ಬೀದರ್

ಜುಲೈ 29ರಂದು ಪತ್ರಿಕಾ ದಿನಾಚರಣೆ, ಸಚಿವದ್ವಯರಿಗೆ ಆಹ್ವಾನ: ಕೆಯುಡಬ್ಲೂಜೆ ರಾಜ್ಯಾಧ್ಯಕ್ಷ ತಗಡೂರ್ ಆಗಮನ

ಬೀದರ್ : ನಗರದಲ್ಲಿ ಬೀದರ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ವತಿಯಿಂದ ಜುಲೈ 29ರಂದು ನಡೆಯಲಿರುವ ಪತ್ರಿಕಾ ದಿನಾಚರಣೆ ಉದ್ಘಾಟನೆಗೆ ಆಗಮಿಸುವಂತೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಆಮಂತ್ರಿಸಲಾಯಿತು.
ಸಚಿವ ಈಶ್ವರ ಖಂಡ್ರೆ ಅವರು ಆಮಂತ್ರಣಕ್ಕೆ ಒಪ್ಪಿ ಇದೇ ಜುಲೈ 29ರಂದು ನಡೆಯುವ ಪತ್ರಿಕಾ ದಿನಾಚರಣೆಗೆ ಬರುವುದಾಗಿ ಒಪ್ಪಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್ ಅವರನ್ನು ಸಹ ದಿನಾಚರಣೆಗೆ ಆಹ್ವಾನಿಸಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶ್ರೀ ಶಿವಾನಂದ ತಗಡೂರು ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿ ಅವರುಗಳು ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಯಕ್ರಮಕ್ಕೆ ಆಗಮಿಸುವದಾಗಿ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಬು ವಾಲಿ, ಪ್ರದಾನ ಕಾರ್ಯದರ್ಶಿ ಆನಂದ ದೇವಪ್ಪ, ಖಜಾಂಚಿ ಮಾಳಪ್ಪ ಅಡಸಾರೆ ಹಾಗು ಭಾರತೀಯ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಅಪ್ಪಾರಾವ್ ಸೌದಿ ಇದ್ದರು.

Ghantepatrike kannada daily news Paper

Leave a Reply

error: Content is protected !!