ಜು. 15ಕ್ಕೆ ನೂತನ ಸಂಸದ ಸಾಗರ ಖಂಡ್ರೆಗೆ ಅಭಿನಂದನಾ ಸಮಾರಂಭ
ಬೀದರ್ ಜು. 14:-ಬೀದರ್ನ ನೂತನ ಲೋಕಸಭಾ ಸದಸ್ಯರಾದ ಸಾಗರ್ ಈಶ್ವರ ಖಂಡ್ರೆ ಅವರಿಗೆ ವೀರಶೈವ ಲಿಂಗಾಯತ ಸೇವಾ ಸಮಿತಿ ಬೀದರ್ ವತಿಯಿಂದ ಜುಲೈ 15ರಂದು ಸಂಜೆ 7 ಗಂಟೆಗೆ ಬೀದರ್ನ ಪಾಪನಾಶ ದೇವಸ್ಥಾನದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪ್ರಕಟಣೆ ನೀಡಿದ ಸಮಿತಿಯ ಪ್ರಮುಖರು ದೇಶದ ಅತ್ಯಂತ ಕಿರಿಯ ವಯಸ್ಸಿನ ಸಂಸದರಲ್ಲಿ ಒಬ್ಬರು. ಪ್ರಸ್ತುತ ಎನ್.ಎಸ್.ಯು.ಐ. ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆಗಿರುವರು.
ಸ್ನೇಹಜೀವಿಯಾದ ಇವರು ಸರಳತೆ, ಸಜ್ಜನಿಕೆಗೆ ಹೆಸರಾದವರು. ಉತ್ತಮ ವಾಗ್ಮಿಗಳು. ಜನ ಪರ, ಜೀವ ಪರ ಕಾಳಜಿಯುಳ್ಳ ಯುವ ನೇತಾರರಾಗಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರದಿಂದ ಪ್ರಚಂಡ ಬಹುಮತದಿಂದ ಆಯ್ಕೆಯಾದ ಪ್ರಯುಕ್ತ ಅವರಿಗೆ ವೀರಶೈವ ಲಿಂಗಾಯತ ಸೇವಾ ಸಮಿತಿ ವತಿಯಿಂದ ಜುಲೈ 15 ರಂದು ಬೀದರಿನ ಐತಿಹಾಸಿಕ ದೇವಸ್ಥಾನ ಪಾಪನಾಶ ದೇಗುಲದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸತ್ಕರಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಸಮಿತಿಯ ಪ್ರಮುಖರು ಕೋರಿದ್ದಾರೆ.