ಬೀದರ್

ಜುಲೈ 28 ಕ್ಕೆ ಸರಳ ಸಾಮೂಹಿಕ ವಿವಾಹ ಆಯೋಜನೆ

ಬುಧ್ದ ಬೆಳಕು ಸಾಮಾಜೀಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ , ಸಂವಿಧಾನ ಜಾಗೃತಿ ವೇದಿಕೆ,ಜ್ಞಾನ ಮಾರ್ಗ್ ಮಲ್ಟಿಪರ್ಪೋಸ್ ಸೊಸೈಟಿ ಹಾಗೂ ಬುಧ್ದ ಬಸವ ಅಂಬೇಡ್ಕರ್ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಸಂವಿಧಾನದ 75 ನೇ ಅಮೃತ ಮಹೋತ್ಸವ ಹಾಗೂ ಬುಧ್ದ ಬಸವ ಅಂಬೇಡ್ಕರ್ ರವರ ಜಯಂತ್ಯೋತ್ಸವ ನಿಮಿತ್ತ ಸರಳ ಸಾಮೂಹಿಕ ವಿವಾಹ ಆಯೋಜನೆ ಬೀದರನಲ್ಲಿ ಮಾಡಲಾಗುತ್ತಿದ್ದೆ.
ಸರಳ ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲು ಇಚ್ಛಿಸುವ ಪರಿಶಿಷ್ಟ ಜಾತಿ Sಅ ಹಾಗೂ ಪರಿಶಿಷ್ಟ ಪಂಗಡ Sಖಿ ಸಮುದಾಯದ ವಧು-ವರರು ದಿನಾಂಕ 25-7-2024 ರ ಒಳಗಾಗಿ ಹೆಸರು ನೊಂದಾಯಿಸಿಕೋಳ್ಳಲು ಕೋರಲಾಗಿದೆ, ಸರಳ ಸಾಮೂಹಿಕ ವಿವಾಹದಲ್ಲಿ ಮದುವೆಯಾದ ಜೋಡಿಗಳಿಗೆ ಕರ್ನಾಟಕ ಘನ ಸರ್ಕಾದ ವತಿಯಿಂದ Sಅ ಜೋಡಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 50 ಸಾವಿರ ರೂಪಾಯಿ ಧನ ಸಹಾಯ Sಖಿ ಜೋಡಿಗಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 50 ಸಾವಿರ ರೂಪಾಯಿ ಧನ ಸಹಾಯ ಮಂಜುರು ಮಾಡಿಸಲಾಗುವುದು.
ವರನ ವಯಸ್ಸು 21 ವಧುವಿನ ವಯಸ್ಸು ಕಡ್ಡಾಯವಾಗಿ 18 ಪೂರ್ಣಗೊಂಡಿರಬೇಕು
ವಧು-ವರರು ಪ್ರತ್ಯೇಕವಾಗಿ ಸಲ್ಲಿಸಬೇಕಾದ ದಾಖಲೆಗಳು
1) ಆಧಾರ ಕಾರ್ಡ್ 2)ಬಿ.ಪಿ.ಎಲ್ ರಾಷನ್ ಕಾರ್ಡ್ 3) ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್ ಅಥವಾ ವರ್ಗಾವಣೆ ಪ್ರಮಾಣ ಪತ್ರ ಅಥವಾ ಜನನ ಪ್ರಮಾಣ ಪತ್ರ 4) ಜಾತಿ ಮತ್ತು ಆದಾಯ ಪ್ರಮಾಣ ಪತ್ರ 5) ಪ್ಯಾನ್ ಕಾರ್ಡ್ 6) ಪಾಸ್ ಪೋರ್ಟ್ ಸೈಜ್ ಫೋಟೋ 2 ದೊಂದಿಗೆ ಮೈಲೂರನಲ್ಲಿ ಇರುವ ಬುಧ್ದ ಬೆಳಕು ಟ್ರಸ್ಟ್ ಕಛೇರಿಯಲ್ಲಿ ಸಲ್ಲಿಸಬೇಕಾಗಿರುತ್ತದೆ
ಹೆಚ್ಚಿನ ಮಾಹಿತಿಗಾಗಿ ಸರಳ ಸಾಮೂಹಿಕ ವಿವಾಹ ಆಯೋಜನೆ ಸಮಿತಿಯ ಮುಖ್ಯಸ್ಥರು ಹಾಗೂ ಬುಧ್ದ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ದೂರವಾಣಿ ಸಂಖ್ಯೆ 9945153539 ಗೆ ಸಂಪರ್ಕಿಸಲು ಕೋರಲಾಗಿದೆ

Ghantepatrike kannada daily news Paper

Leave a Reply

error: Content is protected !!