್ನ ನಿರ್ಮಲಾ ಸೈಮನ್ ಮಾಕರ್್ ಮನವಿ ಮಾಡಿದ್ದಾರೆ

Ghantepatrike kannada daily news Paper

Leave a Reply

error: Content is protected !!