ಜುಲೈ೩೦ ಕೊನೆಯ ದಿನಾಂಕ – ಸೋಮಶೇಖರ ಹುಲ್ಲೋಳಿ
ಬೀದರ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಅಂದ್ರ ಜಿಟಿಟಿಸಿ ರಾಜ್ಯದ್ಯಂತ ೩೦ ಡಿಪ್ಲೋಮಾ ಕಾಲೇಜುಗಳು ಹಾಗೂ ೦೩ ಬಹು ಕೌಶಾಲ್ಯಾಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ. ಡಿಪ್ಲೋಮಾ, ಪೋಸ್ಟ್ ಡಿಪ್ಲೋಮಾ ಹಾಗೂ ಎಂ.ಟೆಕ್ ಕೋರ್ಸ್ಗಳನ್ನು ನಡೆಸುವ ಎಐಸಿಟಿಇ ಅನುಮೋದನೆಗೊಂಡ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರದ ಪ್ರಾಚಾರ್ಯರಾದ ಸೋಮಶೇಖರ ಹುಲ್ಲೋಳಿ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಪ್ರಸ್ತುತ ವರ್ಷ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೋಮಾ ಇನ್ ಎಲೆಕ್ಟಾçನಿಕ್ಸ್ ಮತ್ತು ಎಲೆಕ್ಟಿçಕಲ್ ಮತ್ತು ಡಿಪ್ಲೋಮಾ ಇನ್ ಆಟೋಮೇಶನ್ ಮತ್ತು ರೋಬೊಟಿಕ್ ಕೋರ್ಸ್ಗಳ ಪ್ರವೇಶ ಪ್ರಾರಂಭವಾಗಿವೆ ಎಂದು ತಿಳಿಸಿದರು.
೧೦ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಿದೆ. ಇನ್ನೂ ೪೦ ಪ್ರತಿಶತದಷ್ಟು ಪ್ರವೇಶ ಖಾಲಿ ಉಳಿದಿವೆ. ವಿದ್ಯಾರ್ಥಿ ವೇತನದ ಜೊತೆಗೆ ೧೦೦% ಉದ್ಯೋಗಾವಕಾಶ ನೀಡಲಾಗುವುದು. ಅಲ್ಲದೇ ಎಸ್‌ಎಸ್‌ಎಲ್‌ಸಿ ಪಿಯುಸಿ ಪದವಿ ಉತ್ತೀರ್ಣ ಹಾಗೂ ಅನುತ್ತಿರ್ಣರಾದ ವಿದ್ಯಾರ್ಥಿಗಳು ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಜಿಟಿಟಿಸಿ ಯಲ್ಲಿರುವ ಉದ್ಯಮ ಆಧಾರಿತ ವೃತ್ತಿಪರ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯೋಗಾವಕಾಶಗಳನ್ನು ಒದಗಿಸಿ ಅವರನ್ನು ಸ್ವಾವಲಂಬಿಗಳಾಗಿ ಮಾಡುವ ಉದ್ದೇಶದ ಹಿನ್ನೆಲೆಯಲ್ಲಿ ಕೌಶಲ್ಯ ತರಬೇತಿಗಳ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹುಲ್ಲೋಳಿ ತಿಳಿಸಿದರು.
ಜಿಟಿಟಿಸಿ ಹುಮನಾಬಾದ ಕೇಂದ್ರದಲ್ಲಿ ಎಲೆಕ್ಟಿçಕಲ್ ಹಾಗೂ ಎಲೆಕ್ಟಾçನಿಕ್ಸ್ ಹಾಗೂ ಆಟೋಮೇಶನ್ ಮತ್ತು ರೋಬೊಟಿಕ್ ಕೋರ್ಸ್ಗಳ ಉಳಿದ ಸೀಟುಗಳ ಹಂಚಿಕೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜುಲೈ ೩೧ ಕೊನೆಯ ದಿನಾಂಕವಾಗಿದೆ. ೧೦ನೇ ತರಗತಿ ಪಾಸಾದ ಮತ್ತು ಪಿಯುಸಿ ಫೇಲಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇಲ್ಲಿ ಆಯ್ಕೆಯಾದರೆ ಶೇ. ೭೦ ಪ್ರತಿಶತ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಮೊದಲನೇ ವರ್ಷ ೩೧,೦೦೦ ಶುಲ್ಕ, ಎರಡನೇ ಹಾಗೂ ಮೂರನೇ ವರ್ಷ ೨೫ ಸಾವಿರದಂತೆ ಶುಲ್ಕವಿರುತ್ತದೆ. ಅಲ್ಲದೇ ಪ್ರತಿ ವರ್ಷ ೨೭,೫೦೦ ವಿದ್ಯಾರ್ಥಿವೇತನ ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಸುಸಜ್ಜಿತ ಕೋಣೆಗಳು, ಹಾಸ್ಟೇಲ್ ವ್ಯವಸ್ಥೆ, ಸೆಕ್ಯುರಿಟಿ ಗಾರ್ಡ್, ಸಿಸಿಟಿವಿ ಅಳವಡಿಕೆ, ಗ್ರಂಥಾಲಯ, ಪ್ರಯೋಗಾಲಯ ವ್ಯವಸ್ಥೆಯಿದೆ. ಹುಡುಗಿಯರಿಗೆ ಶೇ. ೩೩ ಪ್ರತಿಶತ ಮೀಸಲಾತಿಯಿದೆ. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸರ್ಕಾರವು ಜಿಟಿಟಿಸಿ ಕೇಂದ್ರ ಸ್ಥಾಪಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾಚಾರ್ಯರಾದ ಸೋಮಶೇಖರ ಹುಲ್ಲೋಳಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಇದೇ ವೇಳೆ ಇಂಜಿನಿಯರ್ ಶಿವರಾಜ ಮೇತ್ರೆ, ತರಬೇತಿದಾರರಾದ ಮಹಾನಂದ ಭರಶೆಟ್ಟಿ, ಸಿಬ್ಬಂದಿ ಸಿದ್ಧಲಿಂಗೇಶ್ವರ ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.